ಶ್ರೀ ಗವಿಸಿದ್ದಪ್ಪ ಹೊಸಮನಿ ಜಲ್ಲಾ ವಾರ್ತಾ ಅಧಿಕಾರಿಗಳಿಂದ ವಿಶ್ವ ಪತ್ರಿಕಾ ದಿನಾಚರಣೆ ಉದ್ಘಾಟನೆ ಕಾರ್ಯಾಕ್ರಮಕ್ಕೆ ಚಾಲನೆ ನೀಡಿದರು.

Spread the love

ಶ್ರೀ ಗವಿಸಿದ್ದಪ್ಪ ಹೊಸಮನಿ ಜಲ್ಲಾ ವಾರ್ತಾ ಅಧಿಕಾರಿಗಳಿಂದ ವಿಶ್ವ ಪತ್ರಿಕಾ ದಿನಾಚರಣೆ ಉದ್ಘಾಟನೆ ಕಾರ್ಯಾಕ್ರಮಕ್ಕೆ ಚಾಲನೆ ನೀಡಿದರು.

ಕೊಪ್ಪಳ ಜಿಲ್ಲೆಯ ಯಲಬುರ್ಗಾ ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆಯಲ್ಲಿಂದು ನಡೆದ ವಿಶ್ವ ಪತ್ರಿಕಾ ದಿನಾಚರಣೆ. ಕಾರ್ಯಾಕ್ರಮವು ಅದ್ದೂರಿಯಾಗಿ ಜರುಗಿತು.  ಕರ್ನಾಟಕ ಪತ್ರಕರ್ತ ಸಂಘ (ರಿ)  ಬೆಳಗಾವಿ-ಬೆಂಗಳೂರು. ಯಲಬುರ್ಗಾ ತಾಲೂಕು ಘಟಕದವತಿಯಿಂದ ಇಂದು ವಿಶ್ವ ಪತ್ರಿಕಾ ದಿನಾಚರಣೆ ಕಾರ್ಯಕ್ರಮವು ಯಶಸ್ವಿಯಾಗಿ ಜರುಗಿತು. ಕೊಪ್ಪಳ ಜಿಲ್ಲೆಯ ಯಲಬುರ್ಗಾದ ಕಿತ್ತೂರು ರಾಣಿ ಚೆನ್ನಮ್ಮ ವಸತಿ ಶಾಲೆ ಹೊಸಳ್ಳಿಯಲ್ಲಿಂದು ಅದ್ದೂರಿಯಾಗಿ ಈ ಕಾರ್ಯಕ್ರಮದ ಪ್ರಯುಕ್ತ ಮಾನ್ಯ ಶ್ರೀ ಗವಿಸಿದ್ದಪ್ಪ ಹೊಸಮನಿ ಜಲ್ಲಾ ವಾರ್ತಾ ಅಧಿಕಾರಿ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಕೊಪ್ಪಳ ಇವರ ನೇತೃತ್ವದೊಂದಿಗೆ ಹಾಗೂ ವೇದಿಕೆ ಮೇಲಿರುವ ಎಲ್ಲಾ ಗಣ್ಯರು ಪಾಲ್ಗೊಂಡು ಸಸಿಗೆ ನೀರು ಹಾಕುವ ಮೂಲಕ ಈ ಕಾರ್ಯಕ್ರಮದ ಉದ್ಘಾಟನೆಗೆ ಚಾಲನೆ ನೀಡಿದರು. ತದ ನಂತರ ಈ ಕಾರ್ಯಕ್ರಮದ ಅಧ್ಯಕ್ಷತೆ ಶ್ರೀಖಾಜಾವಲಿ ಎಪ್ ಜರಕುಂಟಿಯವರು ಹಾಗೂ ಪ್ರಸ್ತಾವಿಕ ನುಡಿಯನ್ನ ಶ್ರೀಕಾಂತಗೌಡ ಮಾಲಿಪಾಟೀಲ್ ಸಂಘಟನಾ ಕಾರ್ಯದರ್ಶಿಯವರು ಈ ಕಾರ್ಯಕ್ರಮದ ನಿಮಿತ್ಯವಾಗಿ ಪ್ರಸ್ತಾವಿಕ ನುಡಿಯನ್ನ ಮಾತನಾಡಿದರು,  ವಿಶೇಷವಾಗಿ ಶ್ರೀಗವಿಸಿದ್ದಪ್ಪ ಹೊಸಮನಿಯವರು ಪತ್ರಕರ್ತರ ನೋವು/ನಲಿವುಗಳ ಬಗ್ಗೆ ಸ್ವ-ವಿಸ್ತಾರವಾಗಿ ವಿವರಣೆ ನೀಡುವುದರ ಮೂಲಕ ನಮ್ಮ ಜಿಲ್ಲೆಯಲ್ಲಿ ಸಾಕಷ್ಟು ಪತ್ರಿಕೆಗಳು ಇದ್ದಾವೆ ಅದರ ಜೊತೆ ಜೊತೆಗೆ ಪತ್ರಕರ್ತರ ಸಂಖ್ಯೆಯು ಹೆಚ್ಚಾಗಿದೆ, ಮಾಧ್ಯಮವು ನಾಲ್ಕನೆ ಸ್ಥಾನಕ್ಕೆ ಇದ್ದ ನಮ್ಮ ಪತ್ರಿಕಾ ಅಂಗವಾಗಿದೆ, ಆದ್ದರಿಂದ ಈ ಪತ್ರಿಕಾ ಅಂಗಕ್ಕೆ ತನ್ನದೆಯಾದ ಸ್ಥಾನವಿದೆ, ಯಾರು ಸಹ ಪತ್ರಿಕಾ ಅಂಗಕ್ಕೆ ಕಳಂಕ ಬಾರದಂತೆ ನಿಷ್ಠೆಯಿಂದ ಕಾರ್ಯನಿರ್ವಹಿಸಬೇಕಾಗಿದೆ ಎಂದು  ಪತ್ರಿಕಾ ಮಾಧ್ಯಮದವರಿಗೂ ಮತ್ತು ಶಾಲಾ ಮಕ್ಕಳ ಮುಂದಿನ ಭವಿಷ್ಯಸಕ್ಕಾಗಿ ಮಕ್ಕಳೆ ನೀವುಗಳು ಪ್ರತಿ ನಿತ್ಯ ಚೆನ್ನಾಗಿ ಓದಬೇಕು. ನಿಮ್ಮ ಗುರಿ ತಲುಪುವವರೆಗೂ ನಿಲ್ಲಬಾರದು ಎಂದು ಶಾಲಾ ಮಕ್ಕಳಿಗೆ ಕಿವಿ ಮಾತು ಹೇಳುವ ಮೂಲಕ ಎರಡು ಮಾತನ್ನ ಮುಗಿಸಿದರು. ತದ ನಂತರ  ಶ್ರೀದೇವೇಂದ್ರಪ್ಪ ಜರ್ಲಿ ಸರ್ಕಾರಿ ಪ್ರೌಡಶಾಲೆ ಶಿಕ್ಷಕರು ತಾಳಕೇರಿಯವರು ಪತ್ರಿಕೆಯ ಉಗಮದ ಬಗ್ಗೆ ಸಂಪೂರ್ಣವಾಗಿ ಮಕ್ಕಳಿಗೆ ಮಾಹಿತಿ ನೀಡಿದರು. ಇದರ ಜೊತೆ ಜೊತೆಗೆ ಉತ್ತರ ಕರ್ನಾಟಕದ ಕಲಾವಿದರಿಂದ ಅವಳು ಲೈಲಾ ಅಲ್ಲಾ ನಾನು ಮಜ್ನೂ ಅಲ್ಲಾ ಎಂಬ ಸಿನಿಮಾದ ಪೋಸ್ಟರ್ ಬಿಡುಗಡೆ ಮಾಡಿದರು. ತದ ನಂತರ ಗಣ್ಯಾನ ಗಣ್ಯರಿಗೆ ಸನ್ಮಾನ ಕಾರ್ಯಕ್ರಮದ ಜೊತೆಗೆ ಪತ್ರಿಕಾ ರಂಗದಲ್ಲಿ ಹಗಲಿರುಳು ಎನ್ನದೆ ಸಾಮಾಜದ ಹಕ್ಕು/ಡೊಂಕ್ಕುಗಳನ್ನ ತಿದ್ದುವಲ್ಲಿ ಶ್ರಮಿಸುವಂತಹ ಪತ್ರಕರ್ತರಿಗೆ ಸನ್ಮಾನಿಸಿ ಗೌರವಿಸಲಾಯಿತು. ಒಟ್ಟಿನಲ್ಲಿ ಯಲಬುರ್ಗಾ ಪಟ್ಟಣದಲ್ಲಿಂದು ವಿಶ್ವ ಪತ್ರಿಕಾ ದಿನಾಚರಣೆ ಕಾರ್ಯಕ್ರಮವು ವಿಜೃಂಭಣೆಯಿಂದ ಜರುಗಿತು. ಈ ಕಾರ್ಯಕ್ರಮದಲ್ಲಿ ಶ್ರೀ ಶರಣಪ್ಪ ಗುಮಗೇರಿ ಜಿಲ್ಲಾಧ್ಯಕ್ಷರು, ಕ.ಪ.ಸಂ, ಕೊಪ್ಪಳ, ಶ್ರೀ ಬಸವರಾಜ ತನ್ನಳ್ಳಿ ತಹಶೀಲ್ದಾರರು, ಯಲಬುರ್ಗಾ, ಶ್ರೀ ಬಸವಲಿಂಗಪ್ಪ ಭೂತ ಮುಖಂಡರು, ಯಲಬುರ್ಗಾ, ಶ್ರೀ ಐಪದರಾಟ ಉಲ್ಟಾಗಡ್ಡಿ ಮುಖಂಡರು, ಯಲಬುರ್ಗಾ, ಶ್ರೀ ದಿಸುವಾಕ್ಷಪ್ಪ ಬಿ. ಹನಮಶೆಟ್ಟಿ ಪ್ರಾಂಶುಪಾಲರು ಕಿ.ರಾ.ಚ.ವ.ಶಾಲೆ ಹೊಸಳ್ಳಿ ಶ್ರೀ ಡಾ. ಶಿವರಾಜ ಗುರಿಕಾರ ಪ್ರಾಂಶುಪಾಲರು ಸ.ಶ್ರ.ದ.ಕಾ. ಯಲಬುರ್ಗಾ, ಶ್ರೀ ಬಸವರಾಜ ಗೌಡಾ ಮುಖಂಡರು, ಯಲಬುರ್ಗಾ, ಶ್ರೀ ದಿವಣ್ಣ ನಿಂಗೋಜಿ ಕ.ಸಾ.ಪ, ಮಾಜಿ ಅಧ್ಯಕ್ಷರು ಕೊಪ್ಪಳ, ಶ್ರೀ ಸಂತೋಷ ಪಾಟೀಲ ಬಿರಾದಾರ ತಾ.ಪಂ.ಕಾರ್ಯನಿರ್ವಾಹಕ ಅಧಿಕಾರಿಗಳು  ಶ್ರೀ ನಾಗೇಶ ಪ.ಪಂ.ಮುಖ್ಯಾಧಿಕಾಲ, ಯಲಬುರ್ಗಾ, ಶ್ರೀ ಶಿವಕುಮಾರ ಕಟ್ಟಮನಿ ಪ.ಪಂ. ಮುಖ್ಯಾಧಿಕಾಲಗಳು. ಶ್ರೀ ಕಳಕನಗೌಡ ಪಾಟೀಲ (ಕಲ್ಲೂರ) ಮುಖಂಡರು. ಶ್ರೀ ಅರವಿಂದಗೌಡ ಎಸ್. ಪಾಟೀಲ ಮುಖಂಡರು. ಶ್ರೀ ಸಂಗಪ್ಪ ಎಸ್. ಬಂಡಿ ಮುಖಂಡರು, ಯಲಬುರ್ಗಾ, ಶ್ರೀ ಶಾಮೀದಸಾಬ ಮುಲ್ಲಾ ಮುಖಂಡರು, ಯಲಬುರ್ಗಾ, ಶ್ರೀ ಬಾಲದಂಡಪ್ಪ ತಳವಾರ ಕ.ಸಾ.ಪ. ತಾಲೂಕಾಧ್ಯಕ್ಷರು, ಯಲಬುರ್ಗಾ, ಶ್ರೀ ಬಾಲಚಂದ್ರ ಬಾಯ್, ಸಾಲಭಾವಿ ಮುಖಂಡರು. ಶ್ರೀ ಕಳಕಪ್ಪ ಕಂಬಳಿ ಮುಖಂಡರು, ಯಲಬುರ್ಗಾ, ಶ್ರೀ ಬೀರಪ್ಪ ಬಿಸರಳ್ಳಿ ಮುಖಂಡರು. ಶ್ರೀ ಯಮನೂರಪ್ಪ ತಳವಾರ ಮುಖಂಡರು. ಕಿತ್ತೂರ ರಾಣಿ ಚನ್ನಮ್ಮ ವಸತಿಶಾಲೆ 10ನೇ ತರಗತಿ ಪ್ರತಿಭಾನ್ವಿತ ವಿಧ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಸಾಂಸ್ಕೃತಿಕ ಕಾರ್ಯಕ್ರಮ : ಕು| ಅರ್ಜುನ ಚೆನ್ನಪ್ಪ ಇಟಗಿ ಕನ್ನಡ ಕೋಗಿಲೆ ಖ್ಯಾತ ಗಾಯಕರು ಯಲಬುರ್ಗಾ. ಯಲಬುರ್ಗಾ ತಾಲೂಕ ಕರ್ನಾಟಕ ಪತ್ರಕರ್ತರ ಸಂಘದ ಪದಾಧಿಕಾರಿ ಶ್ರೀ ಖಾಜಾವಲ ಜರಕುಂಟಿ ಅಧ್ಯಕ್ಷರು ಶ್ರೀ ಮಲ್ಲಿಕಾರ್ಜುನ ಹಡಪದ ಪ್ರಧಾನಕಾರ್ಯದರ್ಶಿ ಶ್ರೀಕಾಂತಗೌಡ ಮಾಲಿಪಾಟೀಲ್, ಶ್ರೀ ಚನ್ನಪ್ಪ ಇಟಗಿ. ಶ್ರೀ ಶರಣಬಸಪ್ಪ ದಾನಕ್ಕೆ. ಶ್ರೀ ಹುಸೇನಸಾಬ ಮೊತೆಖಾನ. ಶ್ರೀ ಗುರುಬಸಯ್ಯ ಜಡಿಮಠ. ಸಂಘದ ಸರ್ವ ಸದಸ್ಯರು  ಪಾಲ್ಗೊಂಡಿದ್ದರು.

ವರದಿ :- ಸಂಪಾದಕೀಯಾ.

Leave a Reply

Your email address will not be published. Required fields are marked *