ವಿಜಯನಗರ ಜಿಲ್ಲೆ ಕೂಡ್ಲಿಗಿ: ಜನಪ್ರತಿನಿಧಿಗಳು ಸೌಲಭ್ಯಗಳನ್ನು ಒದಗಿಸಲು, ತಮ್ಮ ವ್ಯಾಪ್ತಿ ವಲಯ ನಿಗಧಿಗೊಳಿಸಿಕೊಂಡಿರುತ್ತಾರೆ. ಆದರೆ ಜನಪರ ಕಾಳಜಿಯುಳ್ಳ ಸಮಾಜ ಸೇವಾಮನೋಭಾವದ, ಶಿಕ್ಷಣ ಪ್ರೇಮಿಗಳಿಗೆ ಯಾವುದೇ ಗಡಿರೇಖೆಯಿರಲ್ಲ. ತಮ್ಮ ಸಹಾಯ ಹಸ್ತ ಚಾಚಿ ಅಗತ್ಯ ನೆರವು ನೀಡೋ ಮೂಲಕ, ಮೇರು ವ್ಯಕ್ತಿತ್ವದ ಮಹಾಮಾನವತಾವಾದದ ಪ್ರತಿಪಾದಕರೆಂದು ಅರ್ಥೈಸಿದ್ದಾರೆ. ಶಾಸಕರಾದ ಡಾ” ಎನ್.ಟಿ.ಶ್ರೀನಿವಾಸರವರು , ತಮ್ಮ ಸಮಾಜ ಸೇವೆಯನ್ನು ಶಾಸಕರಾದಾಗಿನಿಂದ ದುಪ್ಪಟ್ಟು ಹೆಚ್ಚಿಸಿದ್ದಾರೆ. ಹಗಲಿರುಳು ಎನ್ನದೇ ಕ್ಷೇತ್ರದ ಮೂಲೆ ಮೂಲೆಗೆ, ತಮ್ಮ ಶ್ರೀಮತಿ ಡಾ“ಪುಷ್ಪರವರೊಡಗೂಡಿ ಖುದ್ಧು ತೆರಳಿ. ಜನತೆಯ ನೋವು ನಲಿವುಗಳಲ್ಲಿ ಸ್ವತಃ ಭಾಗಿಯಾಗಿ, ಮೂಲಭೂತ ಸೌಕರ್ಯಗಳನ್ನು ತಕ್ಷಣವೇ ಒದಗಿಸುತ್ತಿದ್ದಾರೆ. ಅವರ ಅಹವಾಲುಗಳನ್ನು ಆಲಿಸಿ, ಶೀಘ್ರವೇ ಅವರ ನೆರವಿಗೆ ಮುಂದಾಗುತ್ತಿದ್ದಾರೆ. ಅವರ ಈ ಸಮಾಜ ಸೇವೆ ಕೇವಲ ಕೂಡ್ಲಿಗಿ ಕ್ಷೇತ್ರಕ್ಕೆ ಮೀಸಲಿರಿಸಿಕೊಳ್ಳದೇ, ಅವರ ಶ್ರೀರಕ್ಷೆಯನ್ನು ನೆರೆ ಹೊರೆ ಕ್ಷೇತ್ರಗಳಗೂ ನೀಡುತ್ತಿದ್ದಾರೆ. ನೆರೆ ಹೊರೆಯ ಕ್ಷೇತ್ರಗಳ ಜನತೆಯ ಅಹವಾಲುಗಳನ್ನು ಆಲಿಸುತ್ತಿದ್ದಾರೆ, ಅವರಿಗೆ ಅಗತ್ಯ ನೆರವಿನ ಹಸ್ತ ನೀಡುತ್ತಿದ್ದು ಅವರ ಸೇವಾಮನೋಭಾವ ಶ್ಲಾಘನೀಯವಾಗಿದೆ. ಕೂಡ್ಲಿಗಿ ಕ್ಷೇತ್ರದ ಶಾಸಕರಾದ ಡಾ“ಎನ್.ಟಿ.ಶ್ರೀನಿವಾಸ್ ರವರ ಶಿಕ್ಷಣ ಪ್ರೇಮ ಅಪಾರವಾದದ್ದು, ಅವರ ಸಮಾಜ ಸೇವಾ ಮನೊಭಾವಕ್ಕೆ ಎಣೆಯೇ ಇಲ್ಲ ಎಲ್ಲೆ ಇಲ್ಲ. ಪ್ರತಿಭಾನ್ವಿತ ವಿದ್ಯಾರ್ಥಿಗಳ ಪಾಲಿಗೆ, ಶಾಸಕರಾದ ಡಾ“ಎನ್.ಟಿ. ಶ್ರೀನಿವಾಸರವರವ ಶ್ರೀರಕ್ಷೆ ಸದಾ ಇರುತ್ತೇ. ಇದು ಅತಿಷಯೋಕ್ತಿ ಎನ್ನಿಸಬಹುದಾದರೂ, ನೂರಕ್ಕೆ ನೂರು ಸತ್ಯ ಸಂಗತಿಯಾಗಿದೆ. ಹಗರಿಬೊಮ್ಮನಹಳ್ಳಿ ತಾಲೂಕಿನ ದಶಮಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ, ನಾಣ್ಯಾಪುರ ಗ್ರಾಮದ ಪರಿಶಿಷ್ಟ ಪಂಗಡದ. ಬಡ ರೈತ ಕುಟುಂಬಕ್ಕೆ ಸೇರಿದ ವಿದ್ಯಾರ್ಥಿನಿ “ಬರ್ಲಿ ಅನುಪಮಾ” ಎಂಬ ಪ್ರತಿಭೆಗೆ, ಕೂಡ್ಲಿಗಿ ಕ್ಷೇತ್ರದ ಶಾಸಕರಾದ ಡಾ“ಎನ್.ಟಿ.ಶ್ರೀನಿವಾಸರವರು ಅಗತ್ಯ ಆರ್ಥಿಕ ಶ್ರೀರಕ್ಷೆ ನೀಡಿದ್ದಾರೆ. ಬಡ ರೈತ ಕುಟುಂಬದ ಪ್ರತಿಭಾನ್ವಿತ “ಅನುಪಮ ಬರ್ಲಿ” ಎಂಬ ಪ್ರತಿಭಾನ್ವಿತ ವಿದ್ಯಾರ್ಥಿನಿ, ತಮ್ಮ ಮನೆಯ ಆರ್ಥಿಕ ಸಂಕಷ್ಟವನ್ನರಿತು. ತನಗೆ ಅವಕಾಶ ದೊರಕಿದ್ದ ಹೆಚ್ಚಿನ ವಿದ್ಯಾಭ್ಯಾಸಕ್ಕೆ ತೆರಳಲಾಗದೇ, ತನ್ನ ವಿದ್ಯಾಭ್ಯಾಸಕ್ಕೆ ಗುಡ್ ಬೈ ಹೇಳಿ. ತಮ್ಮ ಮನೆಯ ಸದಸ್ಯರೊಡಗೂಡಿ ಹೊಲದಲ್ಲಿನ, ಕೃಷಿ ಚಟುವಟಿಕೆಗಳಲ್ಲಿ ತನ್ನನ್ನು ಸಕ್ರೀಯವಾಗಿ ತೊಡಗಿಸಿಕೊಂಡಿದ್ದ. ಪ್ರತಿಭಾನ್ವಿತ ವಿದ್ಯಾರ್ಥಿನಿ ಅನುಪಮಾಳನ್ನು ಸಂಪರ್ಕಿಸಿ, ಅವಳ ವಿದ್ಯಾಭ್ಯಾಸಕ್ಕೆ ಅಗತ್ಯ ಆರ್ಥಿಕ ನೆರವನ್ನು. ಅವರ ಶೈಕ್ಷಣಿಕ ಕರ್ಚು ವೆಚ್ಚ ಮತ್ತು ಪರಿಪೂರ್ಣ ಶಿಕ್ಷಣಕ್ಕೆ ಅಗತ್ಯ ಇರೋ, ಇತರೆ ಅಗತ್ಯ ನೆರವನ್ನು ವಿದ್ಯಾರ್ಥಿನಿಗೆ ನೀಡೋ ಮೂಲಕ ವಿದ್ಯಾರ್ಥಿನಿಗೆ ಶ್ರೀರಕ್ಷೆ ನೀಡಿದ್ದಾರೆ. ಈ ಮೂಲಕ ಶಾಸಕರಾದ ಡಾ” ಎನ್.ಟಿ.ಶ್ರೀನಿವಾಸ್ ರವರು, ಮಹಾ ಮಾನವತಾವಾದದ ಪ್ರತಿಪಾದಕರೆಂದು ಸಾಬೀತು ಮಾಡಿದ್ದಾರೆ. ಈ ಮೂಲಕ ಸಾಮಾಜಿಕ ಕಾಳಜಿಯ ಶಾಸಕರೆಂದು, ಹಾಗೂ ಶಿಕ್ಷಣ ಪ್ರೇಮಿಗಳೆಂದು ಗುರುತಿಸಿಕೊಂಡಿದ್ದಾರೆ. ಸಮಾಜ ಸೇವಕ ಎನ್.ಟಿ. ತಮ್ಮಣ್ಣನವರ–ಹಿರಿತನ– ಶಾಸಕರಾದ ಡಾ“ಏನ್.ಟಿ.ಶ್ರೀನಿವಾಸ ರವರ, ಅಣ್ಣನವರಾದ ಸಮಾಜ ಸೇವಕ ಎನ್.ಟಿ.ತಮ್ಮಣ್ಣನವರು. ವೃತ್ತಿಯಲ್ಲಿ ಗುತ್ತಿಗೆದಾರರು, ಪ್ರವೃತ್ತಿಯಲ್ಲಿ ಸಮಾಜ ಸೇವಕರಾಗಿದ್ದಾರೆ. ಅವರ ಜನಪರ ಕಾಳಜಿಯಿಂದಾಗಿಯೇ, ಗ್ರಾಮೀಣ ಪ್ರತಿಭೆಗೆ ನೆರವು ಸಿಗಲು ಕಾರಣವಾಗಿದೆ. ಎನ್.ಟಿ.ತಮ್ಮಣ್ಣನವರು ತಮ್ಮ ಆಪ್ತರಾದ ನಿವೃತ್ತ ದೈಹಿಕ ಶಿಕ್ಷಕರಾದ, ಡಿ.ನಾಗರಾಜಪ್ಪ ಹಾಗೂ ಕಿತ್ತೂರು ರಾಣಿ ಚೆನ್ನಮ್ಮ ಹಾಸ್ಟೆಲ್ ನ ಪ್ರಾಚಾರ್ಯ ಕನ್ನಿಹಳ್ಳಿ ನಾಗರಾಜ ರವರಿಂದ. ಪ್ರತಿಭಾನ್ವಿತ ಬಡ ವಿದ್ಯಾರ್ಥಿನಿ ಅನುಪಮಳ ಶೈಕ್ಷಣಿಕ ಜೀವನದ ವೃತ್ತಾಂತ ತಿಳಿದಿದ್ದಾರೆ, ಇದನ್ನರಿತ ಕೂಡಲೇ ತಮ್ಮಣ್ಣನವರು ತಮ್ಮ ಆಪ್ತರೊಡಗೂಡಿ. ನಾಣ್ಯಾಪುರ ಗ್ರಾಮದಲ್ಲಿರುವ ವಿದ್ಯಾರ್ಥಿನಿ ಅನುಪಮಳ ಮನೆಗೆ ಭೇಟಿನೀಡಿದ್ದಾರೆ, ವಿದ್ಯಾರ್ಥಿನಿಯ ಕುಟುಂಬವನ್ನು ಭೇಟಿಯಾಗಿ ವಿದ್ಯಾರ್ಥಿನಿಯ ಪೋಷಕರಿಗೆ ಅಭಿನಂದಿಸಿದ್ದಾರೆ. ಮತ್ತು ಪೋಷಕರ ಹಾಗೂ ಗ್ರಾಮಸ್ಥರ ಉಪಸ್ಥಿತಿಯಲ್ಲಿ, ಪ್ರತಿಭಾನ್ವಿತೆ ಅನುಪಮಾಳನ್ನು ಗೌರವಿಸಿ ಸನ್ಮಾನಿಸಿದ್ದಾರೆ. ಕುಟುಂಬದ ಸರ್ವ ಸದಸ್ಯರೊಂದಿಗೆ ಅವರು, ಅನುಪಮಾಳ ವಿದ್ಯಭ್ಯಾಸದ ಕುರಿತು ಸಮಾಲೋಚನೆ ನಡೆಸಿದ್ದಾರೆ. ಅನುಪಮಳಿಗೆ ಶಿಕ್ಷಣವನ್ನು ಮುಂದುವರೆಸುವಂತೆ ಸೂಚಿಸಿದ್ದು, ಅದಕ್ಕೆ ಅಗತ್ಯ ಇರೋ ಎಲ್ಲಾ ನೆರವನ್ನು ಸಹೋದರೊಡಗೂಡಿ ತಾವು ಒದಗಿಸುವುದಾಗಿ ಭರವಸೆ ನೀಡಿದ್ದಾರೆ. ವಿಷಯ ತಿಳಿದ ಡಾ“ಎನ್.ಟಿ.ಶ್ರೀನಿವಾಸ್ ರವರು ದೂರವಾಣಿ ಮೂಲಕ,
ಬರ್ಲಿ ಅನುಪಮ ತಂದೆ ಬರ್ಲಿ ಬಡವಪ್ಪ ನಾಣ್ಯಪುರ ರವರನ್ನು ಸಂಪರ್ಕಿಸಿದ್ದಾರೆ. ವಿದ್ಯಾರ್ಥಿನಿಯ ಪೋಷಕರನ್ನ ತಮ್ಮತ್ತ ಕರೆಸಿಕೊಂಡ ಶಾಸಕರು, ಅನುಪಮಾಳ ವಿದ್ಯಾಭ್ಯಾಸದ ಕರ್ಚು ವೆಚ್ಚ ಭರಿಸುವುದಾಗಿ ತಿಳಿಸಿದ್ದಾರೆ. ಅಂತೆಯೇ ಅನುಪಮಾಳನ್ನು ಅವರ ಪೋಷಕರು ಅವಳನ್ನು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ತಮಿಳುನಾಡಿನ ತಾಂಜಾವೂರಿಗೆ ಕಳುಹಿಸಿಕೊಟ್ಟಿದ್ದಾರೆ. ಬಲು ಅಪರೂಪದ ಪ್ರತಿಭೆ–ಅನುಪಮ– ಹಗರಿಬೊಮ್ಮನಹಳ್ಳಿ ತಾಲೂಕಿನ ದಶಮಾಪುರ ಗ್ರಾಮ ಪಂಚಾಯ್ತಿ ವ್ಯಾಪ್ತಿಯ, ನಾಣ್ಯಾಪುರ ಗ್ರಾಮದ ಪರಿಶಿಷ್ಟ ಪಂಗಡದ ಬಡ ರೇತ ಕುಟುಂಬದಲ್ಲಿ ಜನಿಸಿರುವ ಪ್ರತಿಭಾನ್ವಿತ ವಿದ್ಯಾರ್ಥಿನಿ ಬರ್ಲಿ ಅನುಪಮ. ಅವಳು ಕೂಡ್ಲಿಗಿ ಪಟ್ಟಣದ ಕಿತ್ತೂರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ, 2016-2021 ರವರೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಪಡೆದಿದ್ದಾಳೆ. ತಿಮಲಾಪುರದ ಮೊರಾರ್ಜಿ ಪದವಿಪೂರ್ವ ಕಾಲೇಜ್ ನಲ್ಲಿ, ವಿಜ್ಞಾನ ವಿಭಾಗದಲ್ಲಿ ಪಿಯುಸಿ ಮುಗಿಸಿದ್ದಾಳೆ. ಪ್ರಸ್ತುತ ರಾಷ್ಟ್ರೀಯ ಮಟ್ಟದ IIT JEE ಪರೀಕ್ಷೆಯಲ್ಲಿ,ಅತ್ಯುತ್ತಮ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಉನ್ನತ ಪದವಿ ವ್ಯಾಸಾಂಗಕ್ಕಾಗಿ ಆನ್ ಲೈನ್ ಮೂಲಕ ಅರ್ಜಿ ಹಾಕಲಾಗಿದ್ದು, ತಮಿಳುನಾಡಿನ ತಂಜಾವೂರಿನ ಕಾಲೇಜಿಗೆ ಆಯ್ಕೆಯಾಗಿದ್ದಾರೆ. ಆದರೆ ಬಡ ರೈತ ಕುಟುಂಬ ಹಿನ್ನಲೆಯ ಮನೆಯಲ್ಲಿ, ಬರ್ಲಿ ಅನುಪಮ ಅವರಿಗೆ ವಿದ್ಯಾಭ್ಯಾಸ ಮಾಡಲು ಅಗತ್ಯ ಆರ್ಥಿಕ ಸಾಮಾರ್ಥ್ಯ ಇರಲಿಲ್ಲ. ಅದು ಅವಳು ಮುಂದೆ ಓದುವ ಆಸೆಯನ್ನು, ಮೊಟಕುಗೊಳಿಸಿತ್ತು. ಅನುಪಮಾಳು ತಾನು ವ್ಯಾಸಾಂಗ ಮಾಡುತ್ತಲೇ ನಿತ್ಯ ಮನೆ ಕೆಲಸದೊಂದಿಗೆ, ಮನೆಯ ಸದಸ್ಯರೊಡಗೂಡಿ. ತಮ್ಮ ಹೊಲದಲ್ಲಿನ ಕೃಷಿ ಚಟುವಟಿಕೆಗಳಲ್ಲಿ ತೊಡಗುತ್ತಿದ್ದಳು, ಆರ್ಥಿಕ ಬಿಕ್ಕಟ್ಟಿನ ಪರಿಣಾಮ ಶಿಕ್ಷಣಕ್ಕೆ ಇತಿಶ್ರೀ ಹೇಳೋ ಪರಿಸ್ಥಿತಿ ಎದುರಾಗಿತ್ತು. ಇದನ್ನರಿತ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿ, ಅನುಪಮಾ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಕರ್ಥವ್ಯದಲ್ಲಿದ್ದ. ಇತ್ತೀಚೆಗಷ್ಟೇ ಬೇರೆಡೆಗೆ ವರ್ಗಾವಣೆಹೊಂದಿದ್ದ, ಪ್ರಾಚಾರ್ಯರಾದ ಕನ್ನಿಹಳ್ಳಿ ನಾಗರಾಜರವರು. ಪ್ರತಿಭಾನ್ವಿತೆ ಬರ್ಲಿ ಅನುಪಮಾಳ ಸ್ಥಿತಿ ಗತಿ ತಿಳಿದು, ಅವಳಿಗೆ ಅಗತ್ಯ ನೆರವು ಕೊಡಿಸುವ ಕುರಿತು ಅಪಾರ ಕಾಳಜಿ ತೋರಿದ್ದಾರೆ. ನಿವೃತ್ತ ದೈಹಿಕ ಶಿಕ್ಷಕರಾದ ಡಿ.ನಾಗರಾಜಪ್ಪರವರೊಂದಿಗೆ ಚರ್ಚಿಸಿ,ವಿದ್ಯಾರ್ಥಿನಿ ಅನುಪಮಾಳ ವ್ಯಾಸಾಂಗಕ್ಕೆ ನೆರವು ತೋರಲು ಪ್ರಯತ್ನಿಸಿದ್ದಾರೆ. ಅವರು
ಬರ್ಲಿ ಅನುಪಮ ಅವರ ಪರಿಸ್ಥಿತಿಯನ್ನು, ಕೂಡ್ಲಿಗಿ ಕ್ಷೇತ್ರದ ಶಾಸಕರಾದ ಡಾ” ಎನ್.ಟಿ.ಶ್ರೀನಿವಾಸ್ ರವರಲ್ಲಿ ಮನವರಿಕೆ ಮಾಡಿಕೊಟ್ಟಿದ್ದಾರೆ. ಬಡ ಗ್ರಾಮೀಣ ಪ್ರತಿಭಾವಂತ ಬಾಲಕಿಯ ಸಾಧನೆ ಬಗ್ಗೆ ತಿಳಿದ ಶಾಸಕರು, ಮೆಚ್ಚುಗೆ ವ್ಯಕ್ತಪಡಿಸಿ ಶಾಸಕರು ಹರ್ಷ ವ್ಯಕ್ತಪಡಿಸಿದ್ದಾರೆ. ಶಾಸಕರು ತಮ್ಮ ಅಣ್ಣನವರು ಹಾಗೂ ಕಾಂಗ್ರೆಸ್ ಮುಖಂಡರಾದ, ಎನ್.ಟಿ.ತಮ್ಮಣ್ಣರವರ ಮೂಲಕ. ವಿದ್ಯಾರ್ಥಿನಿ ಬರ್ಲಿ ಅನುಪಮ ರವರ ಮನೆಗೆ ಸಕಾಲಕ್ಕೆ, ನಗದು ರೂಪದಲ್ಲಿ ಆರ್ಥಿಕ ನೆರವು ತಲುಪಿಸಿದ್ದಾರೆ. ಅನುಪಮ ವಿದ್ಯಾಭ್ಯಾಸದೊಂದಿಗೆ ತಮ್ಮ ಮನೆಯ ಸದಸ್ಯರೊಂದಿಗೆ, ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾರೆ. ಹೊಲಕ್ಕೆ ನೀರು ಹಾಯಿಸಲು ತೆರಳುತ್ತಾಳೆ, ಕಳೆ ತೆಗೆಯಲು, ಹೂ ಬಿಡಿಸಲು ತಂದೆ–ತಾಯಿಗೆ, ನೆರವಾಗುತ್ತಿರುವುದನ್ನು ಶಾಸಕರು ಮನಗಂಡು. ಅನುಪಮಾರನ್ನು ಅವರು ಮುಕ್ತ ಕಂಠದಿಂದ ಶ್ಲಾಘಿಸಿದ್ದಾರೆ, ದೂರವಾಣಿ ಮೂಲಕ ಸಂಪರ್ಕಿಸಿ ಶುಭಾಶಯಗಳನ್ನು ತಿಳಿಸಿದ್ದಾರೆ. ಸದ್ಯ ಪ್ರತಿಭಾನ್ವಿತ ವಿದ್ಯಾರ್ಥಿನಿ ಬರ್ಲಿ ಅನುಪಮಾ, ಉನ್ನತ ಶಿಕ್ಷಣಕ್ಕಾಗಿ ತಮಿಳು ನಾಡಿನ ತಾಂಜಾವೂರಿನ ಕಾಲೇಜ್ ಗೆ ದಾಖಲಾತಿಗಾಗಿ ತೆರಳಿದ್ದಾರೆ. ಜನಪ್ರತಿನಿಧಿಗಳು ತಮ್ಮ ವ್ಯಾಪ್ತಿಯ ಜನರಿಗೆ ನೆರವು ನೀಡುವುದಕ್ಕೆ, ಮೂಗು ಮುರಿದುಕೊಳ್ಳೋವ ಕಾಲದಲ್ಲಿ. ತಮ್ಮ ಕ್ಷೇತ್ರ ವ್ಯಾಪ್ತಿಗೆ ಬಾರದ ನೆರೆ ತಾಲೂಕಿನ, ಗ್ರಾಮೀಣ ಪ್ರತಿಭೆಗೆ ಉನ್ನತ ಶಿಕ್ಷಣಾಭಿವೃದ್ಧಿಗೆ ಅಗತ್ಯ ನೆರವು ನೀಡಿರುವ. ಕೂಡ್ಲಿಗಿ ಶಾಸಕರಾದ ಡಾ” ಎನ್.ಟಿ.ಶ್ರೀನಿವಾಸರವರ ಶಿಕ್ಷಣ ಪ್ರೇಮ, ಆದರ್ಶನೀಯವಾಗಿದೆ ಹಾಗೂ ಅವರ ಮಹಾ ಮಾನವತಾವಾದದ ಪ್ರತಿಪಾದನೆಗೆ ಸಾಕ್ಷಿಯಾಗಿದೆ. ಶಾಸಕರ ನೆರವಿನ ಹಸ್ತದ ಶ್ರೀರಕ್ಷೆ ಹೊಂದಿದ ಅನುಪಮಾರವರ ಕುಟುಂಬದವರು, ಮುಖಂಡ ಎನ್.ಟಿ.ತಮ್ಮಣ್ಣ. ಮತ್ತು ಅವರ ಸಹೋದರರು, ಹಾಗೂ ಶಾಸಕರಾದ ಡಾ“ಎನ್.ಟಿ.ಶ್ರೀನಿವಾಸರವರ ಹಿರಿತನಕ್ಕೆ ಹೃದಯ ಶ್ರೀಮಂತಿಕೆಗೆ. ಈ ಮೂಲಕ ಈ ಇಬ್ಬರು ಸಹೋದರರಿಗೆ, ಹೃದಯ ಸ್ಪರ್ಶಿ ಕೃತಜ್ಞತೆಗಳನ್ನು ತಿಳಿಸಿದ್ದಾರೆ. “ನಮ್ಮ ಹೆಮ್ಮೆ–ನಮ್ಮ ನೆಚ್ಚಿನ ಶಾಸಕರು” ಡಾ“ಎನ್.ಟಿ.ಶ್ರೀನಿವಾಸ್ ರವರು ಎಂದು, ಕೂಡ್ಲಿಗಿ ಕ್ಷೇತ್ರದ ಪ್ರಜ್ಞಾವಂತರು ಉಧ್ಘೋಷಿಸುತ್ತಿದ್ದಾರೆ.
ವರದಿ✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ.