ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ. ಚುನಾವಣೆಗೆ ಪ್ರಮಾಣಿಕ ಅಭ್ಯರ್ಥಿಗಳು ಸೋತರು ಅದು ಸೋಲಲ್ಲ, ಗೆಲುವಿನ ಮುನ್ಸೂಚನೆ.

Spread the love

ತಾವರಗೇರಾ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಚುನಾವಣೆಯು ಪಲಿತಾಂಶದ ಸುದ್ದಿ ಹೊರಬರುತ್ತಿದ್ದಂತೆ ಪ್ರಮಾಣಿಕವಾಗಿ ನಾಮಪತ್ರ ಸಲ್ಲಿಸಿ ಯಾವುದೆ ದೊಂದುವೆಚ್ಚ ಮಾಡದೆ ಪ್ರತಿಯೊಬ್ಬ ಮದತಾರರ ಬಳಿ ಪ್ರಮಾಣಿಕತೆಯಿಂದ (ಮೌಲ್ಯಾಧರಿತವಾಗಿ) ಮತ ಕೇಳಿ ಪ್ರಮಾಣಿಕ ಮತದಾರರಿಂದ ನಾವು ಮತ ಪಡೆದಿದ್ದೆವೆ. ನಮ್ಮ ಬೆಎನ್ನ ಹಿಂದೆ ಪ್ರಮಾಣಿಕರು ಇನ್ನೂ ಜೀವಂತ ಇದ್ದಾರೆ ಎಂಬುವುದಕ್ಕೆ ಇದೇ ಸಾಕ್ಷಿ. ಏನೇ ಇರಲಿ ತಾವರಗೇರಾ ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ,ದ ಚುನಾವಣೆಯು ಸುಮಾರು 2009 ರಲ್ಲಿ ನಡೆದಿದ್ದು, ಅಲ್ಲಿಂದ ಇಲ್ಲಿಯವರೆಗೂ ಯಾವುದೇ ಚುನಾವಣೆಯಾಗದೆ ಕೇವಲ ರಾಜಿ ಸಂಧಾನದ ಮೂಲಕ ಅವಿರೋಧವಾಗಿ ಆಯ್ಕೆ ಮಾಡಿಕೊಳ್ಳುತ್ತಿದ್ದರು, ಆದರೆ ಈ ಸಾರಿ ಈ ಚುನಾವಣೆ ನಡೆಯಲೆಬೇಕೆಂದು ತಾವರಗೇರಾ ಪಟ್ಟಣದ ಮೂರನೇ ಶಕ್ತಿಯಾದವ ಬಣವು ಈ ಸಾರಿ ಪಣ ತೊಟ್ಟು ನಿಂತು ಚುನಾವಣೆ ನಡೆಸಲು ಮುಂದಾಗಿರುವುದು ನೋಡಿದರೆ ನಾವು ಮೊದಲೆ ಗೆದ್ದಾಯಿತು. ಕಾರಣ ಚುನಾವಣೆಗೆ ಅವಕಾಶ ಕಲ್ಪಿಸಿಕೊಟ್ಟಿದ್ದೆವೆ. ಜೊತೆಗೆ ಪ್ರತಿಯೊಬ್ಬ ಮತದಾರರ ಬಳಿ ಪ್ರತಿಯೊಬ್ಬ ಅಭ್ಯರ್ಥಿಯರನ್ನ ಮನೆ ಭಾಗಿಲಿಗೆ ಕಳಿಸಿಕೊಟ್ಟಿದ್ದೆವೆ ಅಂದ್ರೆ ನಾವು ಗೆದ್ದಿದ್ದೆವೆ ಎಂದೆ ಅರ್ಥ ಅಲ್ವಾ? ಈ ಚುನಾವಣೆ ಪಟ್ಟಣ ಪಂಚಾಯತ ಚುನಾವಣೆಗಿಂತಲು ರಂಗೇರಿತ್ತು, ಕೆಲವು ಅಭ್ಯರ್ಥಿಗಳು ಅಧಿಕಾರದ ಚುಕ್ಕಾಣೆಗಾಗಿ ಹಣದ ಹೊಳೆಯ ಅರಿಸಿದ್ದಾರೆ ಅಂದರೆ ತಪ್ಪಾಗಲಾರದು, ಈ ಚುನಾವಣೆಯಲ್ಲಿ ಪ್ರಮಾಣಿಕ ಅಭ್ಯರ್ಥಿಗಳು ಸೋಲಲು ಕಾರಣ ಹಣದ ಸಮಸ್ಯ, ವಿಐಪಿಗಳ ಇನಪ್ಲೇನ್ಸ್ ಹಾಗೂ ಸುಳ್ಳು ಭರವಸೆಗಳ ಕೊರತೆಯಿಂದ ನಾವು ಸೋತಿದ್ದೆವೆ ವಿನಹ, ಯಾಕೆಂದ್ರೆ ನಮ್ಮಲ್ಲಿ ಹಣವಿಲ್ಲ, ವಿಐಪಿಗಳ ಬೆಂಬಲವಿಲ್ಲ, ಸುಳ್ಳುಗಳ ಭರವಸೆಯಂತು ನಮ್ಮಲ್ಲಿ ಇಲ್ವೆ ಇಲ್ಲಾ? (ಎನಿದ್ರೂ ಎಕ್ ಮಾರ್ ದೋ ತುಕ್ಡಾ) ನೇರ ದಿಟ್ಟ ನಿರಂತರ ಹಾಗಾಗಿ ನಾವು ಸೋತಿದ್ದೆವೆ, ನೇರ ನಿಷ್ಠೂರವಾಗಿ ಮಾತನಾಡುತ್ತೆವೆ ಅಲ್ವಾ ಅದು ಇನ್ನೂ ಕೆಲವರಿಗೆ ಆಗೋದಿಲ್ಲ. ಆದರೂ ಮುಂದೊಂದು ದಿನ ಈ ಮೇಲೆ ತಿಳಿಸಿರುವ ಪ್ರತಿಯೊಂದನ್ನು ಮೆಟ್ಟಿ ನಿಲ್ಲುವಂತ ಶಕ್ತಿ ನಮ್ಮ ಜನತೆ ನೀಡುತ್ತಾರೆ ಎಂಬ ಭರವಸೆ ನಮಗಿದೆ.

ಒಟ್ಟಿನಲ್ಲಿ ಈ ಚುನಾವಣೆಗೆ ಸ್ಪರ್ಧಿಸಿದವರಲ್ಲಿ ಕೆಲವರು ಸೋತರ ಅದು ಅನುಭವವಾಗಿರಲಿ,ಇನ್ನೂ ಕೆಲವರು ಗೆದ್ದಿದ್ದಾರೆ ಅದು ಅಹಂಕಾರವಾಗದಿರಲಿ, ಒಟ್ಟಿನಲ್ಲಿ ಇಲ್ಲಿರುವುದು ನಾವು/ನೀವುಗಳೆ ವರತು ಬೇರೆ ಯಾರು ಇಲ್ಲಾ, ದ್ವೇಷದ ರಾಜಕಾರಣ ಬೇಡಾ, ಪ್ರತಿಯ ರಾಜಕಾರಣ ಇರಲಿ, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ನಿ., ಅಭಿವೃದ್ದಿಗಾಗಿ ಮತ್ತು ರೈತ ಪರ ಏಳಿಗೇಗಾಗಿ, ದೀನ ದಲೀತರ ಪರವಾಗಿ ಅಗಲಿರುಳು ಶ್ರಮಿಸಲೆಂದು ಪ್ರಗತಿ ಪರ ಮುಖಂಡರಾದ ರಾಜಾನಾಯ್ಕರವರು ಮತ್ತು  ಸಮಾಜಸೇವಕರಾದ ಶ್ರೀ ಲಕ್ಷ್ಮಣ ಮುಖಿಯಾಜಿಯವರು ತಿಳಿಸಿದರು ಮತ್ತು ತಾವರಗೇರಾ ನ್ಯೂಸ್ ಪತ್ರಿಕಾ ಬಳಗದವತಿಯಿಂದ ಶುಭ ಆರೈಸುತ್ತೆವೆ.

ವರದಿ-ಸಂಪಾದಕೀಯಾ.

Leave a Reply

Your email address will not be published. Required fields are marked *