ಯಾವ ಸರ್ಕಾರ ಬಂದ್ರೇನು ಗಂಟು/ಮುಟೆ ಕಟ್ಟಿಕೊಂಡು ವಲಸೆ ಹೋಗುತ್ತಿರುವ ಬಡವರ ಗೋಳಾಟ ಇನ್ನೂ ತಪ್ಪಿಲ್ಲ.

Spread the love

ಅಯ್ಯೋ ಮಾನುಷ್ಯನೆ ಯಾವ ಸರ್ಕಾರ ಬಂದರೇನು ಸ್ವತಂತ್ರ್ಯ ಬಂದು ಹಲವು ದಶಕಗಳು ಕಂಡರು ರೈತರ ಗೋಳಾಟ, ದಿನ ದಳಿತರ ಒದ್ದಾಟ, ಕೂಲಿ ಕಾರ್ಮಿಕರ ಪರದಾಟ ಇನ್ನೂ ತಪ್ಪಿಲ್ಲ. ರೈತರು, ಕೂಲಿ ಕಾರ್ಮಿಕರು  ಸಾಲದಲ್ಲಿ ಹುಟ್ಟಿ ಸಾಲದಲ್ಲಿ ಬದುಕಿ ಸಾಲದಲ್ಲಿ ಸಾಯುವ ಹಾಗಿದೆ, ಇಷ್ಟಲ್ಲಾದರೂ ಕಣ್ಣು ತರೇಯದ ಸರ್ಕಾರ, ಕಣ್ಣು ಮುಚ್ಚಿ ಕುಳಿತ ಜನಪ್ರತಿನಿಧಿಗಳು, ಹಾಗೂ ಸರ್ಕಾರದ ಕೆಲಸ ದೇವರ ಕೆಲಸವೆಂದು ಪ್ರಾಮಾಣ ವಚನ ಸ್ವೀಕರಿಸಿದ ಅಧಿಕಾರಿಗಳ ನಡೆ ಇನ್ನಡೆ ಯಾಕೆ, ಸರ್ಕಾರ ಕೂಲಿ ಕಾರ್ಮಿಕರಿಗಾಗಿ ನೂರೆಂಟು ಯೋಜನೆಗಳು ತಂದರು ಸದ್ಯ ಅವುಗಳು ಶೂನ್ಯವಲ್ಲವೆ. ಇತ್ತ ನರೇಗಾ ಯೋಜನಾಡಿಯಲ್ಲಿ ಒಂದು ಕುಟುಂಬಕ್ಕೆ ನೂರು ದಿನ ಕೆಲಸ ನೀಡುತ್ತೆವೆ ಎಂದು ರಾಜಾರೋಷವಾಗಿ ಪ್ರಚಾರ ಕೈಗೊಳ್ಳುವ ರಾಜಕೀಯ ನಾಯಕರು ಹಾಗೂ ಸರ್ಕಾರದ ಅಧೀನದಲ್ಲಿ ಕಾರ್ಯ ಮಾಡುವ ಸರ್ಕಾರಿ ನೌಕರರೆ ಇತ್ತ ಗಮನ ಹರಿಸಿ ಕೇಳಿ, ಒಬ್ಬ ಬಡ ಕೂಲಿ ಕಾರ್ಮಿಕ ದಿನ ಬೆಳಗಾದರೆ ಸಾಕು ಇವತ್ತಿನ ದಿವಸದ ಬದುಕು ಹೇಗೆ ಸಾಗಿಸಬೇಕೆಂದು ಚಿಂತಿಸುತ್ತಾನೆ. ಆದರೆ ಒಬ್ಬ ಜನ ಪ್ರತಿನಿಧಿ ಜೊತೆಗೆ ಸರ್ಕಾರಿ ನೌಕರ ಇವತ್ತು ಯಾವ ಯೋಜನೆಯಲ್ಲಿ ನಮಗೆ ಎಷ್ಟು ಅನುಧಾನ ಸಿಗುತ್ತೆ ಎಂಬ ಚಿಂತೆ ಅವರಿಗಿದೆ.

ಎನೇ ಇರಲಿ ವಲಸೆ ಕೂಲಿ ಕಾರ್ಮಿಕರು ಗಂಟುಮೂಟೆ ಕಟ್ಟಿಕೊಂಡು ನಮ್ಮ ಕೊಪ್ಪಳ ಜಿಲ್ಲೆಯಿಂದ ನಾನಾ ಗ್ರಾಮದ ಕೂಲಿ ಕಾರ್ಮಿಕರು ತಮ್ಮ ಕುಟುಂಬ ಸಹಿತ ಅಂದರೆ ಗಂಡ,ಹೆಂಡತಿ ಚಿಕ್ಕ ಚಿಕ್ಕ ಮಕ್ಕಳೊಂದಿಗೆ ಗಂಟು/ಮುಟೆ ಕಟ್ಟಿಕೊಂಡು ವಲಸೆ ಹೋಗುತ್ತಿರುವ ದೃಷ್ಯ ಕಣ್ಣಿಗೆ ಬಿದ್ದ ತಕ್ಷಣ ಹಾಗ ಮೊದಲಿಗೆ ನೆನಪಾಗಿದ್ದು ಸರ್ಕಾರ. ಹೌದು ಯಾವ ಸರ್ಕಾರ ಬಂದರೇನು ಕೂಲಿ ಕಾರ್ಮಿಕರು ಗಂಟು/ಮುಟೆ ಕಟ್ಟಿಕೊಂಡು ವಲಸೆ ಹೋಗುವುದನ್ನು ಇನ್ನೂ ತಪ್ಪಿಲ್ಲ. ಜೊತೆಗೆ ಯಾವ ಜನಪ್ರಿಯ ನಾಯಕರು ಬಂದರು ಸಹ ಇವರ ಗೋಳಾಟ ಕ್ಷಣಿಕ ಮಾತ್ರ ಕೇಳಿ ಕೈತೋಳೆದುಕೊಳ್ಳುವ ನಾಯಕರೆ ಜಾಸ್ತಿ. ಇಂದು ಮದ್ಯಾಹ್ನದಿಂದ ತಾವರಗೇರಾ ಪಟ್ಟಣದ ಮುಖ್ಯ ರಸ್ತೆಗೆ ಈ ಗೂಳೆ ವರಟುತ್ತಿರುವ ದೃಶ್ಯ ಕಂಡುಬಂತ್ತು, ನಮ್ಮ ಕೊಪ್ಪಳ ಜಿಲ್ಲೆಯಿಂದ ಈ ಗೂಳೆ ಹೊರಟಿರುವ ಜನರು, ನೇರವಾಗಿ ಯಾದಗಿರಿ ಜಿಲ್ಲಾ ಮತ್ತು ರಾಯಚೂರು ಜಿಲ್ಲೆಯ ಕಡೆ ಮೂಖ ಮಾಡಿ ಹೊರಟಿರುತ್ತಾರೆ. ಇವರುಗಳು ಬೇರೆ ಯಾವ ಜಿಲ್ಲೆಯವರು ಅಲ್ಲಾ ಸ್ವಾಮಿ. ಅದು ನಮ್ಮ ಜಿಲ್ಲೆಯವರೆ, ನಮ್ಮ ಜಿಲ್ಲೆಯವರೆ ಎಂದು ಹೇಳೋಕೆ ನಮಗೆ ನಾಚಿಕೆ ಬರುತ್ತೆ. ಇರಲಿ ನಮ್ಮ ಸರ್ಕಾರದ ಬಗ್ಗೆ ಮತ್ತು ಜನ ಪ್ರತಿ ನಿಧಿಗಳ ಬಗ್ಗೆ ಹೇಳೊಕೆ ನಮಗೇಕೆ ನಾಚಿಕೆ ಅಲ್ವೇ. ಇಲ್ಲಿಯವರೆಗೂ ಯಾವ ಸರ್ಕಾರ ಆಗಲಿ ಅಥವಾ ಯಾವ ಜನ ಪ್ರತಿ ನಿದಿಯಾಗಲಿ ಬಡ/ಬಗ್ಗರ ಏಳಿಗೆಗಾಗಿ ಶ್ರಮಿಸಿದವರು ಕೇವಲ ನೀರಕ್ಕೆ ಹತ್ತರಷ್ಟು ಮಾತ್ರ ಅಲ್ವಾ ಇರಲಿ ನಮ್ದೆ ಸರ್ಕಾರ ನಾವೆ ಆಯ್ಕೆ ಮಾಡಿ ಕಳಿಸಿದ ಜನಪ್ರಿಯ ನಾಯಕರೆ ಇತ್ತ ಗಮನ ಹರಿಸಿ ದಿನ ಗೂಲಿಗಾಗಿ ವಲಸೆ ಹೋಗುತ್ತಿರುವ ಕುಟುಂಬಗಳ ಬಗ್ಗೆ ಸಂಪೂರ್ಣ ತನಿಖೆ ಕೈಗೊಳ್ಳಿ ಸಂಬಂದಪಟ್ಟ ಗ್ರಾಮ ಪಂಚಾಯತಿಗಳಿಗೆ ನರೇಗಾ ಯೋಜನಾಡಿಯಲ್ಲಿ ಉದ್ಯೋಗ ನೀಡುವ ವ್ಯವಸ್ತೆ ಕಲ್ಪಿಸಿ, ಸರಿಯಾದ ಸಮಯಕ್ಕೆ ಅವರ (ಕೂಲಿ ಕಾರ್ಮಿಕರ) ಬೇವರು ಹಾರುವ ಮೊದಲೆ ಅವರ ವೇತನ ಅವರ ಕೈಗೆ ಸಿಗುವ ಹಾಗೆ ವ್ಯವಸ್ತೆ ಮಾಡಿ ಪುಣ್ಯ ಕಟ್ಟಿಕೊಳ್ಳಿ, ಮುಂದಿನ ದಿನಮಾನದಲ್ಲಿ ಅವರ ದೃರಾದೃಷ್ಟಕ್ಕೆ ದುಡಿಯಲು ಹೋದಾಗ ಏನಾದರೂ ಹೆಚ್ಚು ಕಮ್ಮಿ ಅನಾಹುತ ಆದರೆ ನಮ್ಮ ಜಿಲ್ಲೆಯದ್ದೆ ಮಾರ್ಯಾದೆ ಹೋಗುವುದು, ದಯವಿಟ್ಟು ನಮ್ಮ ಜಿಲ್ಲೆ ನಮ್ಮ ಹೆಮ್ಮೆಯಿದೆ, ನಮ್ಮನ್ನಾಳುವ ನಾಯಕರ ಮೇಲೆ ನಮಗೆ ಸಂಪೂರ್ಣ ವಿಶ್ವಾಸವಿದೆ, ದಯವಿಟ್ಟು ಆ ವಿಶ್ವಾಸಕ್ಕೆ ದಕ್ಕೆ ತರುವಂತೆ ಮಾಡಿಕೊಳ್ಳಬೇಡಿ ಎಂದು ಸಾರ್ವಜನಿಕರ ಫರವಾಗಿ, ದಿನ ದಲಿತರ ದ್ವನಿಯಾಗಿ, ಕೂಲಿ ಕಾರ್ಮಿಕರ ಪರವಾಗಿ ಈ ಒಂದು ಕೀರು ಮನವಿ ಮಾಡಿಕೊಳ್ಳುತ್ತಿದ್ದೆವೆ,

ವರದಿ-ಸಂಪಾದಕೀಯಾ.

Leave a Reply

Your email address will not be published. Required fields are marked *