ಕೆಲವು ಆಟೋರಿಕ್ಷಾಗಾರರು ಬೀದಿ ಬದಿ ವ್ಯಾಪರಸ್ಥರಿಗೆ ತೊಂದರೆ ನೀಡುತ್ತಿರುವ ಬಗ್ಗೆ ಮನವಿ. ಈ ಮನವಿಯ ಆಧಾರದ ಮೇಲೆ ಸೂಕ್ತ ಕ್ರಮದ ಬಗ್ಗೆ, ಉಲ್ಲೇಖ: ಮಾನ್ಯ ಮುಖ್ಯ ಅಧಿಕಾರಿಗಳು, ಪುರಸಭೆ ಮುದಗಲ್ ಇವರಿಗೆ ನೀಡಲಾದ ಮನವಿ ಈ ಮೇಲ್ಕಾಣಿಸಿದ ವಿಷಯಕ್ಕೆ ಸಂಭಂಧಿಸಿದಂತೆ ಫಡರೇಷನ್ ಆಫ್ ಇಂಡಿಯನ್ನ ಟ್ರೇಡ್ ಯುನಿಯನ್, ರಾಜ್ಯ ಸಮೀತಿ ಹಾಗೂ ಜಿಲ್ಲಾ ಸಮೀತಿವತಿಯಿಂದ ಮನವಿ ಮಾಡಿಕೊಂಡರು.
ಮನವಿಯ ವಿವರ :- ರಾಯಚೂರು ಜಿಲ್ಲೆಯ ಲಿಂಗಸೂಗೂರು’ ತಾಲೂಕಿನ ಮುದಲ್ ಬೀದಿ ಬದಿ ತಳ್ಳುವ ಗಾಡಿ ವ್ಯಾಪರಸ್ಥರು ಕಳೆದ ಸುಮಾರು 20 ವರ್ಷಗಳಿಂದ ಮುದಗಲ್ ಪುರಸಭೆ ಹಿಂದುಗಡೆ ಬಯಲು ರಂಗಮಂದಿರ ಆವರಣದಲ್ಲಿ ಚಿಕ್ಕಪುಟ್ಟ ವ್ಯಾಪಾರ ಮಾಡುತಿದ್ದು ಜೀವನ ನಿರ್ವಹಣೆ ಮಾಡುತಿದ್ದಾರೆ, ಇತ್ತೇಚೆಗೆ ಕೆಲವು ಸಮಯದ ನಂತರ ಕರ್ನಾಟಕ ರಕ್ಷಣಾ ವೇದಿಕೆಗೆ ಸೇರಿದವರನ್ನೆಲಾದ ಕೆಲವು ಜನ ಸದರಿ ಜಾಗವನ್ನು ಅಕ್ರಮಿಸಿಸುವ ಉದ್ದೇಶದಿಂದ ಬಿದಿಬದಿ ವ್ಯಾಪಾರಿಗಳು ಕಳೆದ 20 ವರ್ಷಗಳಿಂದ ಬಳಸುತ್ತಿರುವ ಸದರಿ ಜಾಗದಲ್ಲಿ ಆಟೋ ಸ್ಟಾಂಡ್ ಹಾಕಿಕೊಂಡು ವ್ಯಾಪಾರಿಗಳಿಗೆ ತೊಂದರೆ ಹಾಗೂ ಬೆದರಿಕೆಯನ್ನು ನೀಡುತಿದ್ದಾರೆ ಈ ಬಗ್ಗೆ ಉಲ್ಲೇಖ-1 ರಂತೆ ಮುಖ್ಯ ಅಧಿಕಾರಿಗಳು, ಪುರಸಭೆ ಮುದಗಲ್ ಇವರಿಗೆ ದೂರು ನೀಡಿರುತ್ತಾರೆ, ಆದರೆ ಸದರಿ ದೂರಿಗೆ ಪುರಸಭೆ ಅಧಿಕಾರಿಗಳು ಯಾವೂದೇ ಕ್ರಮ ಜರುಗಿಸದೇ ಕೇವಲ ಬೀದಿಬದಿ ಬಗೆಹರಿಸುವುದಾಗಿ ಭರವಸೆ ನೀಡಿ ಬಹಳ ದಿನಗಳಾಗಿದೆ. ವ್ಯಾಪರಿಗಳಿಗೆ ಈ ಸಮಸ್ಯೆಯನ್ನು ಪುರಸಭೆ, ಮುದಗಲ್ ವತಿಯಿಂದ ಆಟೋರಿಕಾ ಸ್ಟಾಂಡ್ ಗಾಗಿ ಈಗಾಗಲೆ ಸ್ಥಳ ನಿಗಧಿಡಿಸಿ ಆಟೋಸ್ಟಾಂಡ್ ಅವರಿಗಾಗಿ ಪ್ರತ್ಯೇಕ ಜಾಗವಿದ್ದರೂ ದುರುದ್ದೇಶದಿಂದ ಕೆಲವು ಕ್ರಿಮಿಗಳು ವ್ಯಾಪಾರಿಗಳು ಉಪ ಜೀವನ ನಡೆಸಲು ತಳ್ಳುಬಂಡಿ ಬೀದಿಬದಿ ವ್ಯಾಪಾರ ಮಾಡುತ್ತಿರುವ ಜಾಗದಲ್ಲಿ ಹೊಸ ಆಟೋ ಸ್ಟಾಂಡ್ ಉದ್ಭವಿಸಿದ್ದಾರೆ. ಕಾರಣ ಪುರಸಭೆವತಿಯಿಂದ ನಿಗಧಿಪಡಿಸಿದ ಬಿದಿಬದಿ ವ್ಯಾಪಾರದ ಸ್ಥಳದಲ್ಲಿ ಆಟೋ ಸ್ಟಾಂಡ್ ಮಾಡಿ ಅಲ್ಲಿ ಬೀದಿಬದಿ ವ್ಯಾಪಾರ ಮಾಡಲು ಹಾಗೂ ಸಾರ್ವಜನಿಕರ ಜನದಟ್ಟಣೆಯಿಂದ ಟ್ರಾಫಿಕ್ ಸಮಸ್ಯೆಯಿಂದ ಸಾರ್ವಜನಿಕರಿಗೆ ಮತ್ತು ಬೀದಿಬದಿ ವ್ಯಾಪರಸ್ಥರಿಗೆ ತುಂಬಾ ತೊಂದರೆ ಆಗುತ್ತಿದೆ. -2- ಸದರಿ ಆಟೋ ಸ್ಟಾಂಡ್ ನಿರ್ಮಾಣದಿಂದ ಅಪಘಾತಗಳು ಆಗಿ ಜೀವ ಹಾನಿಗಳು ಆಗುವ ಎಲ್ಲಾ ಸಂಭವಗಳು ಇರುತ್ತವೆ ಕಾರಣ ದಯಾಳುಗಳಾದ ತಾವುಗಳು ವ್ಯಾಪರಿಗಳಿಗೆ “ಉಪಜೀವನ” ನಡೆಸಲು ಪುರಸಭೆ ನಿಗಧಿಪಡಿಸಿದ ಜಾಗದಲ್ಲಿ ದುರುದ್ದೇಶದಿಂದ ಅಕ್ರಮಿಸಲು ಬರುವ ಕೆಲವು ಆಟೋದವರ ಮೇಲೆ ಸೂಕ್ತ ಕ್ರಮ ತೆಗೆದುಕೊಂಡು ನಮಗೆ ರಕ್ಷಣೆ ನೀಡಲು ಕೋರಿಕೆ. ತಕ್ಷಣ ಕ್ರಮ ತೆಗೆದುಕೊಳ್ಳದಿದ್ದಲ್ಲಿ ನಮ್ಮ ಜಿಲ್ಲಾ ಹಾಗೂ ರಾಜ್ಯ ಸಮೀತಿವತಿಯಿಂದ ಬೃಹತ್ ಮುದಗಲ್ ಬಂದ್ ಹಮ್ಮಿಕೊಂಡು ಪ್ರತಿಭಟನೆ ನಡೆಸಲಾಗುವುದು ಎಂದು ಮನವಿ ಮಾಡಿಕೊಂಡರು. ಈ ಸಂದರ್ಭದಲ್ಲಿ ಸುಲೇಮಾನ್ ಕಲರ್ ಪೆ (ರಾಜ್ಯಧ್ಯಕ್ಷರು) (ಫೆಡೆರೇಷನ್ ಆಫ್ ಇಂಡಿಯನ್ ಟ್ರೇಡ್ ಯುನಿಯನ್) ರಾಜಾ ನಾಯಕ (ರಾಜ್ಯ ಪ್ರಧಾನ ಕಾರ್ಯದರ್ಶಿ) (ಜಿಲ್ಲಾಧ್ಯಕ್ಷರು) ಕಾನೂರು (ರಾಜ್ಯ ಕಾರ್ಯಕಾರಿಣಿ ಸದಸ್ಯರು) (ಫೆಡರೇಷನ್ ಆಫ್ ಇಂಡಿಯನ್ ಟ್ರೇಡ್ ಯುನಿಯನ್) ಯೂಸುಫ್(ರಾಜ್ಯ ಕಾರ್ಯಕಾರಿಣಿ ಸದಸ್ಯರು) (ಫೆಡೆರೇಷನ್ ಆಫ್ ಇಂಡಿಯನ್ ಟ್ರೇಡ್ ಯುನಿಯನ್) ಇತರರು ಪಾಲುಗೊಂಡಿದ್ದರು.
ವರದಿ-ಸಂಪಾದಕೀಯಾ.