ವಿಜಯನಗರ ಜಿಲ್ಲೆ ಕೂಡ್ಲಿಗಿ: ಆ 25ರಂದು ಕ್ಷೇತ್ರದ ಶಾಸಕರಾದ ಡಾ”ಎನ್.ಟಿ. ಶ್ರೀನಿವಾಸ್ ರವರು, ತಾಲೂಕು ಆಢಳಿತ ಸೌಧದಲ್ಲಿ. ಉಪ ಖಜಾನಾಧಿಕಾರಿಗಳ ಕಚೇರಿಯ, ನೂತನ ಕೊಠಡಿಯನ್ನು ಉದ್ಘಾಟಿಸಿದ ನಂತರ. ಆಢಳಿತ ಸೌಧದ ಒಳಾಂಗಣದಲ್ಲಿನ ಕಚೇರಿಗಳನ್ನು ಪರಿಶೀಲಿಸಿದರು, ಈ ಸಂದರ್ಭದಲ್ಲಿ ಒಳಾಂಗಣದಲ್ಲಿರುವ ಕಸದ ರಾಶಿಯನ್ನು ನೋಡಿ ಬೇಸರ ವ್ಯಕ್ತಪಡಿಸಿದರು. ಮತ್ತು ಎಲ್ಲೆಂದರಲ್ಲಿ ತಂಬಾಕು ಉಗಳಿರುವುದನ್ನು ಕಂಡು, ಸ್ವತಃ ಶಾಸಕರೇ ಪೊರಕೆಯನ್ನು ಹಿಡಿದು ಕಸ ಗುಡಿಸಿ ಕಸ ತುಂಬಿ ಹೊರ ಹಾಕಿಸಿದರು. ಅವರೊಂದಿಗೆ ಅವರ ಸಹಚರರು, ಹಾಗೂ ಸಹಾಯಕರು ಶಾಸಕರೊಂದಿಗೆ ಕೈಜೋಡಿಸಿದರು. ಇದನ್ನು ನಿರೀಕ್ಷಿಸದ ಸಾರ್ವಜನಿಕರು ಕೆಲ ಹೊತ್ತು ದಂಗಾಗಿ ಹೋದರು, ಸಾರ್ವಜನಿಕರು ಹಾಗೂ ನೆರೆದವರೆಲ್ಲರೂ ಪರಸ್ಪರ ಮುಖ ನೋಡುತ್ತ ಕೆಲ ಹೊತ್ತು ಬೆರಗಾಗಿ ನಿಂತರು. ಸ್ವತಃ ಶಾಸಕರು ಕಸಬರಿಗೆ ಹಿಡಿದು ಕಸ ಗುಡಿಸಿ, ಸ್ವಚ್ಚಗೊಳಿಸುತ್ತಿರುವುದನ್ನು ಕಂಡ ಆಢಳಿತ ಸೌಧದ ಸಿಬ್ಬಂದಿ ಬೆಕ್ಕಸ ಬೆರಗಾಗಿ ಹೋದರು. ತಮ್ಮ ಕಣ್ಣಿಗೆ ರಾಚುತ್ತಿರುವ ದೃಷ್ಯ ನಿಜಾನಾ ಸುಳ್ಳಾ..ಎಂಬಂತೆ, ವಿವಿದ ಇಲಾಖಾ ಧಿಕಾರಿಗಳು ಸಿಬ್ಬಂದಿಯವರು, ಅಚ್ಚರಿ ಚಕಿತರಾಗಿ ತಾವಿದ್ದಲ್ಲೇ ಶಿಲಾಮೂರ್ತಿಗಳಂತೆ ತಟಸ್ಥವಾಗಿದ್ದರು. ತದನಂತರ ಶಾಸಕರು ಅಲ್ಲಿ ನೆರಿದಿದ್ದ ಸಾರ್ವಜನಿಕರನ್ನುದ್ದೇಶಿಸಿಮಾತನಾಡಿ, ಕಚೇರಿಗೆ ಬರುವ ಸಾರ್ವಜನಿಕರು ಎಲ್ಲಿಂದರಲ್ಲಿ, ಕಸ ಹಾಕಬಾರದು ಹಾಗೂ ಉಗುಳಬಾರದು. ತಂಬಾಕು ಸೇವನೆ ಆರೋಗ್ಯಕ್ಕೆ ಹಾನಿಕರ, ಸಾರ್ವಜನಿಕ ಸ್ಥಳಗಳಲ್ಲಿ ಕಚೇರಿಗಳಲ್ಲಿ ತಂಬಾಕು ಉತ್ಪನ್ನಗಳ ಬಳಕೆ ನಿಷಿದ್ಧ. ಕಚೇರಿಗಳ ಆವರಣದಲ್ಲಿ ಯಾರೂ ಕಸ ಹಾಕಬಾರದು ಉಗುಳಬಾರದು, ಇವೆಲ್ಲಾ ನಮ್ಮ ನಿಮ್ಮೆಲ್ಲರ ಆಸ್ಥಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳಬೇಕಿದೆ. ಅದು ಪ್ರತಿಯೊಬ್ಬರ ಆಧ್ಯ ಕರ್ಥವ್ಯವಾಗಿದೆ, ನೈರ್ಮಲ್ಯತೆ ಕಾಪಾಡುವುದು ಅಧಿಕಾರಿಗಳ ಹಾಗೂ ಸಿಬ್ಬಂದಿಯ ಜವಾಬ್ದಾರಿಯಾಗಿದೆ. ತಂಬಾಕು ಸೇವನೆ ಕ್ಯಾನ್ಸರ್ ಗೆ ಕಾರಣ ಆದ್ದರಿಂದ ಇಂದಿನ ಯುವ ಪೀಳಿಗೆ ತಂಬಾಕು ಉತ್ಪನ್ನಗಳ ಸೇವನೆ, ಮದ್ಯಪಾನ, ಸೇವನೆಯಿಂದ ಅಮೂಲ್ಯ ಜೀವನ ಹಾಳುಮಾಡಿಕೊಳ್ಳುತ್ತಿದೆ. ವ್ಯಸನಗಳು ಸಮಾಜಕ್ಕೆ ಮಾರಕವಾಗಿದ್ದು, ಯುವಕರು ಇಂತಹ ದುಶ್ಚಟಗಳಿಗೆ ಬಲಿಯಾಗಬಾರದು.ತಮ್ಮ ಅಮೂಲ್ಯವಾದ ಸಮಯವನ್ನು, ಸದಾ ಸಮಾಜಮುಖಿ ಕೆಲಸಗಳಲ್ಲಿ ತೊಡಗಿಸಿಕೊಳ್ಳಬೇಕಿದೆ. ಯುವಕರೆಲ್ಲರೂ ಆದರ್ಶ ವ್ಯಕ್ತಿತ್ವ ರೂಡಿಸಿಕೊಂಡು, ಸಮಾಜಕ್ಕೆ ಮಾದರಿಯಾಗಬೇಕೆಂದು ನೆರೆದ ಯುವಕರಿಗೆ ಶಾಸಕರು ಕರೆ ನೀಡಿದರು. ತಹಶಿಲ್ದಾರರು ಹಾಗೂ ವಿವಿದ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಸಾರ್ವಜನಿಕರು ಹಾಗೂ ಯುವಕರು ನಾಗರೀಕರು ಇದ್ದರು.
ವರದಿ-✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ.