ದಿನಾಂಕ 14-8-2023 ಸೋಮವಾರ ದಂದು ಬೆಂಗಳೂರು ನಗರದ ಫ್ರೀಡಂ ಪಾರ್ಕಿನಲ್ಲಿ ರಾಜ್ಯದ ಪತ್ರಕರ್ತರ ಬಸ್ ಪಾಸ್ ಹಿರಿಯ ಪತ್ರಕರ್ತರಿಗೆ ಪಿಂಚಣಿ ಆರೋಗ್ಯ ವಿಮೆ ಹಾಗೂ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ರಾಜ್ಯ ಅದ್ಯಕ್ಷರಾದ ಮಲ್ಲಿಕಾರ್ಜುನ ಬಂಗ್ಲೆ ಮಹಾತ್ಮ ಗಾಂಧಿಯ ಭಾವಚಿತ್ರಕ್ಕೆ ದೀಪ ಬೆಳಗುವ ಮೂಲಕ ಪ್ರತಿಭಟನೆಗೆ ಚಾಲನೆ ನೀಡಿ ಮಾತನಾಡಿದರು. ರಾಜ್ಯ ಸರ್ಕಾರ ಪತ್ರಕರ್ತರಿಗೆ ಸಿಗುವಂತ ಹಕ್ಕನ್ನು ನೀಡಬೇಕೆಂದು ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು, ರಾಜ್ಯಾದ್ಯಂತ ಜಿಲ್ಲೆ ಮತ್ತು ತಾಲ್ಲೂಕು ಪತ್ರಿಕೆಗಳ ಸಂಪಾದಕರು, ವರದಿಗಾರರು ಹಾಗೂ ಮಾಧ್ಯಮ ವರದಿಗಾರರು ಆಗಮಿಸಿದ್ದು, ಪತ್ರಕರ್ತರ ಹಕ್ಕುಗಳನ್ನು ಸರ್ಕಾರ ಈಡೇರಿಸಿ, ವಾರ್ತಾ ಇಲಾಖೆಗೆ ಆದೇಶಿಸಬೇಕೆಂದು ಸರ್ಕಾರದ ವಿರುದ್ಧ ಸಿಡಿದೆದ್ದ ಪತ್ರಕರ್ತರು ಬಂಗ್ಲೆ ಮಲ್ಲಿಕಾರ್ಜುನ ನೇತೃತ್ವದಲ್ಲಿ ಪ್ರತಿಭಟಿಸಿದರು. ಮುಖ್ಯಮಂತ್ರಿಗಳ ಮಾಧ್ಯಮ ಸಲಹೆಗಾರರಾದ ಕೆ.ವಿ ಪ್ರಭಾಕರ್ ಅವರಿಗೆ ಮನವಿಯನ್ನು ಸಲ್ಲಿಸಲಾಯಿತು. ಮನವಿಯನ್ನು ಸ್ವೀಕರಿಸಿದ ಕೆ.ವಿ ಪ್ರಭಾಕರ್ ಮಾತನಾಡಿ ಪತ್ರಕರ್ತರಿಗೆ ಉಚಿತ ಬಸ್ ಪಾಸ್, ಮಾಶಾಸನ, ಪಿಂಚಣಿ ಇನ್ನಿತರೆ ಅಗತ್ಯ ಸೌಲಭ್ಯಗಳನ್ನು ನಮ್ಮ ಪತ್ರಕರ್ತರಿಗೆ ಒದಗಿಸಲು ಮುಖ್ಯಮಂತ್ರಿಗಳೊಂದಿಗೆ ಮಾತನಾಡುತ್ತೇನೆಂದು ಭರವಸೆ ನೀಡಿದರು. ಒಟ್ಟಿನಲ್ಲಿ 4ನೇ ಅಂಗವೆಂದು ನಾವು ಹೆಮ್ಮೆಯಿಂದ ಹೇಳುತ್ತೆವೆ, ಆದರೆ ನಮಗೆ ಸರ್ಕಾರದಿಂದಾಗಲಿ ರಾಜಕೀಯ ನಾಯಕರಿಂದಾಗಲಿ ನಮಗೆ ಸೂಕ್ತ ರಕ್ಷಣೆವಿಲ್ಲ, ಜೊತೆಗೆ ನಮ್ಮ ಕುಟುಂಬಕ್ಕೆ ಸೂಕ್ತ ಪರಿಹಾರವಿಲ್ಲದೆ, ಹಗಲಿರುಳು ಎನ್ನದೆ ದಿನದ 24 ಗಂಟೆ ಸೇವೆ ಸಲ್ಲಿಸುತ್ತಿದ್ದೆವೆ. ಆದರೆ ಕಾಳಜಿಯಿಲ್ಲದ ಸರ್ಕಾರ ಈಗಾದರೂ ನಮ್ಮ ಬಢೆಇಕೆಗಳ ಬಗ್ಗೆ ಸೂಕ್ತ ಪರಿಹಾರ ಒದಗಿಸುವಲ್ಲಿ ಎಷ್ಟರ ಮೆಟ್ಟಿಗೆ ಕಾರ್ಯನಿರ್ವಹಿಸುತ್ತೊ ಕಾದುನೋಡಬೇಕಾಗಿದೆ.
ವರದಿ-ಸಂಪಾದಕೀಯಾ