ವಿಜಯನಗರ ಜಿಲ್ಲೆ ಕೂಡ್ಲಿಗಿ: ಪಟ್ಟಣ ಸೇರಿದಂತೆ ತಾಲೂಕಿನಾಧ್ಯಂತ, ಪತ್ರಿಕಾರಂಗದ ಮೂಲಕ ಸಮಾಜ ಸೇವೆಯಲ್ಲಿ ಸಕ್ರೀಯವಾಗಿ ತೊಡಗಿಸಿಕೊಂಡಿರುವ ತಮಗೆ. ಸುಸಜ್ಜಿತ ನಿವೇಶನದೊಂದಿಗೆ ವಸತಿ ಕಲ್ಪಿಸಬೇಕು, ಹಾಗೂ ಪಟ್ಟಣದಲ್ಲಿ ಪತ್ರಿಕಾ ಭವನವನ್ನು ನಿರ್ಮಿಸಬೇಕೆಂದು. ಕ್ಷೇತ್ರದ ಶಾಸಕರಾದ ಡಾ॥ ಎನ್.ಟಿ. ಶ್ರೀನಿವಾಸ್ ರವರಿಗೆ, ಕರ್ನಾಟಕ ಪತ್ರಕರ್ತರ ಸಂಘ (ರಿ)ದ ಪದಾಧಿಕಾರಿಗಳು ಅಹವಾಲು ಪತ್ರ ನೀಡಿದ್ದಾರೆ. ದಲಿತ ಹೋರಾಟಗಾರ ಹಿರಿಯ ಪತ್ರಕರ್ತ ಹಾಗೂ ಸಂಘಟನೆಯ ಗೌರವಾಧ್ಯಕ್ಷರಾದ, ಸಿದ್ದಾಪುರ ಡಿ.ಎಮ್.ಈಶ್ವರಪ್ಪ. ಮತ್ತು ಸಂಘಟನೆಯ ತಾಲೂಕಾಧ್ಯಕ್ಷ ಬಡಿಗೇರ ನಾಗರಜ ನೇತೃತ್ವದಲ್ಲಿ. ಪತ್ರಕರ್ತರು ಇತ್ತೀಚೆಗೆ ಶಾಸಕರನ್ನು ಭೇಟಿಯಾಗಿ, ಅವರಿಗೆ ತಮ್ಮ ಅಹವಾಲು ಪತ್ರ ಸಲ್ಲಿಸಿದ್ದಾರೆ. ಪತ್ರದ ಸಾರಾಂಶ- ಕೂಡ್ಲಿಗಿ ತಾಲೂಕಿನ ಎಲ್ಲಾ ಪತ್ರಿಕಾ ರಂಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮಸ್ತ ಸಕ್ರೀಯ ವರದಿಗಾರರಿಗೆ, ಸರ್ಕಾರದ ವಿವಿದ ಯೋಜನೆಯಡಿಯಲ್ಲಿ ನಿವೇಶನದೊಂದಿಗೆ ವಸತಿ ಕಲ್ಪಿಸಬೇಕು. ಕೂಡ್ಲಿಗಿ ಪಟ್ಟಣದಲ್ಲಿ ಸಮಸ್ತ ಪತ್ರಕರ್ತರಿಗೆ ಅನುಕೂಲವಾಗುವಂತಹ, ಪತ್ರಿಕಾ ಭವನವನ್ನು ನಿರ್ಮಿಸಿಕೊಡಬೇಕೆಂದು ಶಾಸಕರಲದಲ್ಲಿ ಕೋರಲಾಗಿದೆ. ಈ ಸಂದರ್ಭದಲ್ಲಿ ಬಿಸಿಲು ನಾಡು ಪತ್ರಿಕೆ ಸಂಪಾದಕ ಜಿ.ಟಿ.ರಾಜಶೇಖರ್ ಶಾಸಕರೊಂದಿಗೆ ಮಾತನಾಡಿ, ಈ ಹಿಂದೆಲ್ಲಾ ಅನೇಕ ಬಾರಿ ಆಗಿನ ಶಾಸಕರುಗಳಿಗೆ, ಇದೇ ರೀತಿ ಅಹವಾಲುಗಳನ್ನು ನೀಡಲಾಗಿದೆ ಯಾದರೂ ಪ್ರಯೋಜನವಾಗಿಲ್ಲ. ಈ ಬಾರಿಯಾದರೂ ತಮ್ಮಿಂದ ನಿರಂತರವಾಗಿ ಪತ್ರಿಕಾ ರಂಗದಲ್ಲಿ ತಾಲೂಕಿನಲ್ಲಿ ಎಲ್ಲಾ ರೀತಿಯ ಸುದ್ದಿಗಳನ್ನು ಪ್ರಸಾರ ಮಾಡುತ್ತಿರುವಂತಹ, ಸ್ಥಳೀಯ ಪತ್ರಿಕೆಗಳ ವರದಿಗಾರರ ಹಿತಕ್ಕಾಗಿ. ಸರ್ಕಾರದಿಂದ ನಿವೇಶನ ಸಹಿತ ವಸತಿ ಹಾಗೂ ಪತ್ರಿಕಾ ಭವನವನ್ನು ಕಲ್ಪಿಸುವಂತೆ ಮನವಿ ಮಾಡಿದರು. ಅಹವಾಲು ಪತ್ರ ಸ್ವೀಕರಿಸಿದ ನಂತರ ಶಾಸಕರಾದ ಡಾ॥ಎನ್.ಟಿ.ಶ್ರೀನಿವಾಸ್ ರವರು ಪತ್ರಕರ್ತರನ್ನುದ್ಧೇಶಿಸಿ ಮಾತನಾಡಿದರು, ಕ್ಷೇತ್ರದಲ್ಲಿ ತಾವು ಶಾಸಕರಾಗಿ ಗೆಲ್ಲುವುದಕ್ಕೆ, ಸ್ಥಳೀಯ ಪತ್ರಿಕೆಗಳ ಹಾಗೂ ಯೂಟ್ಯೂಬ್ ಚಾನಲ್ ಗಳು. ವಿಶೇಷ ಪ್ರೀತಿ ಹಾಗೂ ಕಾಳಜಿ ತೋರಿ ಪ್ರಚಾರ ನೀಡಿ ಸಹಕರಿಸಿದ್ದು, ವಾಸ್ತವಾಂಶವುಳ್ಳ ಉತ್ತಮವಾದ ಸುದ್ದಿಗಳನ್ನು ಮಾಡಿ ಜನರಲ್ಲಿ ತಮ್ಮ ಬಗ್ಗೆ ಗೌರವ ವಿಶೇಷ ಪ್ರೀತಿ ಅಭಿಮಾನ ಬಿತ್ತಿದ್ದು. ತಮ್ಮ ಅಭೂತ ಪೂರ್ವ ಭಾರೀ ಬಹುಮತದ ಗೆಲುವಿಗೆ, ಚಿಕ್ಕ ಪತ್ರಿಕೆಗಳು ಹಾಗೂ ವೆಬ್ ಯೂಟ್ಯೂಬ್ ಮಾಧ್ಯಮಗಳ ಶ್ರಮಿಸಿವೆ. ಕಾರಣ ಚಿಕ್ಕ ಸ್ಥಳೀಯ ಪತ್ರಿಕೆಗಳ ಹಾಗೂ ವೆಬ್ ಯ್ಯೂಟೂಬ್ ಮೀಡಿಯಾಗಳ, ಎಲ್ಲಾ ಪತ್ರಕರ್ತರ ಬಗ್ಗೆ ಅವರು ಸಂತಸ ವ್ಯಕ್ತಪಡಿಸಿದರು. ಸರ್ಕಾರದಿಂದ ಒದಗಿಸಬಹುದಾದ ಎಲ್ಲಾ ಸೌಲಭ್ಯಗಳನ್ನು, ಸಮರ್ಪಕವಾಗಿ ಒದಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕವಾಗಿ ಪ್ರಯತ್ನ ಮಾಡುವುದಾಗಿ ಅವರು ಭರವಸೆ ನೀಡಿದರು. ತಹಶಿಲ್ದಾರರಿಗೆ ಪತ್ರ- ತಮಗೆ ನಿವೇಶನ ಸಹಿತ ವಸತಿ ಸೌಕರ್ಯ ಹಾಗೂ ಪತ್ರಿಕಾ ಭವನ ನಿರ್ಮಾಣಕ್ಕಾಗಿ, ಸರ್ಕಾರದಿಂದ ಕಲ್ಪಿಸುವಂತೆ ಕ್ರಮಕ್ಕಾಗಿ ಪತ್ರಕರ್ತರು. ತಹಶೀಲ್ದಾರ್ ರಾ ದ ಟಿ.ಜಗದೀಶ್ ರವರೆಗೆ, ತಮ್ಮ ಅಹವಾಲು ಪತ್ರವನ್ನು ಪತ್ರಕರ್ತರು ನೀಡಿದರು. ಕರ್ನಾಟಕ ಪತ್ರಕರ್ತರ ಸಂಘಟನೆಯ ರಾಜ್ಯ ಸದಸ್ಯ ಹಾಗೂ ವಿಜಯನಗರ ಜಿಲ್ಲಾಧ್ಯಕ್ಷ ಕೆ.ಎಸ್. ಮುರುಳಿಧರಶೆಟ್ಟಿ. ತಾಲೂಕು ಕಾರ್ಯದರ್ಶಿ ಹಾಗೂ ದಲಿತ ಹೋರಟಗಾರ ಸಾಲುಮನಿ ರಾಘವೇಂದ್ರ, A2Zವಾಹಿನಿ ವರಿದಿಗಾರ ಮೀನುಕೇರಿ ತಿಪ್ಪೇಸ್ವಾಮಿ. ಹೊಸ ದಿಗಂತ ಪತ್ರಿಕೆಯ ಪತ್ರಿಕೆ ಹಾಗೂ ಪಬ್ಲಿಕ್ ವೈಬ್ ನ ವರದಿಗಾರ ಹೂಡೇಂ ಮಂಜುನಾಥ, ವಿಶ್ವ ದರ್ಶನ ದಿನಪತ್ರಿಕೆಯ ವರದಿಗಾರ ಹಿರೇ ಹೆಗ್ಡಾಳು ಬಣಕಾರ ಮೂಗಪ್ಪ ಸೇರಿದಂತೆ ಮತ್ತಿತರ ಪತ್ರಕರ್ತರಿದ್ದರು. ತಾಲೂಕಾಢಳಿತದಿಂದ ಸ್ಪಂಧನೆ- ಪತ್ರಕರ್ತರು ನೀಡಿರುವ ಅಹವಾಲು ಪತ್ರಕ್ಕೆ, ತಾಲೂಕಾಢಳಿತದಿಂದ ತಮಗೆ ಸಕಾರಾತ್ಮಕ ಸ್ಪಂಧನೆ ಸಿಕ್ಕಿದ್ದು. ಅಹವಾಲು ಈಡೇರಿಕೆಗೆ ಅಗತ್ಯ ಸಹಕಾರ ಕೋರಿ ಜಿಲ್ಲಾಧಿಕಾರಿಗಳವರಲ್ಲಿ, ತಾಲೂಕಾಢಳಿತದಿಂದ ಮನವಿ ಮಾಡಿರುವುದಾಗಿ. ತಹಶಿಲ್ದಾರವರ ಕಛೆೇರಿಯಿಂದ ತಮ್ಮ ಸಂಘಟನೆಗೆ, ಉಲ್ಲೇಖಿತ ಪತ್ರದ ಪ್ರತಿ ನೀಡಿರುವುದಾಗಿ ಪತ್ರಕರ್ತರು ತಿಳಿಸಿದ್ದಾರೆ.
ವರದಿ✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ.