ಜುಮಲಾಪುರ ಸರ್ಕಾರಿ ಶಾಲೆಯಲ್ಲಿ ಅಚ್ಚು ಮೆಚ್ಚಿನ ಶಿಕ್ಷಕರ ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಬಿಕ್ಕಿ ಬಿಕ್ಕಿ ಅತ್ತ ಶಾಲಾ ಮಕ್ಕಳು.

Spread the love

ಜುಮಲಾಪುರ ಶಾಲೆಯಲ್ಲಿ ಅಚ್ಚು ಮೆಚ್ಚಿನ ಶಿಕ್ಷಕ ಶಿಕ್ಷಕಿಯರು ಬೀಳ್ಕೊಡುಗೆ ಕಾರ್ಯಕ್ರಮದಲ್ಲಿ ಬಿಕ್ಕಿ ಬಿಕ್ಕಿ ಅತ್ತ  ಶಾಲಾ ಮಕ್ಕಳು. ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಜಮಲಾಪೂರ ಶಾಲೆಯ ಸಹ ಶಿಕ್ಷಕರಾದ ಶ್ರೀಯುತ ನಂದಬಸಪ್ಪ ಶಿಕ್ಷಕರು    ಹಾಗೂ ಶ್ರೀಮತಿ ಕಸ್ತೂರಿ ಕೆಂಚರೆಡ್ಡ ಶಿಕ್ಷಕಿಯರು  ಈ ಇಬ್ಬರು ಸಹಶಿಕ್ಷಕರು GMHPS ಜುಮಲಾಪುರ ಶಾಲೆಯಿಂದ ಬೇರೊಂದು ಶಾಲೆಗೆ ವರ್ಗಾವಣೆಗೊಂಡ ಕಾರಣ. ದಿನಾಂಕ 03-08-2023 ಗುರುವಾರ ಈ ದಿನದಂದು ಶಾಲಾ ಆವರಣದಲ್ಲಿ ಬೀಳ್ಕೊಡುಗೆ ಸಮಾರಂಭವನ್ನು  ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದಲ್ಲಿ ಮಕ್ಕಳ ಬಿಕ್ಕಿ ಬಿಕ್ಕಿ ಅಳುತ್ತಿರುವ ದೃಶ್ಯ ನೋಡಿ  ವೇದಿಕೆ ಮೇಲೆ ಇರುವ ಎಲ್ಲಾ ಗಣ್ಯರ ಕಣ್ಣುಗಳು ಒದ್ದೆಯಾಗಿರುವ ಘಟನೆ ನಡೆಯಿತು SDMC ಅಧ್ಯಕ್ಷರಾದ ಶ್ರೀಯುತ ಬಸವರಾಜ ಬಡಿಗೇರ ಅವರು ಆದ್ಯಕ್ಷತೆ ವಹಿಸಿದ್ದರು..ಹಾಗೂ ಶಾಲೆಯ ಮುಖ್ಯ ಗುರುಮಾತೆಯರಾದ ಶೀಮತಿ ಗುರುಪಾದಮ್ಮ ಭಂಡಾರಿ ಮೇಡಮ್ ಹಾಗೂ ವಿಶೇಷ ಅತಿಥಿಗಳಾಗಿ  ಶ್ರೀಯುತ ಹಂಪಣ್ಣ ಗುಡುದೂರು ನಿವೃತ್ತ ಶಿಕ್ಷಕರು  ಆಗಮಿಸಿದ್ದರು. ಹಾಗೆಯೇ ಶಾಲೆಯ  ಎಲ್ಲಾ ಸಹಶಿಕ್ಷಕರು SDMC ಸದಸ್ಯರು ಹಾಗೂ ಗ್ರಾಂ .ಪಂ.ಸದಸ್ಯರು.  ಪತ್ರಕರ್ತರಾದ ಶ್ರೀ ಅಮಾಜಪ್ಪನವರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಊರಿನ ಹಿರಿಯರು ,ಪಾಲಕರು, ಹಳೆಯ ವಿದ್ಯರ್ಥಿಗಳು,ಹಾಗೂ ಶಾಲಾ ಮಕ್ಕಳು ಭಾಗಿಯಾಗಿದ್ದರು. ಈ ಕಾರ್ಯಮದ ಪ್ರಾಸ್ತಾವಿಕ ನುಡಿಯನ್ನು ಮೌನೇಶ್ A ಮಾಲಿಪಾಟೀಲ್ ಹೇಳಿದರು. ಶಾಲಾ ಬಾಲಕಿಯರಾದ ಪಲ್ಲವಿ A. ಪೂಜಾಶ್ರೀ, ಅನ್ನಪೂರ್ಣ,ಅನುಷಾ ಈ ನಿಷ್ಕಲ್ಮಷ ಮನಸ್ಸುಳ್ಳ ಮುದ್ದು ವಿದ್ಯಾರ್ಥಿಗಳೂ ಕಣ್ಣಂಚಲ್ಲಿ ನೀರು ಸುರಿಸುತ್ತಾ ತಮ್ಮ ಹಚ್ಚುಮೆಚ್ಚಿನ ಶಿಕ್ಷಕರು ನಮ್ಮನ್ನು ಬಿಟ್ಟು ಹೋಗುತ್ತಿದ್ದಾರೆ ಎಂದು ದುಃಖದಿಂದ ಮಾತನಾಡಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರುಮೌನೇಶ ಅತಿಥಿ ಶಿಕ್ಷಕರು: ಸಹ ಶಿಕ್ಷಕರಾದ ಶ್ರೀಮತಿ ನಾಗರತ್ನಮ್ಮಬಿಜಿ, ಶ್ರೀಮತಿ ಅನಿತಾ HM , ಶ್ರೀಮತಿ ರುಖಾಯ ಬೇಗಂ ಈ ಎಲ್ಲಾ ಶಿಕ್ಷಕರು ಜೊತೆಗೂಡಿ ಹಲವು ವರ್ಷ ಒಂದೇ ಶಾಲೆಯಲ್ಲಿ ಕಾರ್ಯ ನಿರ್ವಹಿಸಿದ್ದು  ಒಂದೇ ಕುಟುಂಬದವರಂತೆ ಇದ್ದೇವು ಆದರೆ ಕೂಡುವುದು ಸಹಜ ಅಗಲುವುದು ಅನಿವಾರ್ಯ ಎಂಬಂತೆ ಅವರು ಬೇರೆ ಶಾಲೆಗೆ ಹೋಗುವುದು ಅನಿವಾರ್ಯವಾಗಿದೆ ಎಂದು ತುಂಬಾ ಭಾವುಕರಾಗಿ ಮಾತನಾಡಿದರು..ಶ್ರೀ ನಂದಬಸಪ್ಪ ಸರ್ ಒಬ್ಬ ಹಿರಿಯ ಶಿಕ್ಷಕರು ಎಲ್ಲಾ ಶಿಕ್ಷಕರಿಗೆ ಮಾರ್ಗದರ್ಶಕರಾಗಿ ಇದ್ದರು ಇಂತಹ ಶಿಕ್ಷಕರನ್ನು ಬೀಳ್ಕೊಡುವುದು ಅತ್ಯಂತ ದುಃಖದ ಸಂಗತಿ ಎಂದು ಎಲ್ಲಾ ಸಹ ಶಿಕ್ಷಕರು ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದರು. ಹಾಗೆಯೇ  ಶ್ರೀಯುತ ಹಂಪಣ್ಣ ಗುಡುದೂರು ಸರ್ ಅನುಭವದ ಮಾತುಗಳನ್ನಾಡಿದರು, ಹಾಗೂ ಮುಖ್ಯ ಗುರುಮಾತೆಯರಾದ ಶ್ರೀಮತಿ ಗುರುಪಾದಮ್ಮ ಬಂಡಾರಿ ಮೇಡಂ ಅವರು ಶಿಕ್ಷಕರ ಕುರಿತು ಮಾತನಾಡಿದರು ಇಂತಹ ಶಿಕ್ಷಕರನ್ನು ಬೀಳ್ಕೊಡುವುದು ನನಗೆ ಬಲಗೈ ಕಳೆದುಕೊಂಡಂತೆ ಹಾಗಿದೆ ಎಂದು ತುಂಬಾ ಭಾವುಕರಾಗಿ ಮಾತನಾಡಿದರು. ನಂತರ ವರ್ಗಾವಣೆಗೊಂಡ ಶ್ರೀ ನಂದಬಸಪ್ಪ ಸರ್ ಹಾಗೂ ಶ್ರೀಮತಿ ಕಸ್ತೂರಿ ಕೆಂಚರೆಡ್ಡಿ ಸಹ ಶಿಕ್ಷಕರು ಭಾವುಕರಾಗಿ ಇಂತಹ ಒಳ್ಳೆಯ ಸಿಬ್ಬಂದಿಯನ್ನು ಹಾಗೂ ಮಕ್ಕಳನ್ನು ಅನಿವಾರ್ಯ ಕಾರಣದಿಂದ ನಾವು ಬಿಟ್ಟು ಹೋಗುತ್ತಿದ್ದೇವೆ ಎಂದು ಭಾವುಕರಾದರು ಆಗ ಒಂದು ಕ್ಷಣ ಮೌನ ಆವರಿಸಿತು .ಇಂತಹ ಅಚ್ಚುಮೆಚ್ಚಿನ  ಶಿಕ್ಷಕರು ನಮ್ಮನ್ನು ಬಿಟ್ಟು ಹೋಗುತ್ತಿದ್ದಾರೆ ಎಂದು ಎಲ್ಲಾ ಮಕ್ಕಳು ದುಃಖಿಸುತ್ತಾ ಪ್ರೀತಿಯಿಂದ ಕಿರು ಕಾಣಿಕೆಯನ್ನು ನೀಡಿದರು.

ಹಾಗೆಯೇ ಶಾಲಾ ಸಿಬ್ಬಂದಿಯ ಪರವಾಗಿ ವರ್ಗಾವಣೆಗೊಂಡ ಶಿಕ್ಷಕರಿಗೆ ಊರಿನ ಜನರ ಮತ್ತು ವಿದ್ಯಾರ್ಥಿಗಳ ಸಮ್ಮುಖದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಹಾಗೆಯೇ ನಿವೃತ್ತ ಶಿಕ್ಷಕರಾದ ಶ್ರೀಯುತ ಹಂಪಣ್ಣ ಗುಡದೂರು ಅವರಿಗೂ ಸಹ ಸನ್ಮಾನಿಸಿದರು. ಜುಮಲಾಪುರ ಗ್ರಾಮದ ವತಿಯಿಂದ ವರ್ಗಾವಣೆಗೊಂಡ ಶಿಕ್ಷಕ ಶಿಕ್ಷಕಿಯರಿಗೆ  ಶ್ರೀ ಸದ್ಗುರು ಪಾಂಡುರಂಗ ತಾತನವರ ಬಾವಿ ಚಿತ್ರ ನೀಡಿ ಸನ್ಮಾನಿಸಲಾಯಿತು.  SDMC ಅಧ್ಯಕ್ಷರಾದ ಬಸವರಾಜ ಬಡಿಗೇರ ಹಾಗೂ ಪತ್ರಕರ್ತರಾದ ಅಮಾಜಪ್ಪ ಇವರು ಸಹ ಕಾರ್ಯಕ್ರಮದ ಕುರಿತು ಮಾತನಾಡಿದರು. ಈ ಕಾರ್ಯಕ್ರಮದಲ್ಲಿ  ಗ್ರಾಂ ಪಂ ಸದಸ್ಯರಾದ ನಿಂಗಪ್ಪ ಕುರಿ. ಬುಡನೆಸಾಬ್ ಕಲಾಲ್. ಗ್ರಾಮದ ಶಿಕ್ಷಣ ಪ್ರೇಮಿಗಳಾದ  ಶಂಕ್ರಪ್ಪ ನಾಯಕ. ಮುದಕಪ್ಪ ಕುರಿ. ರಹಿಮ್‌.ಪಾಂಡಪ್ಪ ನಾಯಕ. ಗಂಗಾಧರ ಕ್ರೀಡಾ ಪ್ರೇಮಿಯಾದ   ಶಶಿದರ ಕನಕಪ್ಪ ಹುಡೇಜಾಲಿ.   ಉಪಸ್ಥಿತರಿದ್ದರು. ನಿರೂಪಣೆಯನ್ನು ಶ್ರೀ ನೀಲಪ್ಪ ಅದಪೂರಾ ಹಾಗೂ ವಂದನಾರ್ಪಣೆಯನ್ನು ಕುಮಾರ್ ಮೌನೇಶ್ A. ಮಾಲಿ ಪಾಟೀಲ್ ನೆರವೇರಿಸಿಕೊಟ್ಟರು.

ವರದಿ-ಅಮಾಜಪ್ಪ ಜುಮಲಾಪುರ ಪತ್ರಕರ್ತರು

Leave a Reply

Your email address will not be published. Required fields are marked *