ಇಂದು ತಾವರಗೇರಾ ಪಟ್ಟಣದ ಸರ್ವ ಶಾಲಾ ಕಾಲೆಜುಗಳಲ್ಲಿ ಹಾಗೂ ಪಟ್ಟಣದ ನಾನಾ ಕಡೆ ಸ್ವತಂತ್ರ್ಯ ದಿನಾಚರಣೆಯ ನಿಮಿತ್ಯ ಸಾರ್ವಜನಿಕರ ಜೊತೆಗೂಡಿ ದ್ವಜಾರೋಹಣ ಹಮ್ಮಿಕೊಂಡರು. ತಾವರಗೇರಾ ಪಟ್ಟಣದ ರಾಜೀವುಗಾಂಧಿ ಕ್ರೀಡಾಂಗಣದಲ್ಲಿ ಪಟ್ಟಣ ಪಂಚಾಯತಿಯ ಮುಂದಾಳತ್ವದಲ್ಲಿ ಸಾರ್ವಜನಿಕವಾಗಿ 77 ನೇ ಸ್ವಾತಂತ್ರ್ಯ ದಿನಾಚರಣೆಯ ದ್ವಜಾರೋಹಣ ಹಮ್ಮಿಕೊಂಡರು. ಈ ಕಾರ್ಯಕ್ರಮದ ನಿಮಿತ್ಯವಾಗಿ ಎಲೆಮರಿ ಕಾಯಿಯಂತೆ ಹಗಲಿರುಳು ಎನ್ನದೆ ಶ್ರಮಿಸುತ್ತಿರುವ ಮಾಧ್ಯಮ ಮಿತ್ರರು ಹಾಗೂ ಹಲವು ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ, ಜೊತೆಗೆ ಶಾಲಾ ಕಾಲೇಜುಗಳಲ್ಲಿ ಉನ್ನತ ಹಂಕ ಪಡದ ವಿಧ್ಯಾರ್ಥಿಗಳಿಗೆ, ಹಾಗೂ ದೇಶ ಕಾಯೋ ಯೋಧರಿಗೂ ಮತ್ತು ಊರಿನ ಸಂಘ/ಸಂಸ್ಥೆಯ ಪ್ರಮುಖರಿಗೆ ಸನ್ಮಾನಿಸಿ ಗೌರವಿಸುವ ಮೂಲಕ ಈ ಕಾರ್ಯಕ್ರಮಕ್ಕೆ ಮೇರಗು ತಂದಿತ್ತು. ವಿವಿದ ಹೋರಾಟಗಾರರು ವೇಷ/ಭೂಷಣ(ಉಡುಪು)ಗಳನ್ನ ಹಾಕಿಕೊಂಡು ನೋಡುಗರ ಮನಸ್ಸು ಮನ ಮೆಚ್ಚುವಂತೆ ಮಾಡಿತು. ಈ ಸಂಧರ್ಭದಲ್ಲಿ ವಿಧ್ಯಾರ್ಥಿಗಳ ನೇತೃತ್ವದಲ್ಲಿ ನಾಡ ಗೀತೆ ಹಾಡುವ ಮುಖಾಂತರ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣಕ್ಕೆ ಚಾಲನೆ ನೀಡಿದರು.
ಮಧ್ಯರಾತ್ರಿಯ ಗಂಟೆ ಹೊಡೆಯುತ್ತಿದ್ದಂತೆ ಜಗತ್ತು ಮಲಗಿರುವಾಗ ಭಾರತವು ಚಲನಶೀಲತೆ ಮತ್ತು ಸ್ವಾತಂತ್ರ್ಯಕ್ಕೆ ಎಚ್ಚರಗೊಳ್ಳುತ್ತದೆ. ಇತಿಹಾಸದಲ್ಲಿ ಅಪರೂಪವಾಗಿ ಬರುವ ಇಂಥ ಈ ಗಳಿಗೆಯಲ್ಲಿ ಹಳತಿನಿಂದ ಹೊಸತಿಗೆ ಕಾಲಿಡುತ್ತಿದ್ದೇವೆ . ಹಳೆಯ ಯುಗ ಮುಗಿದು ಬಹುಕಾಲ ಅದುಮಿಟ್ಟ ದೇಶವೊಂದರ ಚೇತನವು ತನ್ನ ಅಭಿವ್ಯಕ್ತಿಯನ್ನು ಕಂಡುಕೊಳ್ಳುತ್ತಿದೆ.. ಇವತ್ತು ನಾವು ನಮ್ಮ ದುರಾದೃಷ್ಟದ ಕಾಲವನ್ನು ಮುಗಿಸುತ್ತಿದ್ದೇವೆ ಮತ್ತು ಭಾರತವು ತನ್ನನ್ನು ತಾನು ಮತ್ತೆ ಕಂಡುಕೊಳ್ಳುತ್ತಿದೆ . ಭಾರತ ದೇಶ ೧೯೪೭ ಆಗಸ್ಟ್ ೧೫ ರಂದು ಸ್ವತಂತ್ರವಾಯಿತು. ಪ್ರತಿ ವರ್ಷ ಭಾರತದಾದ್ಯಂತ ಈ ದಿನವನ್ನು ಸ್ವಾತಂತ್ರ್ಯ ದಿನಾಚರಣೆಯನ್ನಾಗಿ ಆಚರಿಸಲಾಗುವುದು. ಈ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ತಾವರಗೇರಾ ಪಟ್ಟಣ ಪಂಚಾಯತಿಯ ಮುಖ್ಯಾಧಿಕಾರಿಗಳಾದ ನಭಿಸಾಬ ಖುಧಾನರವರು ಹಾಗೂ ಪಟ್ಟಣ ಪಂಚಾಯತಿಯ ಸರ್ವ ಸದಸ್ಯರುಗಳು ಮತ್ತು ವಿ.ಎಸ್.ಎಸ್.ಎನ್. ನ ನೂತನ ಚುನಾಯಿತ ಪ್ರತಿನಿಧಿಗಳು, ಜೊತೆಗೆ ಇತರೆ ಅಧಿಕಾರಿಗಳ ವರ್ಗ ಸರ್ವ ಸಿಂಬಂದಿಗಳು ಪಾಲುಗೊಂಡಿದ್ದರು. ಹಾಗೂ ಶಾಲಾ ಕಾಲೇಜಿನ ಮುಖ್ಯಗುರುಗಳು ಜೊತೆಗೆ ಸರ್ವ ಶಿಕ್ಷಕರ ವೃಂದದವರು, ಊರಿನ ಗಣ್ಯರು, ಸರ್ವ ಶಾಲೆಯ ವಿಧ್ಯಾರ್ಥಿ/ನಿಯರು ಪಾಲುಗೊಂಡಿದ್ದರು. ಈ ಕಾರ್ಯಕ್ರಮವನ್ನ ಯಶಸ್ವಿಗೊಳಿಸಿದರು.
ವರದಿ-ಸಂಪಾದಕರು