ವಿಜಯನಗರ ಜಿಲ್ಲೆ ಹೊಸಪೇಟೆ: ತಾಲೂಕಿನ ಅಲ್ಪ ಸಂಖ್ಯಾತರ ವಸತಿ ಶಾಲೆ ಹಾಗೂ ವಸತಿ ನಿಲಯಗಳ, ಹೊರಗುತ್ತಿಗೆ ನೌಕರರ ಆರು ತಿಂಗಳ ಬಾಕಿ ವೇತನ ಮಂಜೂರಾತಿಗೆ ಕ್ರಮಕ್ಕೆ ಒತ್ತಾಯಿಸಿ. ಸೆ6ರಂದು ನಗರದ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ,ಅಲ್ಪ ಸಂಖ್ಯಾತ ಹಾಸ್ಟೆಲ್ ನ ಹೊರಗುತ್ತಿಗೆ ನೌಕರರು ಮನವಿ ಪತ್ರ ನೀಡಿದ್ದಾರೆ. ಅವರು ಕ.ರಾ.ವ.ಶಾ.ಹಾಗೂ ವ.ನಿ.ಹೊರಗುತ್ತಿಗೆ ನೌಕರರ ಸಂಘದ, ವಿಜಯನಗರ ಜಿಲ್ಲಾ ಘಟಕದ ಜಿಲ್ಲಾಧ್ಯಕ್ಷ ಮರಡಿ ಜಂಬಯ್ಯ ನಾಯಕ ನೇತೃತ್ವದಲ್ಲಿ ಮನವಿ ಮಾಡಿದ್ದಾರೆ. ಸಂಬಂಧಿಸಿದಂತೆ ಹೋರಾಟಗಾರ ಮರಡಿ ಜಂಬಯ್ಯ ನಾಯಕ ಮಾತನಾಡಿ, ಹೊಸಪೇಟೆ ತಾಲೂಕಿನ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ. ಹಾಸ್ಟೆಲ್ ಹೊರಗುತ್ತಿಗೆ ನೌಕರರಿಗೆ ಕಳೆದ ಆರು ತಿಂಗಳುಗಳಿಂದ. ವೇತನ ಮಂಜೂರು ಆಗಿಲ್ಲ, ಶೀಘ್ರವೇ ಬಾಕಿ ವೇತನ ಮಂಜೂರು ಮಾಡಬೇಕೆಂದು ಅವರು ಒತ್ತಾಯಿಸಿದರು. ಕೂಡಲೇ ಸ್ಪಂಧಿಸಿದ ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ, ಸಂಬಂಧಿಸಿದ ಇಲಾಖಾಧಿಕಾರಿಗೆ ತುರ್ತಾಗಿ ಸಂಬಳ ಪಾವತಿಸುವಂತೆ ಅಧಿಕಾರಿಗಳಿಗೆ ಆದೇಶ ಮಾಡಿದರು. ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮಾತನಾಡಿ, ಇದರಂತೆ ಬಿಸಿಎಂ ಮತ್ತು ಸಮಾಜ ಕಲ್ಯಾಣ ಕಲ್ಯಾಣ ಇಲಾಖೆಯ. ನೌಕರರ ಹಾಗೂ ಹೊರಗುತ್ತಿಗೆ ನೌಕರರ, ಬಾಕಿ ಇದ್ದ ಮೂರು ತಿಂಗಳ ಸಂಬಳವನ್ನು ಬಿಡುಗಡೆ ಮಾಡಿರುವ ಬಗ್ಗೆ. ಅವರು ಈ ಮೂಲಕ ನೌಕರರ ಗಮನಕ್ಕೆ ತಂದರು, ಮುಖಂಡರಾದ ಬಿ.ರಮೇಶ್ ಕುಮಾರ್ ಹಾಗೂ ಎಂ.ಧನರಾಜ್. ಹಾಸ್ಟೆಲ್ ಹೊರಗುತ್ತಿಗೆ ನೌಕರರು ಇದ್ದರು.
ವರದಿ-✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ.