ಉತ್ತರ ಕರ್ನಾಟಕದ ಎಲ್ಲ ಲೋಕಸಭಾ ಕ್ಷೇತ್ರಗಳಲ್ಲಿ ಗಾಣಿಗ ಸಮುದಾಯದ ನಿರ್ಣಾಯಕ ಮತಗಳಿವೆ. ಗಾಣಿಗ ನಿಗಮದ ಅನುದಾನಕ್ಕಾಗಿ ಕಾಂಗ್ರೆಸ್ ಸರಕಾರದ ವಿರುದ್ಧ 18 ಕಿ.ಮೀ. ಪಾದಯಾತ್ರೆ ನಡೆಸಿದ ಗಾಣಿಗ ಸಮುದಾಯದ ಮುಖಂಡರು. ಕೊಪ್ಪಳ ಜಿಲ್ಲೆಯ ಯಲಬುರ್ಗಾ ತಾಲೂಕಿನ ಬೇವೂರು ಗ್ರಾಮದಿಂದ 18 ಕಿ.ಮೀ.ದೂರದ ಯಲಬುರ್ಗಾ ತಹಸಿಲ್ ಕಚೇರಿ ವರೆಗೆ ಗಾಣಿಗ ಸಮಾಜದ ಮುಖಂಡರು ಮಳೆಯನ್ನು ಲೆಕ್ಕಿಸದೆ ಪಾದಯಾತ್ರೆ ನಡೆಸಿದರು. ನಿಗಮಕ್ಕೆ ಅನುದಾನ ನೀಡದಿದ್ದರೆ ಲೋಕಸಭಾ ಚುನಾವಣೆಯಲ್ಲಿ 15 ಕ್ಷೇತ್ರಗಳಲ್ಲಿ ತಕ್ಕಪಾಠ ಕಲಿಸುವ ಎಚ್ಚರಿಕೆ ನೀಡಿದ ಸುವರ್ಣ ಕರ್ನಾಟಕ ಗಾಣಿಗ ಮಹಾಸಭಾ ಜಿಲ್ಲಾಧ್ಯಕ್ಷರಾದ ಮಲ್ಲನಗೌಡ ಎಸ್ ಕೋನನಗೌಡ್ರು ರಾಜ್ಯಾಧ್ಯಕ್ಷ ಆನಂದ ಕೆ ಮಂಡ್ಯ ರವರು ಮಾತನಾಡಿ15 ದಿನಗಳಲ್ಲಿ ನಿಗಮಕ್ಕೆ ಅನುದಾನ ನೀಡದಿದ್ದರೆ ರಾಜ್ಯದ ಎಲ್ಲ ತಾಲೂಕುಗಳಲ್ಲಿ ಸರಕಾರದ ವಿರುದ್ಧ ಕರಪತ್ರ ಹಂಚಿಕೆ ಮಾಡಲಾಗುವುದು. ಕೊಪ್ಪಳ ಲೋಕಸಭಾ ಕ್ಷೇತ್ರದಲ್ಲಿ 1 ಲಕ್ಷ ಮತಗಳಿವೆ. ಕೊಪ್ಪಳದಿಂದಲೇ ಆರಂಭಿಸಿದ್ದಿವಿ.. ಹೋರಾಟ. ಇದು ನಿರಂತರ ಹೋರಾಟ ಆಗಲಿದೆ. ಗಾಣಿಗ ಸಮುದಾಯ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿಸಿದ್ದರಿಂದ ಹೆಚ್ಚು ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ. ರಾಜ್ಯದಲ್ಲಿ 65 ಲಕ್ಷ ಗಾಣಿಗರು ಇದ್ದಾರೆ. ಜಗತ್ತಿಗೆ ಬೆಳಕು ನೀಡುವ ಸಮಾಜ ಇಂದು ಕತ್ತಲಲ್ಲಿ ಇದೆ. ಸಮಾಜದ ಯುವಕರಿಗೆ ಕುಲಕಸುಬು ಇಲ್ಲ. ಕೆಲಸ ಹರಿಸಿ ಬೆಂಗಳೂರು, ಗೋವಾ ಹೋಗುತ್ತಿದ್ದಾರೆ. ನಿಗಮದಿಂದ ಸಮಾಜಕ್ಕೆ ಅನುಕೂಲ ಆಗಲಿದೆ. ದಯಮಾಡಿ ಅನುದಾನ ಕೊಡಿ ಎಂದು ಆಗ್ರಹಿಸಿದರು. ನಿಗಮಕ್ಕೆ ಅನುದಾನ ಮತ್ತು ಸಚಿವ ಸ್ಥಾನ ನೀಡದ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಗಾಣಿಗ ಸಮಾಜದ ಮುಖಂಡರು, ನಿಗಮಕ್ಕೆ ಅನುದಾನ ನೀಡದಿದ್ದರೆ ಮುಖ್ಯಮಂತ್ರಿಗಳ ನಿವಾಸ, ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಗಾಣಿಗ ಸಮಾಜದ ಮುಖಂಡರು ಕಾಂಗ್ರೆಸ್ ಸರಕಾರಕ್ಕೆ ಎಚ್ಚರಿಕೆ ನೀಡಿದರು.
ವರದಿ-ಉಪಳೇಶ ವಿ,ನಾರಿನಾಳ