ಚಡ್ಡಿ ದೋಸ್ತಿ ಬಳಗದವತಿಯಿಂದ ನಾಡಿನ ಸಮಸ್ತ ಜನತೆಗೆ ಸ್ನೇಹಿತರ ದಿನಾಚಾರಣೆಯ ಹಾರ್ದಿಕ ಶುಭಾಶಯಗಳು….

Spread the love

ಚಡ್ಡಿ ದೋಸ್ತಿ ಬಳಗದವತಿಯಿಂದ ನಾಡಿನ ಸಮಸ್ತ ಜನತೆಗೆ ಸ್ನೇಹಿತರ ದಿನಾಚಾರಣೆಯ ಹಾರ್ದಿಕ ಶುಭಾಶಯಗಳು….

ಈ ಸ್ನೇಹಿತರ ಹಬ್ಬದ ವಿಶೇಷ ದಿನದಂದು, ಹಳೆಯ ಅಸಮಾಧಾನಗಳನ್ನು ಮರೆತು, ನಿಮ್ಮ ಪ್ರೀತಿಪಾತ್ರರನ್ನು ಅಪ್ಪಿಕೊಳ್ಳಿ ಎಂದು ಹೇಳಲಾಗುತ್ತದೆ. ನೀವು ಯಾರನ್ನಾದರೂ ಕಳೆದುಕೊಂಡರೆ ಮತ್ತು ಅವರಿಂದ ದೂರವಾಗಿದ್ದರೆ ಕೂಡಲೆ ನನ್ನನ್ನು ಕ್ಷಮೀಸುಬೀಡು ಎಂದು ಒಂದೆ ಒಂದು ಸಾರಿ ಕೇಳಿ ಬೀಡಿ, ಮತ್ತು ಅವರನ್ನು ಭೇಟಿ ಮಾಡಲು ಸಾಧ್ಯವಾಗದಿದ್ದರೆ, ನೀವು ಅವರಿಗೆ ಫೋನ್ (Phone) ಮೂಲಕ ಶುಭಾಶಯಗಳನ್ನು ಕಳುಹಿಸಬಹುದು, ಸಂತೋಷದ ಪೆಟ್ಟಿಗೆ ಮನದಲ್ಲಿ ಯಾವಾಗಲೂ ತುಂಬಿರಲಿ, ಯಾವಾಗಲೂ ಸಂತೋಷವಾಗಿರಿ, * ಈ ಸ್ನೇಹಿತರ ಹಬ್ಬದ ನಿಮಿತ್ಯ ನಿಮ್ಮ ಜೀವನವನ್ನು ಇನ್ನಷ್ಟು ಬಲಿಷ್ಠವಾಗಿಸಲಿ* ಹೃದಯದಿಂದ ಹೃದಯಕ್ಕೆ ಭೇಟಿಯಾಗುವ ಪ್ರೀತಿಪಾತ್ರರಿಗೆ ಹೇಳಿ ಸ್ನೇಹಿತರ ಹಬ್ಬದ ಶುಭಕಾಮನೆಗಳು. * ಹಿಂದಿನ ಕಷ್ಟಗಳನ್ನು ಮರೆತು ಮುಂಬರುವ ಖುಷಿಯು ನಿಮ್ಮ ಜೀವನದಲ್ಲಿ ಇನ್ನಷ್ಟು ಬಣ್ಣಮಯವಾಗಿರಲಿ * ಹಿಂದೆಂದಿಗಿಂತಲೂ ಹೆಚ್ಚು ಆನಂದದ ಸ್ನೇಹಿತರ ಹಬ್ಬ ನಿಮ್ಮದಾಗಲಿ. ಸ್ನೇಹಿತರ ದಿನಾಚಾರಣೆಯನ್ನ ಹಬ್ಬವನ್ನಾಗಿ ನಿಮ್ಮ ಬದುಕಿನಲ್ಲಿ ಖುಷಿಯ ಚಿತ್ತಾರವನ್ನು ಮೂಡಿಸಲಿ. ಕಷ್ಟಗಳೆಲ್ಲಾ ಮಂಜಿನಂತೆ ಕರಗಿ, ನೆಮ್ಮದಿಯೊಂದೇ ನಿಮ್ಮ ಬಾಳಲ್ಲಿ ಶಾಶ್ವತವಾಗಲಿ. ನಿಮಗೂ ಸ್ನೇಹಿತರ ದಿನಾಚಾರಣೆಯ ಹಾರ್ದಿಕ ಶುಭಾಶಯಗಳು.

ಸಾಮಾನ್ಯ ವ್ಯಕ್ತಿಯನ್ನು ಅಸಾಮಾನ್ಯ ವ್ಯಕ್ತಿಯಾಗಿ ಮಾಡಿದ್ದು ಇದೆ ಸ್ನೇಹಿತರ ಬಳಗ ಅಂತ ಹೇಳೋಕೆ ನನಗೆ ಖುಷಿಯಾಗುತ್ತೆ. ಒಂದೊಂದು ಕಷ್ಟದ ಸಮಯದಲ್ಲಿ ಒಬ್ಬಬ್ಬ ಸ್ನೇಹಿತರು ಒಂದೊಂದು ರೂಪದಲ್ಲಿ ನನಗೆ ಸಹಾಯ ಮಾಡಿದ್ದೀರಿ, ಜಾತಿ ಧರ್ಮ ಪಕ್ಷ ಯಾವುದು ನೋಡದೆ ಎಂತಹದೆ ಕಷ್ಟದ ಸಮಯದಲ್ಲಿ ನನ್ನ ಬೆನ್ನೆಲಬಾಗಿ ನಿಂತಿದೀರಿ. ನನ್ನ ಮಟ್ಟಿಗೆ ನನಗೆ ಬಂಧುತ್ವ ಅಂತ ಇದ್ರೆ ಅದು ನೀವುಗಳೇ. ಈ ಭೂಮಿ ಮೇಲೆ ನಮ್ಮ ನಿಮ್ಮ ಋಣ ಅದೇಷ್ಟಿದೆಯೋ ಗೊತ್ತಿಲ್ಲ, ಆದರೆ ಇರುವ ದಿನಗಳನ್ನು, ಕ್ಷಣಗಳನ್ನು, ಅತ್ಯಂತ ಪ್ರೀತಿಯಿಂದ ಕಳೆಯೋಣ. ಈ ಸ್ನೇಹಿತರ ದಿನದಂದು ಈ ಬಡವ ರಾಸ್ಕಲ್ ಕಡೆಯಿಂದ ನಿಮಗೆ ಸ್ನೇಹಿತರ ದಿನದ ಶುಭಾಶಯಗಳು.

ವರದಿ-ನಿಮ್ಮ ಸ್ನೇಹಿತ.

Leave a Reply

Your email address will not be published. Required fields are marked *