ಬೆಂಗಳೂರು: ಆ 1, ಇಂಡಿಯನ್ ಬುಕ್ ಆಫ್ ರೆಕಾರ್ಡ್ಸ್ ವತಿಯಿಂದ ಜೂಲೈ 10 ರಂದು ದೇಶದ ಹಲವಾರು ಭಾಗಗಳಿಂದ 10 ವರ್ಷದೊಳಗಿನ ಮಕ್ಕಳಿಗೆ ಹಮ್ಮಿಕೊಂಡಿದ್ದ “ಭಾರತೀಯ ಸಾಂಪ್ರದಾಯಿಕ ಅಲಂಕಾರಿಕ ಉಡುಗೆ ಡ್ರೈವ್” ಕಾರ್ಯಕ್ರಮದಲ್ಲಿ ಬಳ್ಳಾರಿ ಜಿಲ್ಲೆಯ ಕಂಪ್ಲಿ ನಗರದ ನಿವಾಸಿ ಕರ್ನಾಟಕ ಹೈ ಕೋರ್ಟ್ ನ ಕೇಂದ್ರ ಸರ್ಕಾರಿ ವಕೀಲರಾದ ಮೋಹನ್ ಕುಮಾರ್ ದಾನಪ್ಪ ಇವರ ಪುತ್ರಿ ದಿಶಾ ಮೋಹನ್ (5 ವಯಸ್ಸು) ಭಾಗವಹಿಸುವ ಮೂಲಕ ಇಂಡಿಯನ್ ಬುಕ್ ಆಫ್ ರೆಕಾರ್ಡ್ (ಭಾರತೀಯ ದಾಖಲೆ ಪುಸ್ತಕ)ಗೆ ಸೇರಿದ್ದಾರೆ,
ಪ್ರಸ್ತುತ ದಿಶಾ ಮೋಹನ್ ಬೆಂಗಳೂರಿನ ಜೆ ಡಿ ಬಿ ಈ ಶಾಲೆಯಲ್ಲಿ ಎಲ್ ಕೆ ಜಿ ವಿಧ್ಯಾಭ್ಯಾಸ ಮಾಡುತ್ತಿರುತ್ತಾಳೆ,
ಕಾರ್ಯಕ್ರಮವು ಭಾರತೀಯ ಸಾಂಪ್ರದಾಯಿಕ ಅಲಂಕಾರಿಕ ಉಡುಗೆ ತೊಡುವ ಸ್ಪರ್ಧೆಯಾಗಿದ್ದು 12006 ಸ್ಪರ್ಧಾಳುಗಳು ಭಾಗವಹಿಸಿದ್ದು ಇಂಡಿಯನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಗೆ ಸೇರಿರುತ್ತದೆ.
ವಿಶ್ವದ ಅತಿ ದೊಡ್ಡ ಫ್ಯಾನ್ಸಿ ಡ್ರೆಸ್ ಡ್ರೈವ್‌ನಲ್ಲಿ ಭಾಗವಹಿಸಿ ವಿಶೇಷವಾದ ಅಚಲವಾದ ಬದ್ಧತೆಯನ್ನು ಹೊಂದಿರುವ ದಿಶಾ ಮೋಹನ್ ಅವರು ಸ್ಫೂರ್ತಿ, ಪ್ರೇರಣೆ ಉತ್ಸಾಹದಿಂದ ಸಾಧಿಸಿದ್ದಾರೆ ಅವರಿಗೆ ಶ್ಲಾಘನೆಗಳು,
ದಿಶಾ ಮೋಹನ್ ಭಾರತೀಯ ಸಂಪ್ರದಾಯದ ಭಾಗವಾಗಿದ್ದಾರೆಂದು ಸರ್ವೋಚ್ಚ ನ್ಯಾಯಾಲಯದ ವಕೀಲರಾದ ಡಾ. ಜಿ. ವಿ. ಎನ್. ಆರ್. ಎಸ್. ಎಸ್. ಎಸ್. ವರಪ್ರಸಾದ್ ಅವರು ತೀರ್ಪು ನೀಡಿದ್ದಾರೆಂದು ಭಾರತೀಯ ದಾಖಲೆಗಳ ಪುಸ್ತಕದ ಸಂಸ್ಥಾಪಕ ಸಂಪಾದಕರಾದ ಡಾ.ವಿವೇಕಾನಂದ ಬಾಬು ಕೆ ರವರು ಪ್ರಮಾಣ ಪತ್ರದಲ್ಲಿ ತಿಳಿಸಿರುತ್ತಾರೆ!
ವರದಿ-ಮಹೇಶ ಶರ್ಮಾ