ತಾವರಗೇರಾ ಹೋಬಳಿ ವ್ಯಾಪ್ತಿಯಲ್ಲಿ ಬರುವ ನಾರಿನಾಳ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ 77ನೇ ಸ್ವಾತಂತ್ರ್ಯ ದಿನಾಚರಣೆಯು ಅದ್ದೂರಿಯಾಗಿ ಜರುಗಿತು. ಸಾರ್ವಜನಿಕವಾಗಿ 77 ನೇ ಸ್ವಾತಂತ್ರ್ಯ ದಿನಾಚರಣೆಯ ದ್ವಜಾರೋಹಣ ಹಮ್ಮಿಕೊಂಡರು. ಈ ಕಾರ್ಯಕ್ರಮದಲ್ಲಿ ವಿವಿದ ವೇಷ/ಭೂಷಣ(ಉಡುಪು)ಗಳನ್ನ ಹಾಕಿಕೊಂಡು ನೋಡುಗರ ಮನಸ್ಸು ಮನ ಮೆಚ್ಚುವಂತೆ ಮಾಡಿತು. ಈ ಸಂಧರ್ಭದಲ್ಲಿ ವಿಧ್ಯಾರ್ಥಿಗಳ ನೇತೃತ್ವದಲ್ಲಿ ನಾಡ ಗೀತೆ ಹಾಡುವ ಮುಖಾಂತರ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣಕ್ಕೆ ಚಾಲನೆ ನೀಡಿದರು. ಈ ಸ್ವಾತಂತ್ರ್ಯ ದಿನಾಚರಣೆಯ ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯಪಾಧ್ಯಯರಾದ ನಾಗರಾಜ ಐಲಿಯವರಿಗೆ ಸನ್ಮಾನ ಮಾಡಿ ಬಿಳ್ಕೋಡಿಗೆ ಸಂಭ್ರಮ ಅಚರಿಸಿದರು, ನಾರಿನಾಳ ಗ್ರಾಮ ಪಂಚಾಯತಿಯ ಸದಸ್ಯರುಗಳು ಹಾಗೂ ಶಾಲಾ ಮುಖ್ಯಗುರುಗಳು ಜೊತೆಗೆ ಸರ್ವ ಶಿಕ್ಷಕರ ವೃಂದದವರು, ಊರಿನ ಗಣ್ಯರು, ಸರ್ವ ಶಾಲೆಯ ವಿಧ್ಯಾರ್ಥಿ/ನಿಯರು ಪಾಲುಗೊಂಡಿದ್ದರು. ಈ ಸಂದರ್ಭದಲ್ಲಿ ಕರೀಶ್ಮಾ ಪ್ಯಾಕ್ಟರಿ ಮ್ಯಾನೇಜಮೆಂಟರವರಾದ ನಾಯಡು ಹಾಗೂ ಸತೀಶ ದೇಸಾಯಿ ಹಾಗೂ ಸಿಬ್ಬಂದಿ ವರ್ಗದವರಿಂದ ಶಾಲಾ ಮಕ್ಕಳಿಗೆ ಬುಕ್ಕು/ಪೆನ್ನು ವಿತರಣೆ ಮಾಡಿದರು. ಈ ಸದಂರ್ಭದಲ್ಲಿ ಊರಿನ ಗಣ್ಯರಿಗೂ ಹಾಗೂ ಗ್ರಾ.ಪಂ ಸದಸ್ಯರಿಗೂ ಮತ್ತು ಊರಿನ ಗಣ್ಯರಿಗೂ ಸನ್ಮಾನಿಸಲಾಯಿತು ಒಟ್ಟಿನಲ್ಲಿ ಈ ಕಾರ್ಯಕ್ರಮವನ್ನ ಯಶಸ್ವಿಗೊಳಿಸಿದರು.
ವರದಿ-ಉಪಳೇಶ ವಿ.ನಾರಿನಾಳ.