ಆರ್.ಬಿ.ಐನಿಂದ ಅತ್ಯುತ್ತಮ ಬ್ಯಾಂಕ್ ಸ್ಥಾನಮಾನ : ವೃತ್ತಿ ಶಿಕ್ಷಣ ಕೋರ್ಸ್ ಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೂ ಪ್ರತಿಭಾ ಪುರಸ್ಕಾರ. ಬೆಂಗಳೂರು, ಆ, 28; ಸೌಹಾರ್ದ ಸಹಕಾರಿ ಕ್ಷೇತ್ರದ ಪ್ರಮುಖ ಬ್ಯಾಂಕ್ ಆಗಿರುವ ಶ್ರೀ ಚರಣ್ ಸೌಹಾರ್ದ ಕೋ ಅಪರೇಟೀವ್ ಬ್ಯಾಂಕ್ ಗೆ ಆರ್.ಬಿ.ಐ ಅತ್ಯುತ್ತಮ ಸ್ಥಾನ ಮಾನ ನೀಡಿದ್ದು, ಕಳೆದ ಹಣಕಾಸು ವರ್ಷದಲ್ಲಿ 2.85 ಕೋಟಿ ರೂ ಲಾಭ ಗಳಿಸಿದೆ. ಇತ್ತೀಚಿನ ದಿನಗಳಲ್ಲಿ ಬೇರೆ ಬೇರೆ ಬ್ಯಾಂಕ್ ಗಳು ಸಾಕಷ್ಟು ಸಮಸ್ಯೆಗಳಿಗೆ ಸಿಲುಕಿರುವ ಸಂದರ್ಭದಲ್ಲೇ ಶ್ರೀ ಚರಣ್ ಸೌಹಾರ್ದ ಕೋ ಅಪರೇಟೀವ್ ಬ್ಯಾಂಕ್ ತನ್ನ ದಕ್ಷತೆ, ಆರ್ಥಿಕ ಶಿಸ್ತು, ಗ್ರಾಹಕ ಸ್ನೇಹಿಯಾಗಿ ಕಾರ್ಯನಿರ್ವಹಿಸಿ ಯಶಸ್ಸಿನತ್ತ ದಾಪುಗಾಲಿಡುತ್ತಿದೆ. 27 ನೇ ವಾರ್ಷಿಕ ಸರ್ವ ಸದಸ್ಯರ ಸಭೆಯಲ್ಲಿ ಮಾತನಾಡಿದ ಬ್ಯಾಂಕ್ ನ ಸಂಸ್ಥಾಪಕ ಮತ್ತು ಅಧ್ಯಕ್ಷರಾದ ಬಿ.ವಿ. ದ್ವಾರಕಾನಾಥ್, ಬ್ಯಾಂಕ್ ನಲ್ಲಿ ಏಳು ಸಾವಿರ ಸದಸ್ಯರಿದ್ದು, ಈ ವರ್ಷ ೫೦೦ ಕೋಟಿ ರೂಪಾಯಿ ಸಾಲ ನೀಡಲಾಗಿದೆ. ಬ್ಯಾಂಕ್ ಲಾಭದತ್ತ ಮುನ್ನಡೆದಿದೆ. ಒಟ್ಟಾರೆ 2.85, ೨೩, ೪೩೭ರೂಪಾಯಿ ಲಾಭಗಳಿಸಿದೆ. ಆರ್.ಬಿ.ಐ ಕೂಡ ನಮ್ಮ ಬ್ಯಾಂಕ್ ಗೆ ಅತ್ಯುತ್ತಮ ಸ್ಥಾನಮಾನ ನೀಡಿದೆ. ಎಸ್.ಎಸ್.ಎಲ್.ಸಿ, ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿವರ್ಷ ಪ್ರತಿಭಾ ಪುರಸ್ಕಾರ ನೀಡುತ್ತಿದ್ದು, ಇನ್ನು ವೈದ್ಯಕೀಯ, ವೃತ್ತಿಪರ ಕೋರ್ಸ್ ಗಳ ಪ್ರತಿಭಾವಂತ ವಿದ್ಯಾರ್ಥಿಗಳಿಗೂ ಗೌರವ ಸಲ್ಲಿಸಲಾಗುವುದು ಎಂದರು.ಗ್ರಾಹಕರಾದ ಬಿ.ಕೆ. ಶ್ರೀನಿವಾಸ [ನಿರ್ಮಾಪಕ, ಬೆಂಕೋಶ್ರೀ] ಮಾತನಾಡಿ, ತಾವು ೧೫ ವರ್ಷಗಳಿಂದ ಸದಸ್ಯರಾಗಿದ್ದು, ಗ್ರಾಹಕರ ಆಶಯಗಳಿಗೆ ತಕ್ಕಂತೆ ಬ್ಯಾಂಕ್ ಕಾರ್ಯನಿರ್ವಹಿಸುತ್ತಿದೆ. ಸಿಬ್ಬಂದಿಯ ದಕ್ಷತೆ ಕೂಡ ಬ್ಯಾಂಕ್ ಯಶಸ್ಸಿಗೆ ಕಾರಣವಾಗಿದೆ ಎಂದರು.
ವರದಿ-ಹರೀಶ ಶೇಟ್ಟಿ ಬೆಂಗಳೂರು.