ತಾವರಗೇರಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಈ ಸಾರಿ ರಂಗೇರಿದ  ಚುನಾವಣೆ.

Spread the love

ತಾವರಗೇರಾ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಈ ಸಾರಿ ರಂಗೇರಿದ  ಚುನಾವಣೆ.

ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ತಾವರಗೇರಾ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಚುನಾವಣೆಯು ಈ ಸಾರಿ ರಂಗೇರಿದೆ. ಸುಮಾರು 10 ವರ್ಷಗಳ ಹಿಂದೆ ನಡೆದ ಚುನಾವಣೆ, ಆದರೆ ಈ ಸಾರಿ ಚುನಾವಣೆ ನಡೆಯಲೆಬೇಕೆಂದು ಪಣ ತೊಟ್ಟು ನಿಂತ ಅಭ್ಯಾರ್ಥಿಗಳು. ಯಾರ ಮಾತಿಗೂ ಹಿಗ್ಗದೆ/ಜಗ್ಗದೆ ಪಣ ತೊಟ್ಟು ನಿಂತಿರುವುದು ವಿಶೇಷವಾಗಿದೆ, ಏನೇ ಇರಲಿ ಈ ಸಾರಿ ಪ್ರತಿಯೊಬ್ಬ ಮತದಾರರ ಮನೆ ಭಾಗಿಲಿಗೆ ಪ್ರತಿಯೊಬ್ಬ ಅಭ್ಯಾರ್ಥಿಯನ್ನ ಕರೆಸಿಕೊಳ್ಳುವಂತ ಹಕ್ಕು ಡಾ// ಬಿ.ಆರ್.ಅಂಬೇಡ್ಕರರವರು ನಮಗೆ ನೀಡಿದ್ದಾರೆ.

ನಾಮಪತ್ರ ಸಲ್ಲಿಸಲು ದಿನಾಂಕ 29/07/2023 ರಿಂದ ಕೊನೆಯ ದಿನಾಂಕದವರೆಗೆ ಅಂದರೆ 05/08/2023 ರ ಒಳಗೆ ಸಲ್ಲಿಸಿದ ಒಟ್ಟು ಅಭ್ಯಾರ್ಥಿಗಳು 63 ಇರುತ್ತಾರೆ. ಆದರೆ ನಾಮಪತ್ರ ಸಲ್ಲಿಸಿದ ಅಭ್ಯಾರ್ಥಿಗಳಿಂದ ಹಿಂಪಡೆಯುವ ದಿನಾಂಕದೊಂದು ಒಟ್ಟು ಅಭ್ಯಾರ್ಥಿಗಳು ದಿನಾಂಕ 07/08/2023 ರಂದು 25 ಜನರು ಹಿಂಪಡೆದುಕೊಂಡಿರುತ್ತಾರೆ. ಹಾಗೇ ಸಾಮಾನ್ಯ ಮಹಿಳೆಯರಲ್ಲಿ ಎರಡು ಮಹಿಳೆಯರನ್ನು ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ಇನ್ನ ಒಟ್ಟು ಕಣದಲ್ಲಿ ಉಳಿದುಕೊಂಡವರ ಪಟ್ಟಿ ಈ ರೀತಿ ಇರುತ್ತದೆ. ಸಾಲಗಾರರ ಸಾಮಾನ್ಯ ಮತ ಕ್ಷೇತ್ರದಲ್ಲಿ 17 ಜನರು, ಸಾಲಗಾರರ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ, ಹಿಂದುಳಿದ ವರ್ಗ ಅ ಮತ್ತು ಹಿಂದುಳಿದ ವರ್ಗ ಮತ ಕ್ಷೇತ್ರದಲ್ಲಿ 10 ಜನರು, ಸಾಲಗಾರರಲ್ಲದ ಮತ ಕ್ಷೇತ್ರದಲ್ಲಿ ಒಟ್ಟು 09 ಅಭ್ಯಾರ್ಥಿಗಳು ಕಣದಲ್ಲಿ ಉಳಿದುಕೊಂಡಿದ್ದಾರೆ. ಇಲ್ಲಿ ಒಟ್ಟು ಸ್ಥಾನಗಳು 12 ಇದ್ದು, ಇದರಲ್ಲಿ 2 ಸ್ಥಾನಗಳು ಅವಿರೋಧವಾಗಿದ್ದಾವೆ. ಇನ್ನ ಬಾಕಿ ಉಳಿದಿರುವುದು ಕೇವಲ 10 ಸ್ಥಾನಗಳಿಗೆ  36 ಅಭ್ಯಾರ್ಥಿಗಳ ಪೈಪೋಟಿಯಲ್ಲಿ ಯಾರ ಹಣೆಬರಹ ಬದಲಾಗುತ್ತೋ ಕಾದು ನೋಡಬೇಕಾಗಿದೆ. ಒಟ್ಟಿನಲ್ಲಿ ಈ ಚುನಾವಣೆಗೆ ಸ್ಪರ್ಧಿಸುವವರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಅಭಿವೃದ್ದಿಗಾಗಿ ಮತ್ತು ರೈತ ಪರ ಏಳಿಗೇಗಾಗಿ, ದೀನ ದಲೀತರ ಪರವಾಗಿ ಅಗಲಿರುಳು ಶ್ರಮಿಸಲೆಂದು ತಾವರಗೇರಾ ನ್ಯೂಸ್ ಪತ್ರಿಕಾ ಬಳಗದವತಿಯಿಂದ ಆರೈಸುತ್ತೆವೆ.

ವರದಿ-ಸಂಪಾದಕೀಯಾ.

Leave a Reply

Your email address will not be published. Required fields are marked *