ಎನೇ ಇರಲಿ ಕಲೆಯ ನಲೆಯಲ್ಲಿ ಬದುಕುವ ಹಂಬಲ ಹೊತ್ತು ಅಭಿನಯವೆ ನನ್ನ ಜೀವಾಳವೆಂದು ಹಗಲಿರುಳು ಎನ್ನದೆ ಶ್ರಮಿಸುತ್ತಿರುವ ಕಲಾವಿಧರಿಗೆ ಹಾಗೂ ನನ್ನ ಆತ್ಮೀಯ ಗೆಳೆಯನ ಚಿತ್ರವು ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು. (ಅವಳು ಲೈಲಾ ಅಲ್ಲ, ನಾನು ಮಜ್ಜು ಅಲ್ಲ’ ಈ ಚಲನ ಚಿತ್ರವು ಶತ ದಿನೋತ್ಸವ ಆಚರಿಸಲೆಂದು ಶುಭ ಹಾರೈಕೆ. ಕುಷ್ಟಗಿ ತಾಲೂಕಿನ ಸಮೀಪದ ಬಳೂಟಗಿ ಗ್ರಾಮದ ಯುವಕ ಯಲ್ಲು ಪುಣ್ಯಕೋಟಿ ಅವರ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯದಲ್ಲಿ ‘ಅವಳು ಲೈಲಾ ಅಲ್ಲ, ನಾನು ಮಜ್ಜು ಅಲ್ಲ’ ಎಂಬ ಚಲನಚಿತ್ರ ನಿರ್ಮಾಣ ಮಾಡುವ ಮೂಲಕ ಸ್ಯಾಂಡ್‌ವುಡ್‌ನಲ್ಲಿ ಪದಾರ್ಪಣೆ ಮಾಡಿದ್ದಾರೆ. ಮಹಾನಗರಗಳಲ್ಲಿ ಮತ್ತು ಶ್ರೀಮಂತರ ಮಕ್ಕಳು ಮಾಡುವಂತ ಸಾಹಸಕ್ಕೆ ಕುಷ್ಟಗಿ ತಾಲೂಕಿನ ಬಳೂಟಗಿ ಗ್ರಾಮದ ಬಡ ರೈತನ ಮಗ ಯಲ್ಲು ಪುಣ್ಯಕೋಟಿ, ಚಲನಚಿತ್ರ ಕ್ಷೇತ್ರದಲ್ಲಿ ಕೃಷಿ ಮಾಡಲು ಸಜ್ಜಾಗಿದ್ದಾರೆ. ರಾಜ್ಯಾದಂತ 50 ಚಿತ್ರಮಂದಿರಗಳಲ್ಲಿ ಸೆ.8 ರಂದು ‘ಅವಳು ಲೈಲಾ ಅಲ್ಲ, ನಾನು ಮಜ್ಜು ಅಲ್ಲ’ ಚಲನಚಿತ್ರ ತೆರೆ ಇಂದು ಕಾಣಲಿದೆ. ನಟ, ನಟಿಯರು: ಕಲ್ಯಾಣ ಕರ್ನಾಟಕ ಭಾಗದ ಸಿಂಧನೂರಿನ ಅಜಯ ಕುಮಾರ ನಾಯಕನ ಪಾತ್ರದಲ್ಲಿ, ನಾಯಕಿಯಾಗಿ ಉಡುಪಿಯ ನಿಹಾರಿಕಾ, ಹುಬ್ಬಳ್ಳಿಯ ಅಶ್ವಿನಿ, ತಾವರಗೇರಾ ಸಮೀಪದ ಜುಮಲಾಪೂರು ಗ್ರಾಮದ ಪತ್ರಕರ್ತ ಆಮಾಜಪ್ಪ ನಾಯಕ ನಟನ ಗೆಳೆಯನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಅದರಂತೆ ಆಮಾಜಪ್ಪ ಅವರ ಮಗಳು ಪಲ್ಲವಿ ಸಹ ಈ ಚಿತ್ರದ ಮೂಲಕ ಬಾಲ್ಯ ನಟಿಯಾಗಿ ಅಭಿನಯಿಸಿದ್ದಾಳೆ.
ಹಾಸ್ಯ ಕಲಾವಿದ ಡಿಂಗ್ರಿ ನರೇಶ ಅವರು ಹಾಸ್ಯ ಪಾತ್ರದಲ್ಲಿ ಮಿಂಚಲಿದ್ದಾರೆ. ಕಲ್ಯಾಣ ಕರ್ನಾಟಕದ 125ಕ್ಕೂ ಹೆಚ್ಚು ಕಲಾವಿದರು ಈ ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರೀಕರಿಸಿದ ಸ್ಥಳಗಳು ಕೊಪ್ಪಳ ಜಿಲ್ಲೆಯ ಆನೆಗುಂದಿ, ಡಣಾಪೂರು, ಹೆಬ್ಬಾಳ, ಸಿಂಧನೂರು, ಗಾಂಧಿನಗರ, ಹೊಸಪೇಟೆ, ಚಿಕ್ಕಮಗಳೂರು, ಹಾಸನ, ಹಿರಿಯೂರು, ಚಿತ್ರದುರ್ಗ, ಬೆಂಗಳೂರು ಸೇರಿದಂತೆ ನಾನಾ ಕಡೆ ಚಿತ್ರೀಕರಿಸಲಾಗಿದೆ.ಎಲ್ಲೆಲ್ಲಿ ಬಿಡುಗಡೆ? ಕುಷ್ಟಗಿ, ಕನಕಗಿರಿ, ಇಲಕಲ್, ಸಿಂಧನೂರು, ಯಲಬುರ್ಗಾ, ಕಾರಟಗಿ, ಗಂಗಾವತಿ, ಹೊಸಪೇಟೆ, ಮಾನ್ವಿ, ಪೋತ್ನಾಳ ಸೇರಿದಂತೆ ರಾಜ್ಯಾದಂತ ಏಕಕಾಲಕ್ಕೆ 50 ಚಿತ್ರಮಂದಿರಗಳ ತೆರೆ ಮೇಲೆ ಕಾಣಲಿದೆ. ಎನೇ ಇರಲಿ ಕಲೆಯ ನಲೆಯಲ್ಲಿ ಬದುಕುವ ಹಂಬಲ ಹೊತ್ತು ಅಭಿನಯವೆ ನನ್ನ ಜೀವಾಳವೆಂದು ಶ್ರಮಿಸುವ ಕಲಾವಿಧರಿಗೆ ಹಾಗೂ ನನ್ನ ಆತ್ಮೀಯ ಗೆಳೆಯನ ಚಿತ್ರವು ಇಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದ್ದು. ತಾವುಗಳು ತಮ್ಮ ಸ್ನೇಹಿತರ ಜೊತೆಗೆ ಈ ಚಿತ್ರವನ್ನು ನೋಡಿ. ಈ ನಮ್ಮ ಆತ್ಮೀಯ ಗೆಳೆಯನ ಪ್ರತಿಭೆಯನ್ನು ಪ್ರೋತ್ಸಾಯಿಸಬೇಕಾಗಿ ವಿನಂತಿ* *ತಪ್ಪದೆ ಇಂದು ಚಿತ್ರಮಂದಿರಕ್ಕೆ ಹೋಗಿ ಕನ್ನಡ ಚಿತ್ರವನ್ನ ಉಳಿಸಿ/ಬೆಳಿಸಬೇಕಾಗಿ ತಮ್ಮಲ್ಲಿ ವಿನಂತಿ, ಜೊತೆಗೆ ಅವಳು ಲೈಲಾ ಅಲ್ಲ, ನಾನು ಮಜ್ಜು ಅಲ್ಲ’ ಸಿನಿಮಾವು ಶತ ದಿನೋತ್ಸವ ಆಚರಿಸಲೆಂದು ತಾವರಗೇರಾ ನ್ಯೂಸ್ ಪತ್ರಿಕಾ ಬಳಗದವತಿಯಿಂದ ಶುಭ ಹಾರೈಸುತ್ತೇವೆ. ವರದಿ-ಸಂಪಾದಕೀಯಾ |