ದಿನಾಂಕ:02.09.2023 ಶನಿವಾರ ಸಂಜೆ 07.30 ಗಂಟೆಯಿಂದ ಆನ್ಲೈನ್ ಗೂಗಲ್ ಮೀಟ್ ನಲ್ಲಿ ವಾಯ್ಸ್ ಆಫ್ ಬಂಜಾರ ಗಾಯನ ಗೋಷ್ಠಿ ನಡೆಯಿತು. 71ನೇ ವಾರದ ವಾಯ್ಸ್ ಆಫ್ ಬಂಜಾರ ಗಾಯನ ಗೋಷ್ಠಿಯ ಆಹ್ವಾನಿತರಾಗಿ ಝೂರಿಲಾಲ್ ನಾಯ್ಕ್ ಸಬ್ ಇನ್ಸ್ಪೆಕ್ಟರ್ ಈ ವಾರದ ಸೇಲಿಬ್ರೀಟಿಯಾಗಿ ಭಾಗವಹಿಸಿದ್ದರು. ಡಾ. ಕಠಾರಿ ನಾಯ್ಕ್, ಶ್ರೀ ಬಾಲು ಆರ್ ಚವ್ಹಾಣ್, ಪುಷ್ಪಾ ಬಾಯಿ ಭಾಗವಹಿಸಿದ್ದರು ಹಾಗೂ ಹರಿದಾಸ್ ನಾಯ್ಕ್, ಸುರೇಶ ರಜಪೂತ್, ಶಿವಪ್ರಕಾಶ್ ಮಹಾರಾಜರು ಹಾಜರಾಗಿ ಉದಯೋನ್ಮುಖ ಗಾಯಕರ ಗಾಯನ ಆಲಿಸಿ ಸಲಹೆ ಸೂಚನೆಗಳನ್ನು ನೀಡಿ ಪ್ರೋತ್ಸಾಹಿಸಿದರು. ನಿರ್ಣಾಯಕರಾಗಿ ಬಂಜಾರ ಹಿರಿಯ ಗಾಯಕರು ಲೇಖಕರು ಆದ ಕಲಾಶ್ರೀ ವಸಂತ ಎಲ್ ಚವ್ಹಾಣ್ ಮತ್ತು ಜೀವ ಪಿ.ಎಸ್. ಗಾಯಕರು ಹಾಜರಿದ್ದರು . ವಾಯ್ಸ್ ಆಫ್ ಬಂಜಾರದ ಸಂಚಾಲಕರಾದ ಶ್ರೀ ಗೋಪಾಲ್ ನಾಯಕ್ ನಿರೂಪಣೆ ಮತ್ತು ನಿರ್ವಹಣೆ ಮಾಡಿದರು. ವಾಯ್ಸ್ ಆಫ್ ಬಂಜಾರದ ಸಂಸ್ಥಾಪಕರು ಮತ್ತು ಸಂಚಾಲಕರು ಶ್ರೀ ರಾಮು ಎನ್ ರಾಠೋಡ್ ಮಸ್ಕಿ ಉಪಸ್ಥಿತರಿದ್ದರು. ದೇವು ಲಮಾಣಿ, ಸಂತೋಷ ಬಂಜಾರ, ಸಂತೋಷ ಲಮಾಣಿ, ಇಂದುಮತಿ ಚವ್ಹಾಣ್, ಪ್ರಕಾಶ್ ರಾಠೋಡ್, ರವಿಚಂದ್ರ ನಾಯ್ಕ್, ಧರ್ಮೆಂದ್ರಕುಮಾರ್ ಪಿ ಎಲ್, ಕುಮಾರ್ ನಾಯ್ಕ್, ಅನಿತಾ ರಾಠೋಡ್, ದೇವಸಿಂಗ್ ರಾಠೋಡ್, ದುಗಾ ನಾಯ್ಕ್, ರವಿಶಂಕರ್ ನಾಯ್ಕ್, ದಿನೇಶ್ ಆರ್, ಲಕ್ಷ್ಮೀ ಬಾಯಿ ಮಂಗಳೂರು, ಕವಿತಾ ಎಸ್ ನಾಯ್ಕ್, ರವಿ ಬೆಸ್ಕಾಂ, ಗೋಪಾಲ ಚವ್ಹಾಣ್, ರವಿ ಲಂಬಾಣಿ, ಚಂದಪ್ಪ ನಾಯ್ಕ್, ಕಪಿಲ್ ಚವ್ಹಾಣ್ ಮತ್ತು ಬಂಜಾರ ಹಿರಿಯ ಗಾಯಕರು ಮತ್ತು ಉದಯೋನ್ಮುಖ ಗಾಯಕರು, ಬರಹಗಾರರು ಭಾಗವಹಿಸಿ ಬಂಜಾರ ಜಾನಪದ ಭಾವಗೀತೆ ಭಜನೆ ಮತ್ತು ಸಂಸ್ಕೃತಿ ಸಂಪ್ರದಾಯ ಇತಿಹಾಸ ಕುರಿತು ಹಾಡುಗಳನ್ನು ಹಾಡಿದರು, ಕಾರ್ಯಕ್ರಮಕ್ಕೆ ಮೆರುಗು ಕೂಡ ತಂದರು.
ವರದಿ-ಉಪಳೇಶ ವಿ.ನಾರಿನಾಳ.