ಕರ್ನಾಟಕ ಸರ್ಕಾರ ಪಟ್ಟಣ ಪಂಚಾಯತ ತಾವರಗೇರಾವತಿಯಿಂದ“ಗೃಹಲಕ್ಷ್ಮೀ”ಯೋಜನೆಯ ಚಾಲನಾ ಕಾರ್ಯಕ್ರಮಕ್ಕೆ ಸಾರ್ವಜನಿಕರಿಗೆ ಆಹ್ವಾನ ಪತ್ರಿಕೆ.

Spread the love

ಕರ್ನಾಟಕ ರಾಜ್ಯದ ಮಹಿಳೆಯರ ಆರ್ಥಿಕ ಸಬಲೀಕರಣವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸರ್ಕಾರವು ಅನೇಕ ಯೋಜನೆಗಳನ್ನು ಹಮ್ಮಿಕೊಂಡಿರುತ್ತದೆ. ಕುಟುಂಬದ ನಿರ್ವಹಣೆಯಲ್ಲಿ ಕುಟುಂಬ ಯಜಮಾನಿಯ ಪಾತ್ರ ಪ್ರಮುಖವಾಗಿದ್ದು, ಯಜಮಾನಿಯು ಆರ್ಥಿಕವಾಗಿ ಸಬಲೀಕರಣಗೊಂಡಲ್ಲಿ ಕುಟುಂಬ ನಿರ್ವಹಣೆ ಉತ್ತಮ ಗುಣಮಟ್ಟದಲ್ಲಿರುತ್ತದೆ. ಆದ್ದರಿಂದ ಕುಟುಂಬದ ಯಜಮಾನಿ ಮಹಿಳೆಗೆ ಪ್ರತಿ ತಿಂಗಳು ರೂ.೨೦೦೦/- ಗಳನ್ನು ನೀಡುವ “ಗೃಹಲಕ್ಷ್ಮಿ ಯೋಜನೆ”ಯನ್ನು ಕರ್ನಾಟಕ ಸರಕಾರ ಜಾರಿಗೆ ತಂದಿದೆ. ಈಗಾಗಲೇ ಯೋಜನೆಯಡಿ ನೋಂದಣಿಯಾಗಿರುವ ಫಲಾನುಭವಿಗಳಿಗೆ ದಿನಾಂಕ : 30-08-2023 ರಂದು ಮೈಸೂರಿನಲ್ಲಿ ಗೃಹಲಕ್ಷ್ಮೀ ಯೋಜನೆಯನ್ನು ಮಾನ್ಯ ಮುಖ್ಯಮಂತ್ರಿಗಳು ಲೋಕಾರ್ಪಣೆಗೊಳಿಸಲಿದ್ದು, ಸದರಿ ಕಾರ್ಯಕ್ರಮಕ್ಕೆ ತಾವರಗೇರಾ ಪಟ್ಟಣದ ಎಲ್ಲಾ ಫಲಾನುಭವಿಗಳು ಸಾರ್ವಜನಿಕರು, ಭಾಗಿಯಾಗಲು 1) ಶ್ರೀ ಲಕ್ಷ್ಮೀವೆಂಕಟೇಶ್ವರ ಕಲ್ಯಾಣ ಮಂಟಪ ಪಟ್ಟಣ ಪಂಚಾಯತ ಹತ್ತಿರ ತಾವರಗೇರಾ 2) ಕನ್ನಡ ಸಾಹಿತ್ಯ ಭವನ ಪೋಲಿಸ್ ಸ್ಟೇಷನ್ ಹಿಂಭಾಗದಲ್ಲಿ 3) ಶ್ರೀ ಶಿವಶರಣ ಸಿದ್ಧರಾಮೇಶ್ವರ ಭೋವಿ ಸಮಾಜದ ಸಮುದಾಯ ಭವನ ಬಸವಣ್ಣ ಕ್ಯಾಂಪ್‌ನಲ್ಲಿ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಕಾರ್ಯಕ್ರಮವನ್ನು ವೀಕ್ಷಣೆ ಮಾಡಲು ಟಿ.ವಿ./ ಎಲ್.ಇ.ಡಿ. ಪರದೆ ವ್ಯವಸ್ಥೆಗೊಳಿಸಲಾಗಿರುತ್ತದೆ. ಸದರಿ ಕಾರ್ಯಕ್ರಮಕ್ಕೆ ತಾವರಗೇರಾ ಪಟ್ಟಣದ ಸಾರ್ವಜನಿಕರು, ಹಾಗೂ ಅರ್ಹ ಫಲಾನುಭವಿಗಳು, ಚುನಾಯಿತ ಜನ ಪ್ರತಿನಿಧಿಗಳು ಹಾಜರಾಗಬೇಕು ಜೊತೆಗೆ ಫಲಾನುಭವಿಗಳಿಗೆ ನೇರ ನಗದು ವರ್ಗಾವಣೆ ಮಾಡಲು ಸಂದೇಶ ಬರುವುದರಿಂದ ನೊಂದಾಯಿತ ಫಲಾನುಭವಿಗಳು ಬ್ಯಾಂಕ್‌ ಖಾತೆಯೊಂದಿಗೆ ಜೋಡಣೆ ಮಾಡಿಕೊಂಡಿರುವ ಮೊಬೈಲ್‌ ಫೋನ್‌ಗಳೊಂದಿಗೆ ಕಾರ್ಯಕ್ರಮಕ್ಕೆ ಹಾಜರಾಗಲು ತಾವರಗೇರಾ ಪಟ್ಟಣ ಪಂಚಾಯತಿವತಿಯಿಂದ ಅಹ್ವಾನ ಪತ್ರಿಕೆ ಮೂಲಕ ವಿನಂತಿಸಿಕೊಂಡಿರುತ್ತಾರೆ. ಸರ್ಕಾರ ಕೈಗೊಂಡ ಈ ಯೋಜನೆಯು ಕಡು/ಬಡವ ನಿರ್ಗತೀಕ ಫಲಾನುಭವಿಗಳ ಭವಿಷ್ಯಕ್ಕೆ ದಾರಿ ದೀಪವಾಗಲೆಂದು ತಾವರಗೇರಾ ನ್ಯೂಸ್ ಪತ್ರಿಕೆ ಬಳಗದವತಿಯಿಂದ ಶುಭವಾಗಲೆಂದು ಆಶಿಸುತ್ತೆವೆ.

ವರದಿ – ಸಂಪಾದಕೀಯಾ.

Leave a Reply

Your email address will not be published. Required fields are marked *