ಪಟ್ಟಣದ ಮುಖ್ಯ ಸಿಂಧನೂರು ಸರ್ಕಲ್ ನಲ್ಲಿ 4/5 ದಿನಗಳಿಂದ ನೀರು ಪೂಲ್ ಆಗುತ್ತಿದ್ದರು ಸಂಬಂದಪಟ್ಟ ಅದಿಕಾರಿಗಳ ಮಾತ್ರ ಮೌನ.

Spread the love

(ಪ್ರತಿಯೊಂದು ಜೀವಿಗಳಿಗೂ ನೀರು ಅಮೂಲ್ಯವಾದದ್ದು, ಮುಂದಿನ ಪಿಳಿಗೆಗೆ ನೀರಿ ತುಂಬಾ ಅವಶ್ಯಕತೆ ಇದೆ, ಹಾಗಾಗಿ ನೀರನ್ನ ಮಿತವಾಗಿ ಬಳಸಿ, ಜೀವಿರಾಶಿಗಳನ್ನ ಉಳಿಸಿ.) ಕುಷ್ಠಗಿ ತಾಲೂಕಿನ ತಾವರಗೇರಾ ಪಟ್ಟಣದ (ಬಸವೇಶ್ವರ ಸರ್ಕಲ್)೪ನೇ ವಾರ್ಡನಲ್ಲಿ ಬರುವ ಸಿಂಧನೂರು ಮುಖ್ಯೆ ರಸ್ತೆ ಹಾಗೂ ಮುದಗಲ್ ಮುಖ್ಯೆ ರಸ್ತೆಯ (ರೋಡ್) ಮಧ್ಯ ಭಾಗದಲ್ಲಿ ಸುಮಾರು ೪, ೫ ದಿನಗಳಿಂದ ಹಗಲು/ರಾತ್ರಿ ಎನ್ನದೆ ಸಂಪೂರ್ಣ ನೀರು ಪೂಲ್ ಹಾಗುತ್ತಿದ್ದು, ತಮ್ಮ ಇಲಾಖೆಯ ಸಂಬಂದಪಟ್ಟ ಅಧಿಕಾರಿಗಳು ನೋಡಿದರು ನೋಡದಂತೆ ತಿರುಗುತ್ತಿದ್ದಾರೆ, ಜೊತೆಗೆ ಸಾರ್ವಜನಿಕರ ಸೇವೆಗೆ ಸದಾ ಮುಂದು ಎಂದು ಪ್ರಮಾಣ ವಚನ ಸ್ವೀಕರಿಸಿದ ಕೆಲವು ಪಟ್ಟಣ ಪಂಚಾಯತಿಯ ಸದಸ್ಯರು ಸಹ ಕಂಡು/ಕಾಣದಂತೆ ಮೌನವಾಗಿದ್ದಾರೆ, ಆದರೆ ಇಲ್ಲಿ ಹಗಲು ರಾತ್ರಿ ಎನ್ನದೇ ಸಂಪೂರ್ಣ ನೀರು ಪೂಲ್ ಆಗುತ್ತಿರುವುದು ಯಾರ ಕಣ್ಣಿಗೆ ಕಾಣುತ್ತಿಲ್ಲ, ಜೊತೆಗೆ ಈ ನೀರಿನಿಂದ ರೋಡ್ ಸಂಪೂರ್ಣ ತನ್ನ ಶಕ್ತಿ ಕಳೆದುಕೊಳ್ಳುತ್ತಿದೆ, ಮತ್ತು ಮುಖ್ಯೆ ರಸ್ತೆಯ (ರೋಡ್) ಮಧ್ಯ ಭಾಗದಲ್ಲಿ ರೋಡ್ ತಗ್ಗು ಬಿದ್ದಿದೆ, ಪಟ್ಟಣದಿಂದ ಹಾದು ಹೋಗುವ ಒಳ ಚರಂಡಿ ಕೂಡ ಇದರ ಅಕ್ಕ/ಪಕ್ಕದಲ್ಲಿಯೆ ಇದೆ, ಪಟ್ಟಣದ ಕೆಲವು ವಾರ್ಡಗಳಿಗೆ ಇದೇ ನೀರು ಸರಬುರಾಜು ಆಗುತ್ತಿದೆ, ಈ ನೀರಿನ ಜೊತೆಗೆ ಚರಂಡಿಯ ನೀರು ಸಹ ಪೂಲ್ ಆಗಬಹುದು. ಪಟ್ಟಣದ ಕೆಲವು ವಾರ್ಡಿನ ಸುತ್ತಮುತ್ತಲಿನ ಮನೆಗಳಿಗೆ ಈ ನೀರಿನ ಜೊತೆಗೆ ಒಳ ಚರಂಡಿಯ ನೀರು ಸಹ ಸರಬುರಾಜು ಆಗುತ್ತಿದ್ದು, ಈ ನೀರಿನಿಂದ ಪಟ್ಟಣದಲ್ಲಿ ಸಾರ್ವಜನಿಕರ ಮತ್ತು ಮಕ್ಕಳ ಆರೋಗ್ಯ ಅದೇಗೇಡುತ್ತಿದ್ದು, ಜೊತೆಗೆ ಈ ಕಲುಷಿತ ನೀರು ಬಳಕೆಯಿಂದ ಹಲವು ಸಮಸ್ಯಗಳು ಎದುರಾಗುತ್ತಿದ್ದಾವೆ. ಕೂಡಲೆ ಸಂಬಂದಪಟ್ಟ ಅಧಿಕಾರಿಗಳು ಅಂದರೆ ತಾವರಗೇರಾ ಪಟ್ಟಣ ಪಂಚಾಯತಿಯ ಅಧಿಕಾರಿಗಳು ಮತ್ತು ಪಿ.ಡ್ಬ್ಲ್ಯೂಡಿ ಇಲಾಖೆಯವರು ಈ ವಿಷಯದ ಕುರಿತು ಗಂಭೀರವಾಗಿ ಮನಗೊಂಡು ಸೂಕ್ತ ಪರಿಹಾರ ಒದಗಿಸಬೇಕು, ತಾವುಗಳು ಕೂಡಲೆ ಈ ಸ್ಥಳಕ್ಕೆ ಆಗಮಿಸಿ ಸ್ಥಳ ಪರಿಶೀಲಿಸಿ ಸಂಬಂದಪಟ್ಟವರಿಗೆ ತಿಳಿಸಿ, ನಂತರ ಕಾರ್ಯ ಪ್ರವೃತ್ತಿಗೆ ತಗೇದುಕೋಳ್ಳದೆ ಹೋದಲ್ಲಿ ಮುಂದಿನ ದಿನಮಾನಗಳಲ್ಲಿ ನಿಮ್ಮ ಕಾರ್ಯಾಲಯದ ವಿರುದ್ದ ದಂಗೆ ಹೇಳ ಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು, ಈ ಸಂದರ್ಭದಲ್ಲಿ ರಾಜಾನಾಯ್ಕ ಸಮಾಜ ಸೇವಕರು ಮತ್ತು ಎಪ್.ಐ.ಟಿ.ಯು.ರಾಜ್ಯ ಪ್ರಾಧಾನ ಕಾರ್ಯಧರ್ಶಿ ಹಾಗೂ ಯಮನೂರಪ್ಪ ಬಿಳೆಗುಡ್ಡ, ಅಧ್ಯಕ್ಷರು ಆಮ್ ಆದ್ಮಿ ಪಾರ್ಟಿ ತಾವರಗೇರಾ ಹೋಬಳಿ ಘಟಕ. ಇಲ್ಲಿರುವ ಸಮಸ್ಯಗಳನ್ನು ಆಲಿಸಿ ಕೂಡಲೇ ಪರಿಹಾರ ಒದಗಿಸಬೇಕೆಂದು ಮಾಧ್ಯಮದ ಮೂಲಕ ತಮ್ಮ ಆಕ್ರೋಶ ವೆಕ್ತ ಪಡಿಸಿದರು.

ವರದಿ-ಉಪಳೇಶ ವಿ.ನಾರಿನಾಳ

Leave a Reply

Your email address will not be published. Required fields are marked *