ಕೂಡ್ಲಿಗಿ:ಸಾರ್ವಜನಿಕರ ಸ್ವಯಂ ಪ್ರೇರಿತ ಏರಿಯಾ ಶೀಲ್ಢೌ ಡೌನ್.
-ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದಲ್ಲಿ ಬಹುತೇಕ ಕಡೆಗಳಲ್ಲಿ,ಸ್ವಯಂ ಪ್ರೇರಿತವಾಗಿ ಏರಿಯಾ ಶೀಲ್ಡ್ ಡೌನ್ ಮಾಡಿಕೊಳ್ಳುವ ಮೂಲಕ ಲಾಕ್ ಡೌನ್ ಗೆ ಸಹಕರಿಸಿದ್ದಾರೆ.ಪಟ್ಟಣದ ಬಹುತೇಕ ಏರಿಯಾದ ಗಲ್ಲಿ ಗಲ್ಲಿಗಳು ಸ್ವಯಂ ಪ್ರೇರಿತ ಶೀಲ್ಡೌನ್ ಗೆ ಒಳಗಾಗಿವೆ,ವಿಚಾರಿಸಿದರೆ ತಾವೇ ಸ್ವಯಂ ಪ್ರೇರಿತವಾಗಿ ಗಳ ಬೊಂಬು ರಸ್ಥೆಯ ಪ್ರಮುಖ ಭಾಗದಲ್ಲಿ ಅಡ್ಡಲಾಗಿರಿಸಿದ್ದು.ಅಪರಿಚಿತರು ಮಾಸ್ಕ್ ಇಲ್ಲದವರು ಬೇರೆ ಊರಿಂದ ಬಂದವರನ್ನ ಇಲ್ಲಿಯೇ ತಡೆಯುವುದಾಗಿ,ಮನೆಯಲ್ಲಿ ಮಕ್ಕಳು ವೃದ್ಧರು ಇದ್ದು ಮುಂಜಾಗ್ರತಾ ಕ್ರಮವಾಗಿ. ಒಮ್ಮದಿಂದ ಈ ನಿರ್ಧಾರಕ್ಕೆ ತಾವು ಬಂದಿರುವುದಾಗಿ ನಾಗರೀಕರು ತಿಳಿಸಿದ್ದಾರೆ.ಪಟ್ಟಣ ಸೇರಿದಂತೆ ತಾಲೂಕಿನಾಧ್ಯಂತ ಗ್ರಾಮೀಣ ಪ್ರದೇಶಗಳಲ್ಲಿಯೂ ಇದೇ ತರನಾಗಿ,ಗ್ರಾಮಸ್ಥರು ಸ್ವಯಂ ಏರೀಯಾ ಶೀಲ್ಡೌನ್ ಕ್ರಮ ಅನುಸರಿಸುತ್ತಿದ್ದಾರೆ.ಜಿಲ್ಲಾಡಳಿತ ಸಂಪೂರ್ಣ ಲಾಕ್ ಡೌನ್ ಘೋಷಿಸಿದೆ,ಕೂಡ್ಲಿಗಿ ತಾಲೂಕಿನಲ್ಲಿ ಪಟ್ಟಣದಲ್ಲಿ ನಾಗರೀಕರು ಹಾಗೂ ಗ್ರಾಮೀಣ ಜನತೆ.ಒಂದೆಜ್ಜೆ ಮುಂದಿದ್ದು ಬಹುತೇಕ ಕಡಗಳಲ್ಲಿ ಸ್ವಯಂ ಪ್ರೇರಿತ ಶೀಲ್ಡೌನ್ ಅನುಸರಿಸುತ್ತಿದ್ದಾರೆ,ಕಾರಣ ಕರೋನಾ ಸೋಂಕಿನ ಕುರಿತಾದ ಭಯಕ್ಕೋ ಅಥವಾ ಜ್ಞಾನೋದ್ಭವದ ಪರಿಣಾಮವೋ..?? ಇದು ಜಿಲ್ಲಾಡಳಿತ ಹಾಗೂ ತಾಲುಕು ಆಡಳಿತ ಆರೋಗ್ಯ ಇಲಾಖೆಗೆ ಸಧ್ಯ ಸಾಮಾಧಾನದ ಸಂಗತಿಯಾಗಿದೆ, ಸೋಂಕಿತರ ಪ್ರಮಾಣ ಕಡಿಮೆಯಾಗಬೇಕು ಹಾಗೂ ಸಾವು ನೋವು ತಗ್ಗಬೇಕಿದೆ ಅಷ್ಟೇ .
ವರದಿ – ಚಲುವಾದಿ ಅಣ್ಣಪ್ಪ