ಯಲಬುರ್ಗಾ : ಸಾಮಾನ್ಯವಾಗಿ ಪ್ರತಿಯೊಬ್ಬ ತಂದೆ ತಾಯಿ ತಮ್ಮ ತಮ್ಮ ಮಕ್ಕಳ ಹುಟ್ಟು ಹಬ್ಬವನ್ನು ಹಾಗೇ ಹೀಗೆ ಹೇಗೆಲ್ಲಾ ಆಚರಣೆ ಮಾಡಬೇಕು ಎಂದು ಕೆಜಿಗಟ್ಟಲೆ ಕೇಕ್ ಕಟ್ ಮಾಡುವುದನ್ನು ನೋಡಿದ್ದೇವೆ ನಡು ರಸ್ತೆಯಲ್ಲಿ ಕೂಡ ಕೇಕ್ ಕಟ್ ಮಾಡುತ್ತಾ ಕುಡಿದು ಕುಪ್ಪಡಿಸಿ ಎಂಜಾಯ್ ಮಾಡುವ ಜನರನ್ನು ನೋಡಿದ್ದೇವೆ, ಆದರೆ ಇಲ್ಲೊಬ್ಬ ಯಲಬುರ್ಗಾ ತಾಲೂಕಿನ ಮುಧೋಳ ಗ್ರಾಮದ ಪೊಲೀಸ್ ಕಾನ್ಸ್ಟೇಬಲ್ ಅಧಿಕಾರಿ ತಮ್ಮ ಮಗನಾದ ಮಿಲನ್ ಬೆಟಗೇರಿಯ ಹುಟ್ಟುಹಬ್ಬಕ್ಕೆ ಪೊಲೀಸ್ ಕರ್ತವ್ಯದಲ್ಲೂ ರಕ್ತದಾನ ಮಾಡಿ ಪ್ರತಿಯೊಬ್ಬರಿಗೂ ಮಾದರಿಯಾದರು, ಇವರು ಕೊಪ್ಪಳ ತಾಲೂಕಿನ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಕಾನ್ಸ್ಟೇಬಲ್ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿರುವ ಕಳೆಕೇಶ್ ಗವಿಸಿದ್ದಪ್ಪ ಬೆಟಗೇರಿ ಅವರು ತಮ್ಮ ಪುತ್ರನಾದ ಮಿಲನ್ ನ 7 ನೇ ಹುಟ್ಟುಹಬ್ಬಕ್ಕೆ. ಆಗಸ್ಟ್ 4ರಂದು ಮಿಲನ್ ನ 2 ನೇ ಹುಟ್ಟು ಹಬ್ಬದಿಂದ ಪ್ರತಿ ವರ್ಷ ರಕ್ತದಾನ ಮಾಡುತ್ತಿರುವ ಕಳಕೇಶರವರು ರಕ್ತದಾನ ಮಾಡುವ ಮೂಲಕ ಮಾದರಿಯಾದರು, ಇವರ ಕರ್ತವ್ಯ ಕಾನೂನು ಸುವ್ಯವಸ್ಥೆ ಕಾಪಾಡುವ ಸಾಮಾಜಿಕ ಜವಾಬ್ದಾರಿ ಪೊಲೀಸ್ ಇಲಾಖೆಯದು. ಅಂಥ ಇಲಾಖೆಯ ಪೊಲೀಸ್ ಒಬ್ಬರು ತಮ್ಮ ಪುತ್ರನ ಹುಟ್ಟು ಹಬ್ಬದ ದಿನ ರಕ್ತದಾನ ಮಾಡುತ್ತ ಸಾಮಾಜಿಕ ಕಾಳಜಿ ಮೆರೆಯುತ್ತಿದ್ದಾರೆ. ಅವರೇ ಕಳಕೇಶ ಬೆಟಗೇರಿ, ಮೂಲತಃ ಯಲಬುರ್ಗಾ ತಾಲೂಕಿನ ಮುಧೋಳದವರು. ಸಧ್ಯ ಕೊಪ್ಪಳದಲ್ಲಿದ್ದಾರೆ. ಪೊಲೀಸ್ ಕರ್ತವ್ಯ ಸಂದರ್ಭದಲ್ಲಿ ಎಷ್ಟೋ ಅಪಘಾತಗಳಲ್ಲಿ ಗಾಯಾಳುಗಳಿಗೆ ರಕ್ತದ ಅವಶ್ಯಕತೆ ಮತ್ತು ರಕ್ತಕ್ಕಾಗಿ ಪರದಾಡುವುದು ಕಂಡಿದ್ದಾರೆ. ಹಾಗಾಗಿ ಸ್ವತಃ ಕಳಕೇಶರವರು ಪ್ರತಿ ವರ್ಷ ರಕ್ತದಾನಕ್ಕೆ ಮುಂದಾದರು. ಸಾಮಾಜಿಕ ಕಳಕಳಿಯಿಂದ ರಕ್ತದಾನದ ತಮ್ಮ ನಿರ್ಣಯವನ್ನು ನಿಯಮಿತವಾಗಿ ಪಾಲಿಸುತ್ತಿದ್ದಾರೆ. ಇವರ ಕುಟುಂಬ ಈ ಕಾರ್ಯಕ್ಕೆ ಬೆಂಬಲಿಸುತ್ತಿದೆ. ರಕ್ತದಾನದ ಬಗ್ಗೆ ಜನರಲ್ಲಿ ತಪ್ಪು ಕಲ್ಪನೆ ಹೋಗಲಾಡಿಸಬೇಕಿದೆ. ರಕ್ತದಾನದಿಂದ ಯಾವುದೇ ಹಾನಿ ಇಲ್ಲ. ರಕ್ತದಾನದಿಂದ ಒಂದು ಜೀವ ಉಳಿಸಬಹುದು ಎನ್ನುವ ಕಳಕೇಶರವರು ತಮ್ಮ ಪುತ್ರನ ಹುಟ್ಟುಹಬ್ಬವನ್ನು ರಕ್ತದಾನದ ಮೂಲಕ ಆಚರಿಸುವ ಇವರ ಸಾಮಾಜಿಕ ಕಳಕಳಿಗೆ ಥ್ಯಾಂಕ್ಸ್ ಹೇಳೋಣ…ಧನ್ಯವಾದಗಳು 🙏
( ಕೋಟ ) ನನ್ನ ಮಗನ ಹುಟ್ಟುಹಬ್ಬದ ದಿನದಂದು O ಪಾಸಿಟೀವ್ ರಕ್ತದ ಗುಂಪನ್ನು ಹೊಂದಿರುವ ನಾನು ಕಳಕೇಶ್ ಸುಮಾರು ನಾಲ್ಕರಿಂದ ಐದು ವರ್ಷ ರಕ್ತದಾನ ಮಾಡುತ್ತಾ ಬಂದಿದ್ದೇನೆ ಯಾವುದೇ ಹಾನಿಗೆ ರಕ್ತದಾನ ಅವಶ್ಯಕತೆ ಇರುತ್ತದೆ ಆದಷ್ಟು ಅಪಘಾತಗಳು ಆಗುವುದನ್ನು ತಪ್ಪಿಸಬೇಕು ಅನ್ನೋ ಉದ್ದೇಶಕ್ಕಾಗಿ ಮತ್ತು ಜನರಿಗೆ ಭಯ ಇರೋದ್ರಿಂದ ಎಲ್ಲರಿಗೂ ಜಾಗೃತಿಯಾಗಲಿ ಎಂದು ರಕ್ತದಾನ ಮಾಡುತ್ತಿದ್ದೇನೆ ಕಳಕೇಶ್ ಬೆಟಿಗೇರಿ ಪೊಲೀಸ್ ಕಾನ್ಸ್ಟೇಬಲ್ ಮುನಿರಾಬಾದ್.
ವರದಿ-ಹುಸೇನಬಾಷ ಮೋತೆಖಾನ್