ಕಳದ ವಾರ ಕೇಂದ್ರ ಸರ್ಕಾರ ಲೋಕಸಭೆಯಲ್ಲಿ 1980 ಹಾಗೂ 1996 ರ ಅರಣ್ಯ ( ಸಂರಕ್ಷಣೆಯ) ತಿದ್ದುಪಡಿ ಮಸೂದೆ-2023 ಅನ್ನು ಮಂಡಿಸಿ ಅದಾನಿ ಅಂಬಾನಿ ಕಂಪನಿಗಳಿಗೆ ಲಕ್ಷಾಂತರ ಎಕ್ಟೆರ್ ಅರಣ್ಯ ಭೂಮಿಯನ್ನು ಬಿಟ್ಟು ಕೊಡುವ ಕಾರ್ಯಕ್ಕೆ ಮುಂದಾಗಿದೆ.
ವನ್ಯಜೀವಿಗಳು ಮತ್ತು ಅತ್ಯಂತ ಸೂಕ್ಷ್ಮ ಪ್ರದೇಶ ಸೇರಿದಂತೆ ದೇಶದಲ್ಲಿ ಒಟ್ಟು 1.97 ಲಕ್ಷ ಎಕ್ಟರ್ ಅರಣ್ಯ ಭೂಮಿಯಲ್ಲಿನ ದಟ್ಟವಾದ ಕಾಡು ನಾಶವಾಗುತ್ತದೆ ಎಂದು ಪರಿಸರ ವಿಜ್ಞಾನಿಗಳು ಎಚ್ಚರಿಸಿದ್ದಾರೆ. ಇದೆಲ್ಲದೆ ಇತ್ತೀಚಿಗೆ ಲೋಕಸಭೆಯಲ್ಲಿ ಸಹಕಾರಿ ಕಾಯ್ದೆಗೆ (ಬಹುರಾಜ್ಯ ಸಹಕಾರಿ ಕಾಯ್ದೆ)ತಿದ್ದುಪಡಿ ತಂದು ರಾಜ್ಯಗಳ ಸ್ವಾಯತ್ತ ಅಧಿಕಾರವನ್ನು ಮೊಟಗೊಳಿಸಿದೆ ಮಾತ್ರಲ್ಲ ದೇಶದ ಒಕ್ಕೂಟ ವ್ಯವಸ್ಥೆಗೆ ಕುತ್ತು ತಂದಿದೆ. 2022 ರಲ್ಲಿ ಮಂಡಿಸಿದ್ದ ತಿದ್ದುಪಡಿ ಮಸೂದೆಯಲ್ಲಿ ಸಹಕಾರಿ ತತ್ವದ ಮೌಲ್ಯಗಳನ್ನೆ ತೆಗೆದು ಹಾಕಿದ್ದರಿಂದ ದೇಶದ ಸಹಕಾರಿ ಕ್ಷೇತ್ರದ ಜನತೆಯಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಈ ಕಾರಣದಿಂದ, 2023 ರ ಮಾರ್ಚ್ ನಲ್ಲಿ ಜಂಟಿ ಸದನ ಸಮಿತಿ ರಚನೆಯಾಗಿತ್ತು. ರಾಜ್ಯಗಳ ಸಹಕಾರಿ ಬ್ಯಾಂಕುಗಳ ರಾಷ್ಟ್ರೀಯ ಒಕ್ಕೂಟ ಮತ್ತು ಇತರೆ ರಾಷ್ಟ್ರೀಯ ಹಣಕಾಸು ಸಂಸ್ಥೆಗಳು (RBI ಕೂಡ) ತಿದ್ದುಪಡಿಗೆ ವಿರೋಧ ವ್ಯಕ್ತಪಡಿಸಿ ಸದನ ಸಮಿತಿಗೆ ಆಕ್ಷೇಪಗಳನ್ನು ಸಲ್ಲಿಸಿದ್ದವು. ಜಂಟಿ ಸದನ ಸಮಿತಿಗೆ ಬಂದಿದ್ದ ಆಕ್ಷೇಪಗಳು ಮತ್ತು ಸಲಹೆಗಳನ್ನು ಮತ್ತು ವಿರೋಧ ಪಕ್ಷಗಳ ವಿರೋಧನ್ನು ಧಿಕ್ಕರಿಸಿದ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸಹಕಾರಿ ಕಾಯ್ದೆಗೆ ತಿದ್ದುಪಡಿ ತಂದು ಸರ್ವಾಧಿಕಾರತ್ವವನ್ನು ಪ್ರದರ್ಶಿಸಿದೆ. ಈಗಾಗಲೆ ರಾಷ್ಟ್ರೀಯ ದೈತ್ಯಾಕಾರದ ಬ್ಯಾಂಕುಗಗಳನ್ನು ತನ್ನ ಸ್ವಾಧೀನಕ್ಕೆ ಪಡೆದುಕೊಂಡಿರುವ ವಿದೇಶಿ ಮತ್ತು ಸ್ವದೇಶಿ ಕಾರ್ಪೋರೇಟ ಕಂಪನಿಗಳು ಇನ್ನು ಮುಂದೆ ದೇಶದ ಸಹಕಾರಿ ಕ್ಷೇತ್ರವನ್ನು ನುಂಗಿ ಹಾಕಲಿವೆ. ಇದುವರೆಗೆ ರೈತರಿಗೆ ದೊರೆಯುತ್ತಿದ್ದ ಜೀರೋ ಬಡ್ಡಿ ಸಾಲ ಮತ್ತು ಸಾಲ ಮನ್ನಾ ಇತರೆ ರಿಯಾಯಿತಿಯ ಹಕ್ಕುಗಳು ತಿದ್ದುಪಡಿ ಕಾಯ್ದೆಯಿಂದ ನಾಶಗೊಳ್ಳಲಿವೆ. ಕಾರ್ಮಿಕ ಕಾಯ್ದೆ, ಕೃಷಿ ಕಾಯ್ದೆ ಸೇರಿದಂತೆ 2014 ರಿಂದ ಇಂತಹ ಹತ್ತು ಹಲವು ತಿದ್ದುಪಡಿ ಕಾಯ್ದೆಗಳು ಸರಣಿಯಾಗಿ ಜಾರಿಗೊಳ್ಳತ್ತಲಿವೆ. ಅಂದರೆ ಸಂವಿಧಾನದ ಬೇರುಗಳನ್ನೆ ಒಂದೊಂದಾಗಿ ಕತ್ತರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ದೇಶದ ಎಲ್ಲಾ ರಾಜ್ಯಗಳ ಪ್ರಜಾತಂತ್ರವಾದಿಗಳು,ವಿದ್ಯಾರ್ಥಿ ಯುವಜನರು ಸೇರಿದಂತೆ ಸಮಸ್ತ ದುಡಿಯುವ ಜನತೆ ಕಾಯ್ದೆ ವಾಪಸಾತಿಗೆ ಒತ್ತಾಯಿಸಿ ಹೋರಾಡಬೇಕೆಂದು ಕರೆ ಕೊಡಲಾಗಿದೆ. ಕರ್ನಾಟಕ ರಾಜ್ಯ ರಾಜ್ಯ ಸರ್ಕಾರ ಈ ಕಾಯ್ದೆಯನ್ನು ಧಿಕ್ಕರಿಸಬೇಕು ಮತ್ತು ಎಲ್ಲಾ ಪಕ್ಷಗಳ ಶಾಸಕರು ಸಂಸದರು ಕೇಂದ್ರ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸಬೇಕು.ಬರಲಿರುವ ಲೋಕಸಭೆ ಚುನಾವಣೆಯಲ್ಲಿ ಜನತೆ ಮೋದಿ ಸರ್ಕಾರಕ್ಕೆ ಸರಿಯಾದ ಪಾಠ ಕಲಿಸಿದರೆ ಮಾತ್ರ ದೇಶವನ್ನು ಅಪಾಯದಿಂದ ರಕ್ಷಿಸಿಕೊಳ್ಳಲು ಸಾಧ್ಯ. ಡಿ.ಹೆಚ್.ಪೂಜಾರ ರಾಜ್ಯ ಕಾರ್ಯದರ್ಶಿ CPI(ML) RI-ರವಲೂಷನರಿ ಇನ್ಸೇಟಿವ್- ರಾಜ್ಯ ಸಮಿತಿ.
ವರದಿ-ಉಪಳೇಶ ವಿ.ನಾರಿನಾಳ.