ಸಿಂಧನೂರಿನ ಪ್ರಗತಿಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ನಡೆದ ಕ್ರಾತಿಕಾರಿ ಕವಿ ಗದ್ದರವರ ನುಡಿ ನಮನ ಕಾರ್ಯಕ್ರಮ ಯಶಸ್ವಿ.

Spread the love

ಕಳೆದ 4 ದಿನಗಳ ಹಿಂದೆ ಕೆಲವು ವಿಚಾರಗಳನ್ನು ವ್ಯಾಟ್ಸಾಪ್ ಗೆಳೆಯರೊಂದಿಗೆ ಹಂಚಿಕೊಳ್ಳಲಾಗಿತ್ತು. ಗದ್ದರವರ  ನೆನಪುಗಳು  ಮತ್ತೆ ಮತ್ತೆ ಕಾಡುತ್ತಿರುವುದರಿಂದ ಪುನ ಕೆಲವು ಅಭಿಪ್ರಾಯಗಳನ್ನು ನಿಮೊಂದಿಗೆ ಹಂಚಿಕೊಳ್ಳಲಾಗಿದೆ. ಜನರನ್ನು ಶೋಷಣೆ ಮಾಡುವ ಆಳುವ ವರ್ಗದ  ವ್ಯಕ್ತಿಗಳ, ರಾಜಕೀಯ ಪಕ್ಷಗಳ ನಾಯಕರ ಮತ್ತು ವಿವಿಧ ಹಂತದ ರಾಜಕಾರಣಿಗಳ ಜಾತಿ ಉಪಜಾತಿಯ ಮೂಲ ಬೇಗನೆ ಗೊತ್ತಾಗುತ್ತದೆ ಅಥವಾ ರಾಜಕೀಯ ಲಾಭ ಪಡೆಯಲು ಬಹಿರಂಗ ಪಡೆಸಲಾಗುತ್ತೆ. ಆದರೆ ಜನತೆಯ ವಿಮೋಚನೆಗಾಗಿ ಹಾಗೂ ಸಾಮಾಜಿಕ ವ್ಯವಸ್ಥೆಯ ಬದಲಾವಣೆಗಾಗಿ ಹೋರಾಡುವವರ  ಜಾತಿ ಉಪ ಜಾತಿಯ ಮೂಲವೆ ಗೊತ್ತಾಗುವುದಿಲ್ಲ. ಅಂತಹ ಸಂಘಟನೆಯೊಳಗಡೆ  ಇರುವ ಸಾವಿರಾರು ಜನ ಕಾರ್ಯಕರ್ತರು, ನೂರಾರು ಜನ ಪ್ರಮುಖ ಸಂಘಟಕರು  ಯಾವ ಯಾವ ಜಾತಿಯವರು ಎನ್ನುವುದೆ ಗೊತ್ತಿರುವುದಿಲ್ಲ. 1992 ರಿಂದ ಅಂದರೆ 31 ವರ್ಷಗಳಿಂದ ಸ್ವತಃ ನನಗೆ ಇಂತಹ ಅನುಭವವಾಗಿದೆ. ದೇಶದ  20 ರಾಜ್ಯ ಕಮೀಟಿಗಳಿಂದ  ರಾಷ್ಟ್ರೀಯ ಸಭೆಗೆ  ಬರುತ್ತಿರುವ ಸಂಘಟಕರು ಮತ್ತು ಪ್ರಮುಖ ಸಂಗಾತಿಗಳು ಯಾವ ಯಾವ ಜಾತಿಯವರು ಎನ್ನುವ ವಿಷಯವನ್ನು ಪರಸ್ಪರರು ತಿಳಿಕೊಳ್ಳುವುದಿಲ್ಲ.ಈಗಲೂ ಕೂಡ ಯಾರು ಕೇಳುವುದಿಲ್ಲ ಹೇಳುವುದಿಲ್ಲ. ಜಾತ್ಯತೀತ ಸಿದ್ಧಾಂತ ಹಾಗೂ ವಿಚಾರಗಳನ್ನು ಹೊಂದಿರುವ ಸಂಘಟನೆಗಳಿಗೆ ಜಾತಿ, ಉಪಜಾತಿಯ ಹೇಳಿಕೊಳ್ಳುವ ಅಥವಾ ಪ್ರಚಾರ ಮಾಡುವ ಅಗತ್ಯವಿರುವುದಿಲ್ಲ.

ಕಾರಣವಿಷ್ಟೇ, ಹೋರಾಟಗಾರರಿಗೆ ಏಕಂದರೆ  ಸಾಮಾಜಿಕ ವ್ಯವಸ್ಥೆಯನ್ನು ಬದಲಾಯಿಸುವ ಗುರಿ ಮತ್ತು ದೋರಣೆಯ ವ್ಯಕ್ತಿಗಳಿಗೆ, ಪರ್ಯಾಯ ರಾಜಕೀಯ ವಿಚಾರಗಳೆ   ಮುಖ್ಯವಾಗಿರುತ್ತವೆ. ಆಳುವ ವರ್ಗದ ರಾಜಕಾರಣೆಗಳಿಗೆಗೆ  ಜನರನ್ನು ಶೋಷಣೆ ಮಾಡಲು, ಜಾತಿ ಉಪಜಾತಿಯೆ ಮುಖ್ಯ ಬಂಡವಾಳವಾಗಿರುತ್ತದೆ. ದೇಶದ 99 ರಷ್ಟಿರುವ ದುಡಿಯುವ ಜನರನ್ನು ಸಂಘಟಿಸುವ ಸಂಘಟನೆಗಳಿಗೆ ಜಾತಿ, ಉಪಜಾತಿಯನ್ನು ಮೀರಿ ವರ್ಗಾಧಿರತವಾಗಿ ಜನರನ್ನು ಐಕ್ಯಗೊಳಿಸುವ ಅತ್ಯಂತ ಮಹತ್ವವಾಗಿರುತ್ತವೆ. ಆದರೂ ಕೂಡ ಜಾತಿ ಜಾತಿಗಳ ಮೇಲೆ ನಡೆಯುವ ದೌರ್ಜನ್ಯಗಳ ವಿರುದ್ಧ ರಾಜಿರಹಿತವಾಗಿ ಹೋರಾಡುವ ಗುರಿ ಹೊಂದಲಾಗಿರುತ್ತದೆ. ದೇಶದ ಕೋಟ್ಯಂತರ ಜನರಿಗೆ  ಕ್ರಾಂತಿಕಾರಿ ಹಾಡುಗಾರರಾಗಿದ್ದ  ಗದ್ದರವರ  ಜಾತಿಯ ಮೂಲವೆ ಗೊತ್ತಾಗುವುದಿಲ್ಲ. ಬಹುಸಂಖ್ಯಾತ ದುಡಿಯುವ ಜನರ  ಪರವಾಗಿ ಹೋರಾಡುವವರು ಜಾತಿ ಉಪಜಾತಿಯನ್ನು ಮೀರಿ ಜನರ ಪ್ರೀತಿ ಗಳಿಸಿರುತ್ತಾರೆ. ಗದ್ದರವರು ಕೂಡ ದೇಶದ ಕೋಟ್ಯಂತರ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. ಆದರೆ ಇಳಿ ವಯಸ್ಸಿನಲ್ಲಿ ಕ್ರಾಂತಿಕಾರಿ ವಿಚಾಗಳಿಂದ ದೂರ ಉಳಿದಿದ್ದು ಮಾತ್ರ  ಎಲ್ಲಾ ಹೋರಾಟಗಾರರಲ್ಲಿ ಪ್ರಶ್ನೆಯಾಗಿ ಉಳಿದೆ. ಏನೆ ಆದರೂ ಕ್ರಾಂತಿಕಾರಿ ಚಳವಳಿಗೆ  ಗದ್ದರವರವರು  ನೀಡಿದ ಕೊಡುಗೆ  ಮತ್ತು  ಪರಿಶ್ರಮಕ್ಕೆ ಬೆಲೆ ಕಟ್ಟಲಾಗದು.

ವರದಿ-ಉಪಳೇಶ ವಿ.ನಾರಿನಾಳ

Leave a Reply

Your email address will not be published. Required fields are marked *