ವಿಜಯನಗರ ಜಿಲ್ಲೆ ಕೂಡ್ಲಿಗಿ: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಕೂಡ್ಲಿಗಿ ತಾಲ್ಲೂಕು ಘಟಕದಿಂದ ಜು31ರಂದು ಪತ್ರಿಕಾ ದಿನಾಚರಣೆ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮ ಪಟ್ಟಣದ ಹಿರೇಮಠ ಮಂಗಲ ಮಂದಿರದಲ್ಲಿ ಏರ್ಪಡಿಸಲಾಗಿತ್ತು, ಡಾ॥ಎನ್.ಟಿ.ಶ್ರೀನಿವಾಸ್ ರವರು ಕಾರ್ಯಕ್ರಮದಲ್ಲಿ ಪಾಲ್ಗೊಂಡು ಉದ್ಘಾಟಿಸಿ ಮಾತನಾಡಿದರು. ಕರ್ನಾಟಕದ ಕೂಡ್ಲಿಗಿ ಮತ ಕ್ಷೇತ್ರದಿಂದ ಮೊದಲ ಬಾರಿಗೆ ನಾನು ರಾಜಕೀಯಕ್ಕೆ ಪ್ರವೇಶಿಸಿರುವುದನ್ನು, ಪರಿಚಯ ಮಾಡಿಕೊಟ್ಟವರಲ್ಲಿ ಮೊದಲಿಗರು ದಿವಂಗತ ಪತ್ರಕರ್ತರಾದ ಹಿ.ಮ. ಬಸವರಾಜರವರು. ಅವರನ್ನು ನಾನು ಸದಾ ನೆನಪಿಸಿಕೊಳ್ಳುತ್ತೇನೆಂದು, ಶಾಸಕರು ಹೇಳಿದರು, ಕಡಿಮೆ ಸಮಯದಲ್ಲಿ ಹೆಚ್ಚು ಮತಗಳ ಅಂತರದಿಂದ ಗೆದ್ದು ಶಾಸಕರಾಗಿರುವುದರಿಂದ, ರಾಷ್ಟ್ರೀಯ ಮಾಧ್ಯಮಗಳು ನನ್ನನ್ನೂ ಪರಿಚಯಿಸಲು ಆಹ್ವಾನಿಸಿರುವುದು ಸಂತೋಷದ ವಿಷಯ ಎಂದೂ ಹೇಳಿದರು. ಅಭಿವೃದ್ಧಿ ಪರ ಕೆಲಸ ಕಾರ್ಯಗಳ ನಡುವೆ ನನ್ನ ಸರಿ- ತಪ್ಪುಗಳನ್ನು ಪತ್ರಕರ್ತರು ಗುರುತಿಸಬೇಕಾಗಿದೆ, ಆ ಮೂಲಕ ಮೌಲ್ಯಮಾಪನ ಮಾಡಿ ಕ್ಷೇತ್ರದ ಏಳಿಗೆಗಾಗಿ ಮಾರ್ಗದರ್ಶನ ಮಾಡಬೇಕು ಎಂದರು. ಕೂಡ್ಲಿಗಿ ಭಾಗದ ಪತ್ರಕರ್ತರ ಪ್ರಮುಖ ಬೇಡಿಕೆಯಾದ, ಪತ್ರಿಕಾ ಭವನ ಕಟ್ಟಡ ನಿರ್ಮಾಣಕ್ಕಾಗಿ. ಸರ್ಕಾರದಿಂದ 10ಲಕ್ಷ₹ಗಳನ್ನು ಮೀಸಲು ಇಡುತ್ತೇನೆ ಎಂದು, ಶಾಸಕರು ಈ ಸಂದರ್ಭದಲ್ಲಿ ಘೋಷಿಸಿದರು. ಕೂಡ್ಲಿಗಿ ಹಿರೇಮಠದ ಷ.ಬ್ರ.ಶ್ರೀ ಪ್ರಶಾಂತಸಾಗರ ಸ್ವಾಮೀಜಿ , ಹಾಗೂ ಕಾನಾಮಡಗು ಶ್ರೀ ಐಮಡಿ ಶರಣಾರ್ಯರು ವೇದಿಕೆ ಸಾನಿಧ್ಯ ವಹಿಸಿದ್ದರು. ಸಂಘಟನೆ ಜಿಲ್ಲಾಧ್ಯಕ್ಷರು ಹಾಗೂ ಜಿಲ್ಲಾ ಘಟಕದ ಸಂಘಟನೆಯ ಪದಾಧಿಕಾರಿಗಳು. ತಾಲೂಕು ಘಟಕದ ಅಧ್ಯಕ್ಷ ಮಯೂರ ಮಂಜುನಾಥ ಸೇರಿದಂತೆ ಪದಾಧಿಕಾರಿಗಳು, ಗಣ್ಯರು, ವಿವಿದ ಜನಪ್ರತಿನಿಧಿಗಳು, ವಿವಿದ ಸಂಘ ಸಂಸ್ಥೆಗಳ ಪದಾಧಿಕಾರಿಗಳು. ಹಿರಿಯ ಪತ್ರಕರ್ತರು ವೇದಿಕೆಯಲ್ಲಿದ್ದರು. ವಿವಿದ ಕ್ಷೇತ್ರಗಳಲ್ಲಿ ಗಣನೀಯ ಸೇವೆಸಲ್ಲಿಸಿದ ಗಣ್ಯರನ್ನು ಸನ್ಮಾನಿಸಲಾಯಿತು. ಪಟ್ಟಣ ಸೇರಿದಂತೆ ತಾಲೂಕಿನ ನೆರೆ ಹೊರೆ ತಾಲೂಕುಗಳಿಂದ ಆಗಮಿಸಿದ್ದ, ಪತ್ರಕರ್ತರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ತಾಲೂಕು ಮಟ್ಟದ ವಿವಿದ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು, ಪಟ್ಟಣದ ವಿವಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಇದ್ದರು.
ವರದಿ-✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ.