ಕಂಪ್ಲಿಯಲ್ಲಿ ತಾಲೂಕು ಕ್ರೀಡಾಂಗಣ ಸ್ಥಾಪಿಸುವಂತೆ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ಮೋಹನ್ ಕುಮಾರ್ ರಿಂದ ಮನವಿ.

Spread the love

ಬೆಂಗಳೂರು: ಆಗಸ್ಟ್ 7, ಬಳ್ಳಾರಿ ಜಿಲ್ಲೆಯ ನೂತನ ತಾಲೂಕು ಕೇಂದ್ರವಾದ ಕಂಪ್ಲಿಯಲ್ಲಿ ತಾಲೂಕು ಕ್ರೀಡಾಂಗಣ ಸ್ಥಾಪಿಸುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳಾದ ಎನ್. ಮಂಜುನಾಥ್ ಪ್ರಸಾದ್, ಐಎಎಸ್, ರವರಿಗೆ ಕಂಪ್ಲಿ ನಿವಾಸಿ ಕರ್ನಾಟಕ ಉಚ್ಚ ನ್ಯಾಯಾಲಯದ ವಕೀಲರಾದ ಮೋಹನ್ ಕುಮಾರ್ ದಾನಪ್ಪನವರು ಮನವಿ ಸಲ್ಲಿಸಿದರು ಬಳ್ಳಾರಿ ಜಿಲ್ಲೆಯ ಕಂಪ್ಲಿಯು 2017 ರಲ್ಲಿ ನೂತನ ತಾಲೂಕು ಕೇಂದ್ರವಾಗಿ ಹೊರಹೊಮ್ಮಿದ್ದು ಕಂಪ್ಲಿಯು ಬಳ್ಳಾರಿ ಜಿಲ್ಲೆಯಲ್ಲೇ ಈ ಹಿಂದಿನಿಂದಲೂ ಕ್ರೀಡೆಗಳ ತವರೂರಾಗಿ ಖ್ಯಾತಿ ಹೊಂದಿರುತ್ತದೆ, ಕಂಪ್ಲಿಯಲ್ಲಿ ಸುಮಾರು 250ಕ್ಕೂ ಅಧಿಕ ಕಬಡ್ಡಿ ಕ್ರೀಡಾಪಟುಗಳಿದ್ದಲ್ಲದೆ ಸುಮಾರು 5 ನೂರಕ್ಕು ಹೆಚ್ಚು ಅಥ್ಲೆಟ್‌ಗಳಿರುತ್ತಾರೆ, ಪ್ರಾಥಮಿಕ ಶಾಲಾ ಮಟ್ಟದಿಂದ ಪದವಿವರೆಗಿನ ವಿಧ್ಯಾರ್ಥಿಗಳು ಇತರ ಕ್ರೀಡೆಗಳಲ್ಲಿ ರಾಜ್ಯ ಮಟ್ಟದಲ್ಲಿ ಸ್ಪರ್ಧಿಸಿ ವಿಜೇತರಾದ ಹಲವಾರು ಉದಾಹರಣೆಗಳಿವೆ ಹಾಗೂ ಮ್ಯಾರಥಾನ್ ಓಟದಲ್ಲಿ ವಿಶ್ವ ದಾಖಲೆ, ಭಾರತ ದಾಖಲೆ ಮಾಡಿದ ಕ್ರೀಡಾಪಟು ಹೊಂದಿರುವ ಕ್ರೀಡೆಗಳ ತವರೂರಾದ ಕಂಪ್ಲಿ ನಗರದಲ್ಲಿ ಕ್ರೀಡೆಗಳನ್ನು ಮತ್ತು ಕ್ರೀಡಾಪಟುಗಳನ್ನ ಪ್ರೋತ್ಸಾಯಿಸಲು ಪ್ರತಿ ತಿಂಗಳು ಕಬಡ್ಡಿ ಸೇರಿದಂತೆ ಹಲವಾರು ಆಟಗಳನ್ನು ಹಲವಾರು ಸಂಘ ಸಂಸ್ಥೆಗಳು ಆಯೋಜಿಸಲಾಗುತ್ತಿರುತ್ತದೆ,

ಕಂಪ್ಲಿ ನಗರದಲ್ಲಿ ಸುಮಾರು 10ಕ್ಕೂ ಅಧಿಕ ಕ್ರೀಡಾಪಟುಗಳು ನಾನಾ ಕ್ರೀಡೆಯಲ್ಲಿ ಯೂನಿವರ್ಸಿಟಿ ಬ್ಲೂ ಗಳಾಗಿರುತ್ತಾರೆ. ಹಾಗೂ ಕ್ರೀಡೆಯಲ್ಲಿ ಇಷ್ಟೆಲ್ಲಾ ಇತಿಹಾಸ ಹೊಂದಿರುವ ಕಂಪ್ಲಿಯಲ್ಲಿ ಕ್ರೀಡಾಂಗಣವಿರುವುದಿಲ್ಲಾವಾದರೂ ಕ್ರೀಡಾಪಟುಗಳು, ಪೊಲೀಸ್ ನೇಮಕಾತಿಗೆ ದೈಹಿಕ ಪರೀಕ್ಷೆಗೆ ಹಾಗೂ ಇತರ ಕ್ರೀಡೆಗಳಿಗೆ ತಾಲೀಮು ಮಾಡುವ ಸ್ಪರ್ಧಿಗಳು ಖಾಸಗಿ ಬಡಾವಣೆಗಳ ರಸ್ತೆಗಳಲ್ಲಿ, ಸಾರಿಗೆ ರಸ್ತೆಗಳಲ್ಲಿ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಓಟದ ಕಸರತ್ತುಗಳು ಮಾಡಿ ಕಂಪ್ಲಿ ನಗರ ಮತ್ತು ತಾಲೂಕು ವ್ಯಾಪ್ತಿಯಲ್ಲಿ ಸುಮಾರು 5 ರಿಂದ 6 ಜನ ಪೊಲೀಸ್ ಸಬ್ ಇನ್ಸ್ ಪೆಕ್ಟರ್‌ಗಳು 25 ರಿಂದ 30 ಜನ ಪೊಲೀಸ್ ಪೇದೆಗಳಾಗಿ ನೇಮಕವಾಗಿರುತ್ತಾರೆ. ಹಾಗೂ ದಿನ ನಿತ್ಯ ಸುಮಾರು 200ಕ್ಕೂ ಅಧಿಕ ಕ್ರೀಡಾಪಟುಗಳು ವಿವಿಧ ಕ್ರೀಡೆಗಳ ಅಭ್ಯಾಸವನ್ನು ಸರ್ಕಾರಿ ಶಾಲಾ ಮತ್ತು ಖಾಸಗಿ ಅವರಣಗಳಲ್ಲಿ ನಡೆಸುತ್ತಿರುವುದು ತುಂಬಾ ದುರದೃಷ್ಟಕರ ಸಂಗತಿಯಾಗಿರುತ್ತದೆ, ಆದ್ದರಿಂದ ನೂತನವಾಗಿ ತಾಲೂಕು ಕೇಂದ್ರವಾಗಿ ಹೊರಹೊಮ್ಮಿರುವ ಕಂಪ್ಲಿ ನಗರದಲ್ಲಿ ತ್ವರಿತವಾಗಿ ತಾಲೂಕು ಮಟ್ಟದ ಸುಸಜ್ಜಿತವಾದ ಕ್ರೀಡಾಂಗಣ ಸ್ಥಾಪಿಸಲು ಕೂಡಲೇ ಸರ್ಕಾರಿ ಸ್ಥಳ ಗುರುತಿಸಬೇಕು, ಒಂದು ವೇಳೆ ಸರ್ಕಾರಿ ಸ್ಥಳವಿಲ್ಲದಿದ್ದಲ್ಲಿ ನಗರದ ಮಧ್ಯ ಭಾಗ ಅಥವಾ ನಗರಕ್ಕೆ ಹತ್ತಿರದಲ್ಲಿ ಸರ್ಕಾರವು ಖಾಸಗಿ ಜಾಗವನ್ನು ಖರೀದಿಸಿ ಕ್ರೀಡಾಂಗಣ ಸ್ಥಾಪಿಸಲು ಅಗತ್ಯ ಪ್ರಕ್ರಿಯೆಗಳನ್ನು ಪ್ರಾರಂಭಿಸುವಂತೆ ವಕೀಲರಾದ ಮೋಹನ್ ಕುಮಾರ್ ದಾನಪ್ಪನವರು ಮನವಿ ಸಲ್ಲಿಸಿದರು, ಮನವಿ ಸ್ವೀಕರಿಸಿದ ಸರ್ಕಾರದ ಪ್ರಧಾನ ಕಾರ್ಯದರ್ಶಿಗಳು ಸರ್ಕಾರಿ ಸ್ಥಳವಿದ್ದಲ್ಲಿ ಕೂಡಲೇ ಪ್ರಕ್ರಿಯೆಗಳನ್ನ ಪ್ರಾರಂಭಿಸಲಾಗುವುದು, ಸರ್ಕಾರಿ ಸ್ಥಳ ಲಭ್ಯವಿಲ್ಲದಿದ್ದಲ್ಲಿ ಸರ್ಕಾರದ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ವರದಿ-ಮಹೇಶ ಶರ್ಮಾ

Leave a Reply

Your email address will not be published. Required fields are marked *