ನಾಗರ ಪಂಚಮಿ ಹಬ್ಬವು ನಮ್ಮ ಭಾರತದ ಸಂಸ್ಕೃತಿಯಲ್ಲಿ ಅನೇಕ ಕಡೆಗಳಲ್ಲಿ ಆಚರಿಸುವಂತಹ ಒಂದು ಹಬ್ಬ ಅಂದ್ರೆ ಅದು ಹಿಂದೂಗಳು ಆಚರಿಸುವಂತ ಒಂದು ದೊಡ್ಡ ಹಬ್ಬವಾಗಿದೆ. ಇದನ್ನು ನಾವುಗಳು ಎಲ್ಲ ಹಬ್ಬಗಳಿಗಿಂತ ಮೊದಲು ಶ್ರಾವಣ ಮಾಸದಲ್ಲಿ ಆಚರಿಸುವಂತ ಹಾಗೂ ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿಯಂದು ಆಚರಿಸುವ ಹಬ್ಬ ನಾಗರ ಪಂಚಮಿ ಹಬ್ಬವನ್ನಾಗಿ ಆಚರಿಸಲಾಗುತ್ತದೆ. ಈ ಹಬ್ಬದಂದು ನಾಗ ದೇವತೆಗಳನ್ನು ಪೂಜಿಸುವ ಸಲುವಾಗಿ ದೇವಸ್ಥಾನಗಳಲ್ಲಿ ಹಾಗೂ ಹುತ್ತಗಳಿಗೆ ಹೋಗಿ ಹಾಲೇರದು ತಮಗೆ ಬಂದಂತಹ ಕಷ್ಟ, ನೋವು, ಕೆಡುಕುಗಳಿಂದ ದೂರ ಮಾಡಿ.ಸುಖ-ಶಾಂತಿ-ನೆಮ್ಮದಿ ಮತ್ತು ಇಷ್ಟಾರ್ಥಗಳನ್ನು ದಯಪಾಲಿಸಿ ಕಾಪಾಡುವಂತೆ ಪ್ರಾರ್ಥಿಸಿ ಹುತ್ತಗಳಿಗೆ ಹಾಲನ್ನು ಅರ್ಪಿಸುತ್ತಾರೆ. ಮುಖ್ಯವಾಗಿ ಈ ಹಬ್ಬವು ಅಣ್ಣ-ತಂಗಿಯರ ಹಬ್ಬ ಎಂದು ಕರೆಯಲಾಗುತ್ತದೆ. ಅಣ್ಣ-ತಂಗಿಯರು ಇಬ್ಬರೂ ಸೇರಿ ಪ್ರಾರ್ಥಿಸಿ ಪೂಜಿಸುವ ಹಬ್ಬವೇ ಈ ನಾಗರ ಪಂಚಮಿ ಹಬ್ಬ ಎಂದು ಪುರಾಣ ಕಾಲದಿಂದಲೂ ಬಂದಿದೆ ಎಂಬ ಪ್ರತೀತಿ ಇದೆ. ಪುರಾಣ ಕಾಲದಲ್ಲಿ ಜನಮೇಜಯ ರಾಜನ ತಂದೆಯ ಸಾವಿಗೆ ಸರ್ಪವೊಂದು ಕಾರಣ ಎಂದು ತಿಳಿದು ಭೂಲೋಕದಲ್ಲಿ ಇರುವಂತ ಸರ್ಪಸಂಕೂಲವನ್ನೆಲ್ಲಾ ನಿರ್ನಾಮ ಮಾಡಲು “ಸರ್ಪಯಜ್ಞ”ವನ್ನು ಮಾಡುತ್ತಾನೆ. ಆ ಸಂದರ್ಭದಲ್ಲಿ ಸರ್ಪಗಳ ದೂರದ ಬಂಧುವಾಗಿದ್ದ ಆಸ್ತಿಕ ಋಷಿಯು “ಸರ್ಪಯಜ್ಞ” ಮಾಡುವ ಜನಮೇಜಯ ರಾಜನನ್ನು ಪ್ರಸನ್ನಗೊಳಿಸಿಕೊಂಡಾಗ ಜನಮೇಜಯ ರಾಜನು ಪ್ರತ್ಯಕ್ಷವಾಗಿ ಬಂದು ಆಸ್ತಿಕ ಋಷಿಯನ್ನು ಏನು ವರವನ್ನು ಬೇಕು ಕೇಳು ಎಂದಾಗ ಆಸ್ತಿಕ ಋಷಿಯು ಪ್ರಾಣಿಹಿಂಸೆ ಮಹಾಪಾಪ ನೀನು ಈಗಾಗಲೇ ಮಾಡುತ್ತಿರುವ “ಸರ್ಪಯಜ್ಞ” ಯಾಗವನ್ನು ನಿಲ್ಲಿಸಬೇಕು ಎಂಬ ವರವನ್ನು ಕೇಳಿದಾಗ ಜನಮೇಜಯ ರಾಜನು ಆಸ್ತಿಕ ಋಷಿಯ ಮಾತಿಗೆ ಬೆಲೆಯ ಕೊಟ್ಟು “ಸರ್ಪಯಜ್ಞ” ಯಾಗವನ್ನು ನಿಲ್ಲಿಸುವನು.ಆ ಯಾಗವನ್ನು ನಿಲ್ಲಿಸಿದ ದಿನವೇ ಪಂಚಮಿಯಾಗಿತ್ತು. ಹೀಗೆ ಒಂದಾನೊಂದು ಕಾಲದಲ್ಲಿ ಒಂದು ಊರಿನಲ್ಲಿ ಒಬ್ಬಳು ತಂಗಿ ಮತ್ತು ಅವಳಿಗೆ ನಾಲ್ಕು ಜನ ಅಣ್ಣಂದಿರು ಇದ್ದರು. ಮನೆಯಲ್ಲಿ ಎಲ್ಲರೂ ಸೇರಿ ಒಟ್ಟಿಗೆ ನಾಗರ ಪಂಚಮಿ ಹಬ್ಬದಂದು ಸಡಗರದಿಂದ ಇದ್ದ ಸಮಯದಲ್ಲಿ ಅಲ್ಲಿಗೆ ನಾಗರ ಹಾವೊಂದು ಬಂದು ನಾಲ್ಕು ಜನ ಅಣ್ಣಂದಿರನ್ನು ಕಚ್ಚಿ ಬಲಿ ಪಡೆದುಕೊಂಡಾಗ ಆ ತಂಗಿಯು ಅಣ್ಣಂದಿರನ್ನು ಕಳೆದುಕೊಂಡ ನೋವನ್ನು ತಡೆಯಲಾಗದೆ ಆ ನಾಗರ ಹಾವಿಗೆ ನನ್ನ ನಾಲ್ಕು ಜನ ಅಣ್ಣಂದಿರನ್ನು ಕಾಪಾಡು ಇಲ್ಲವಾದರೆ ಒಬ್ಬರನ್ನಾದರೂ ಬದುಕಿಸಿಕೊಡು.. ನಾನು ಯಾರನ್ನು ಅಣ್ಣ ಎಂದು ಕರೆಯಲಿ ಎಂದು ಕಣ್ಣೀರಿಟ್ಟಾಗ ಆ ತಂಗಿಯ ಗೋಳಾಟದ ಕಣ್ಣೀರ ನೋವನ್ನು ಕಂಡು ನಾಗರ ಹಾವು ಅಣ್ಣಂದಿರ ಬಳಿ ಬಂದು ಒಬ್ಬ ಅಣ್ಣನನ್ನು ಬದುಕಿಸಿದ ನಂತರ ಅಣ್ಣ-ತಂಗಿ ಇಬ್ಬರೂ ಸೇರಿ ನಾಗರ ಪಂಚಮಿಯ ಹಬ್ಬವನ್ನು ಖುಷಿಯಿಂದ ಆಚರಿಸುತ್ತಾರೆ. ಹಾಗಾಗಿ ಇದನ್ನು ಅಣ್ಣ-ತಂಗಿಯರ ಹಬ್ಬ ಎಂಬ ಪ್ರತೀತಿ ಕೂಡ ಈ ಹಬ್ಬಕ್ಕೆ ಇದೆ.
ಈ ಹಬ್ಬವು ಮುಂಗಾರಿನಲ್ಲಿ ರಭಸದಿಂದ ಬೀಳುವ ಮಳೆಗಾಲದಲ್ಲಿ ಹೊಲ-ಗದ್ದೆಗಳಿಗೆ ಕೃಷಿ ಅಂದರೆ ಬೇಸಾಯ ಎಲ್ಲ ಒಂದು ಹಂತಕ್ಕೆ ಮುಗಿಸಿ ಬೆಳೆಗಳು ಅರ್ಧದಷ್ಟು ಬಂದಿರುತ್ತೆ,ಆ ಬೆಳೆಗಳ ಫಸಲುಗಳನ್ನು ತಿಂದು ನಾಶಮಾಡಲೆಂದು ಕೀಟ- ಮಿಡತೆಗಳು ಹಾಗೂ ಇಲಿಗಳ ಹಾವಳಿ ಹೆಚ್ಚು. ಇವೆಲ್ಲವೂಗಳಿಂದ ರೈತರು ಬೆಳೆದ ಬೆಳೆಗಳನ್ನು ರಕ್ಷಿಸುವುದು ಹಾವುಗಳು. ಈ ಅತಿಯಾದ ಹಾವಳಿಯನ್ನು ನಿಯಂತ್ರಿಸುವ ನಾಗರಾಜನಿಗೆ ಪುಟ್ಟದೊಂದು ಧನ್ಯವಾದ ಹೇಳಲು ನಡೆಸುವ ಹಬ್ಬದ ಪೂಜೆಯೇ ನಾಗರ ಪಂಚಮಿ ಹಬ್ಬ. ಅಷ್ಟೆ ಅಲ್ಲದೆ ಶ್ರಾವಣದ ಶುದ್ಧ ಪಂಚಮಿ ಹಬ್ಬವು ಅತ್ಯಂತ ಯೋಗ್ಯ ಮತ್ತು ಬಹಳ ಉಪಯುಕ್ತವಾದ ಹಬ್ಬದ ದಿನ ಹಸುವಿನ(ಗೋಮಯ) ಸಗಣಿಯಿಂದ ಮನೆಯ ಬಾಗಿಲ ಮುಂದೆ ಸಾರಿಸಿ, ನಾಗದೇವತೆಗಳ ಚಿತ್ರಗಳನ್ನು ರಂಗೋಲಿಯಲ್ಲಿ ಬಿಡಿಸಿ, ಬಾಗಿಲ ಹೊಸಲಿಗೆ ಅರಿಸಿಣ-ಕುಂಕುಮ ಹಚ್ಚಿ, ಮಾವಿನ ಎಲೆಗಳಿಂದ ಅಲಂಕರಿಸಿ, ಹೂವುಗಳಿಂದ ಸಿಂಗರಿಸಿ ನಿಷ್ಠೆಯಿಂದ ಪೂಜೆಯನ್ನು ಮಾಡುವುದರ ಜೊತೆಯಲ್ಲಿ ನಾಗದೇವತೆಗಳನ್ನೂ ಒಂಭತ್ತು ಜಾತಿಯ ನಾಗಗಳ ಆರಾಧನೆಯ ಪೂಜೆಯನ್ನು ಮಾಡುತ್ತಾರೆ. ಅನಂತ, ವಾಸುಕಿ, ಶೇಷ,ಪದ್ಮನಾಭ, ಕಂಬಲ, ಶಂಖಪಾಲ,ದೃತರಾಷ್ಟ್ರ, ತಕ್ಷಕ ಮತ್ತು ಕಾಲಿಯಾ ಹೀಗೆ ಒಂಭತ್ತು ನಾಗದೇವತೆಗಳ ಪ್ರತಿಸ್ಟಾಪನೆಯನ್ನು ಮಾಡಿ.ಸರ್ಪಭಯ ಮತ್ತು ವಿಷದಿಂದ ತೊಂದರೆಯಾಗದೇ ಇರಲು ಈ ಪೂಜೆಯನ್ನು ಮಾಡುತ್ತಾರೆ. ಹಾಗೆಯೇ ಈ ನಾಗದೇವತೆಗಳು ದೇವಾನು ದೇವತೆಗಳಿಗೆ ಆಭರಣಗಳು ಹಾಗೂ ಚಿನ್ನೆಗಳು ಸಹ ಆಗಿವೆ. ಶಿವನ ಕೊರಳಲ್ಲಿ ಆಭರಣವಾಗಿ, ವಿಷ್ಣುವಿನ ಹಾಸಿಗೆಯಾಗಿಯೂ, ಗಣಪತಿಯ ಹೊಟ್ಟೆಯ ಪಟ್ಟಿಯಾಗಿಯೂ, ಸಮುದ್ರಮಂಥನ ಕಾಲದಲ್ಲಿನ ಮಂಧಾರ ಪರ್ವವತವೆಂಬ ಕಡಗೋಲಿಗೆ ಹಗ್ಗವಾಗಿಯೂ ದುರ್ಯೋಧನನ ಧ್ವಜದ ಚಿಹ್ನೆಯಾಗಿ ಹೀಗೆ ಅನೇಕ ನಾಗದೇವತೆಗಳನ್ನು ನಾವು ಕಾಣಬಹುದಾಗಿದೆ. ಹೀಗೆ ನಮ್ಮ ರಾಜ್ಯದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿನ ಸುಪ್ರಸಿದ್ಧ ದೇವಾಲಯವಾಗಿರುವ ಇಲ್ಲಿ ಈಶ್ವರನ ಪುತ್ರ ಷಣ್ಮುಖ ದೇವರನ್ನು ನಾಗದೇವತೆಯ ರೂಪದ ಸುಬ್ರಹ್ಮಣ್ಯ ಎಂಬ ಹೆಸರಿನ ದೇವರನ್ನು ಪೂಜಿಸಲಾಗುತ್ತಿದೆ. ಶ್ರಾವಣ ಮಾಸದ ಶುಕ್ಲ ಪಕ್ಷದ ಈ ಶ್ರಾವಣದ ಪಂಚಮಿಯ ದಿನದಂದು ನಾಗರಾಜನ ರೂಪದ ಸುಬ್ರಹ್ಮಣ್ಯ ದೇವರನ್ನು ಈ ನಾಗರ ಪಂಚಮಿ ಹಬ್ಬದಂದು ವಿಶೇಷವಾಗಿ ಆಚರಿಸುವ ವಿಧಾನವೇ ಇಲ್ಲಿ ಅತ್ಯಂತ ಮಹತ್ವವನ್ನು ಪಡೆದುಕೊಂಡಿದೆ. ಬನ್ನಿ ಈ ನಾಗರ ಪಂಚಮಿ ಹಬ್ಬದಂದು ಎಲ್ಲರೂ ಸೇರಿ ನಾಡಿನ ಸಮಸ್ತ ಜನತೆಗೆ, ರೈತ ಬಾಂಧವರಿಗೆ, ಗಡಿನಾಡಿನ ಯೋಧರಿಗೆ ಒಳಿತಾಗಲೀ ಎಂದು ಹಾಗೂ ನಮ್ಮ ದೇಶ ಸುಭದ್ರವಾಗಿರಲೆಂದು ದೇವಾಲಯಗಳಲ್ಲಿ ದೇವರಿಗೆ ಮತ್ತು ಹುತ್ತಗಳಿಗೆ ಹಾಲನ್ನು ಎರೆದು ಭಕ್ತಿಯಿಂದ ಆರಾಧಿಸೋಣ ಜೊತೆಯಲ್ಲಿ ನಮ್ಮ ಇಷ್ಟಾರ್ಥಗಳನ್ನು ಈಡೇರಿಸಲು ಪ್ರಾರ್ಥಿಸಿಕೊಳ್ಳೋಣ…✍️ ಬಂದಿತ್ತು ಬಂದಿತ್ತು ಶ್ರಾವಣ ಮಾಸವು, ಶುಕ್ರ ಪಕ್ಷದ ಮೊದಲ ಹಬ್ಬವು, ತಂದಿತ್ತು ಬಂದಿತ್ತು ನಮ್ಮ ಹಿಂದೂ ಸಂಸ್ಕೃತಿಯೂ, ಶುದ್ಧ ಪಂಚಮಿಯಂದು ನಾಗದೇವತೆಗಳಿಗೆ ಹಾಲೇರದು ಪ್ರಾರ್ಥಿಸುವ ಹಬ್ಬವು.. ಅಣ್ಣ-ತಂಗಿಯ ಸಂಬಂಧವ ಮತ್ತಷ್ಟೂ ಗಟ್ಟಿಗೊಳಿಸುವ ಹಬ್ಬವು, ಕೈಮುಗಿದು ಹೂವಿಟ್ಟು ಪೂಜಿಸುವ ರಕ್ಷೆಯ ಕಟ್ಟಿ ಕಾಪಾಡು ದೇವರೆಂದು ಪ್ರಾರ್ಥಿಸಿಕೊಳ್ಳುವ ಹಬ್ಬ ಅದುವೇ ನಾಗರ ಪಂಚಮಿ ಹಬ್ಬ. ಸಿ.ಆರ್ ಶಿವಕುಮಾರ್(ಶಿವು) ಸಕ್ಷಮ. ಶಿವಮೊಗ್ಗ.
ವರದಿ-ಬಾಲರಾಜ ಯದವ್