ಶಾಲೆಯೆಂಬುದು ಕೇವಲ ವಿಧ್ಯಾರ್ಥಿಗಳ ಅಧ್ಯಯನ ಕೇಂದ್ರ ಮಾತ್ರವಲ್ಲ. ಆತನ ಸಮಗ್ರ ವ್ಯಕ್ತಿತ್ವ ರೂಪಿಸುವ ಕೇಂದ್ರವೂ ಹೌದು. ಮಕ್ಕಳ ಶಿಕ್ಷಣವನ್ನು ರೂಪಿಸುವಲ್ಲಿ ಪೋಷಕರಿಗೆ ಸೇರಿರುವ ಮತ್ತಷ್ಟು ಜವಾಬ್ದಾರಿಗಳಿವೆ. ಮಕ್ಕಳಲ್ಲಿ ಸಾಮಾಜಿಕ ಮೌಲ್ಯಗಳನ್ನು ರೂಪಿಸುವುದರ ಜೊತೆಗೆ ಸಮುದಾಯ ಮತ್ತು ಸಮಾಜ ಜೀವನದಲ್ಲಿ ಸೈದ್ಧಾಂತಿಕ ಶಿಕ್ಷಣವನ್ನು ಅಳವಡಿಸುವುದು ಇವುಗಳಲ್ಲಿ ಸೇರಿವೆ. ಇದರಲ್ಲಿ ಮಕ್ಕಳ ಮುಂದಿನ ಭವಿಷ್ಯಕ್ಕೆ ಪಾಲಕರ ಪಾತ್ರ ಹಾಗೂ ಶಿಕ್ಷಕರ ಪಾತ್ರವು ಅಮೂಲ್ಯವಾಗಿರುತ್ತದೆ, ಇವರಿಂದ ಮಾತ್ರ ವಿಧ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಫಲಿತಾಂಶ ಮಾಡುವಲ್ಲಿ ಯಶಸ್ವಿಯಾಗುತ್ತಾರೆ. ಕೊಪ್ಪಳ ಜಿಲ್ಲೆಯ ಕುಷ್ಟಗಿ ಪಟ್ಟಣದ ವಿಜಯ ಚಂದ್ರಶೇಖರ ಶಿಕ್ಷಣ ಮಹಾವಿದ್ಯಾಲಯದ 2022-235 ಬಿಇಡಿ ಪ್ರಥಮ ಮತ್ತು ತೃತೀಯ ಸೆಮಿಸ್ಟ ಫಲಿತಾಂಶ ಪ್ರಕಟವಾಗಿದ್ದು, ಶೇ.100 ಫಲಿತಾಂಶ ದಾಖಲಾಗಿದೆ. ಪ್ರಥಮ ಸೆಮಿಸ್ಟರ್‌ನಲ್ಲಿ ಆಂಜನೇಯ ತಂ// ಯಮನೂರಪ್ಪ ಬಿಳೆಗುಡ್ಡ ತಾವರಗೇರಾ ಇವರು 600ಕ್ಕೆ 527 ಅಂಕ (ಶೇ.87.83) ಪಡೆದು ಪ್ರಥಮ ಸ್ಥಾನವನ್ನ ಪಡೆದುಕೊಂಡಿರುತ್ತಾರೆ, ಕು. ಲಕ್ಷ್ಮೀ ತಗ್ಗಿಹಾಳ ಹಾಗೂ ರಾಘವೇಂದ್ರ 600ಕ್ಕೆ 524 ಅಂಕ (ಶೇ.87.33) ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ. ತೃತೀಯ ಸೆಮಿಸ್ಟರ್‌ನಲ್ಲಿ ಕವಿತಾ ಕೊಪ್ಪದ 600ಕ್ಕೆ 546 ಅಂಕ (ಶೇ.91) ಪಡೆದು ಪ್ರಥಮ ಸ್ಥಾನವನ್ನ ಪಡೆದಿರುತ್ತಾರೆ, ಹಾಗೆ ಕು.ಗೀತಾ ತಂ// ನರಹರಿ ಬಿಳೆಗುಡ್ಡ ತಾವರಗೇರಾ ಇವರು 600ಕ್ಕೆ 543 ಅಂಕ (ಶೇ.90.50) ಪಡೆದು ದ್ವಿತೀಯ ಸ್ಥಾನ ಪಡೆದಿದ್ದಾರೆ ಎಂದು ಸಂಸ್ಥೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಒಟ್ಟಿನಲ್ಲಿ ಮುಂದಿನ ಈ ವಿಧ್ಯಾರ್ಥಿಗಳ ಮುಂದಿನ ಶಿಕ್ಷಣ ಯಶಸ್ವಿಯಾಗಿ ನಡೆಯಲಿಯಂದು ತಾವರಗೇರಾ ನ್ಯೂಸ್ ಪತ್ರಿಕಾ ಬಳಗದವತಿಯಿಂದ ಶುಭ ಹಾರೈಸುತ್ತೆವೆ.
ವರದಿ-ಸಂಪಾದಕೀಯಾ.