ಎದ್ದೇಳು ಕರ್ನಾಟಕ ನೇತೃತ್ವದಲ್ಲಿ ಇಂದು *ಕೊಪ್ಪಳ ಲೋಕಸಭಾ ಚುನಾವಣೆ – ಮೊದಲ ಸಿದ್ಧತಾ ಸಭೆ.

Spread the love

Normal
0

false
false
false

EN-US
X-NONE
X-NONE

MicrosoftInternetExplorer4

/* Style Definitions */
table.MsoNormalTable
{mso-style-name:”Table Normal”;
mso-tstyle-rowband-size:0;
mso-tstyle-colband-size:0;
mso-style-noshow:yes;
mso-style-priority:99;
mso-style-qformat:yes;
mso-style-parent:””;
mso-padding-alt:0in 5.4pt 0in 5.4pt;
mso-para-margin-top:0in;
mso-para-margin-right:0in;
mso-para-margin-bottom:10.0pt;
mso-para-margin-left:0in;
line-height:115%;
mso-pagination:widow-orphan;
font-size:11.0pt;
font-family:”Calibri”,”sans-serif”;
mso-ascii-font-family:Calibri;
mso-ascii-theme-font:minor-latin;
mso-fareast-font-family:”Times New Roman”;
mso-fareast-theme-font:minor-fareast;
mso-hansi-font-family:Calibri;
mso-hansi-theme-font:minor-latin;}

ಎದ್ದೇಳು ಕರ್ನಾಟಕ ನೇತೃತ್ವದಲ್ಲಿ ಇಂದು *ಕೊಪ್ಪಳ ಲೋಕಸಭಾ ಚುನಾವಣೆಮೊದಲ ಸಿದ್ಧತಾ ಸಭೆ. ಜರುಗಿತು. ಬೆಂಗಳೂರಿನ ಪ್ರಗತಿಪರ ಚಿಂತಕರಾದ ಡಾ..ಆರ್. ವಾಸವಿ ಸಭೆಯಲ್ಲಿ ಭಾಗವಹಿಸಿ ಮತನಾಡಿದರು.     ಬರಲಿರುವ 2024 ಲೋಕಸಭಾ ಚುನಾವಣೆ ಭಾರತದ ಪ್ರಜಾಪ್ರಭುತ್ವದ ಅಳಿವು ಉಳಿವನ್ನು ತೀರ್ಮಾನಿಸುವ ನಿರ್ಣಾಯಕ ಘಟ್ಟವಾಗಿದೆ. ಎಲ್ಲ ಜೀವಪರ ಶಕ್ತಿಗಳು ಫ್ಯಾಸಿಸ್ಟ್ ಶಕ್ತಿಗಳ ವಿರುದ್ಧ ಸಂಘಟಿತರಾಗಿ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳಲು ತಡಮಾಡದೆ ಸಜ್ಜುಗೊಳ್ಳಬೇಕಿದೆ. ದಿಕ್ಕಿನಲ್ಲಿ ಎದ್ದೇಳು ಕರ್ನಾಟಕದ ಕೇಂದ್ರ ತಂಡವು ಖಚಿತ ಪ್ರಸ್ತಾಪವನ್ನು ಮುಂದಿಟ್ಟಿದೆ ಎಂದರು. ರಾಜ್ಯ ರೈತ ಸಂಘದ ಮುಖಂಡರಾದ JM ವೀರಸಂಗಯ್ಯ ಮಾತನಾಡಿ,ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಕೋಮುವಾದಿ ಬಿಜೆಪಿಯನ್ನು ಸೋಲಿಸಲು ಎದ್ದೇಳು ಕರ್ನಾಟಕದ ಪಾತ್ರ ಪ್ರಮುಖವಾಗಿದೆ. ಸಾವಿರಾರು ಸ್ವಯಂ ಸೇವಕರು ಯಾವುದೆ ಫಲಾಪೇಕ್ಷೆ ಇಲ್ಲದೆ ರಾಜ್ಯಾದ್ಯಂತ ನಿಸ್ವಾರ್ಥದಿಂದ ಹಗಲು ರಾತ್ರಿ ಕಷ್ಟ ಪಟ್ಟಿದ್ದಾರೆ. ಹಿನ್ನೆಲೆಯಲ್ಲಿ  ರಾಜ್ಯ ಸರ್ಕಾರದ ಮುಂದೆ ರೈತರ, ಕಾರ್ಮಿಕರ, ಬಡವರ, ಸಣ್ಣ ವ್ಯಾಪಾರಸ್ಥರ  ಹತ್ತು ಹಲವು ಬೇಡಿಕೆಗಳನ್ನು ಮುಂದಿಡಲಾಗಿದೆ. ಜಿಲ್ಲಾ ಮಟ್ಟದಲ್ಲಿ ಸಮಾವೇಶ ನಡೆಸಿ ಜಿಲ್ಲೆಯ ಶಾಸಕರ ಮತ್ತು ಉಸ್ತುವಾರಿ ಸಚಿವ ಮುಂದೆ ಜಿಲ್ಲೆಯ ಹಲವು ಬೇಡಿಕೆಗಳನ್ನು ಮುಂದಿಟ್ಟು ಚರ್ಚಿಸಬೇಕು. ಜಿಲ್ಲೆಯ ಸಚಿವರು, ಶಾಸಕರು ಸಮಸ್ಯೆಗಳನ್ನು ಪರಿಹರಿಸಲು ನಿರ್ಲಕ್ಷ್ಯಿಸಿದರೆ,  ರೈತರ ಕಾರ್ಮಿಕರ ಸಾಮಾನ್ಯ ಹಿತರಕ್ಷಣೆಗಾಗಿ   ಹೋರಾಟ ಮಾಡಲು ಸಹ  ಹಿಂಜರಿಯಬಾರದು ಎಂದರು. ಅಲ್ಲಮಪ್ರಭು ಬೆಟ್ಟದೂರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಒಂದು ದೇಶ ಒಂದು ಚುನಾವಣೆ ಮತ್ತು ಇಂಡಿಯದ ಬದಲು ಭಾರತ  ನಾಮಕರಣದ  ರಾಜಕೀಯ, ಜನರ ಮೂಲಭೂತ  ಸಮಸ್ಯೆಗಳನ್ನು ಮರೆ ಮಾಚುವ ತಂತ್ರವಾಗಿದೆ. ಡಿ.ಹೆಚ್.ಪೂಜಾರ ಮಾತನಾಡಿ, ದೇಶದ ಅರ್ಧದಷ್ಟಿರುವ ಮಹಿಳೆಯರನ್ನು, ದಲಿತ,ಆದಿವಾಸಿ, ಅತಿ ಹಿಂದುಳಿದ ಜನರನ್ನು ಪ್ರಾಣಿಗಳಂತೆ ಕಾಣುವ, ಎರಡನೆ ದರ್ಜೆಯ ನಾಗರಿಕರೆಂದು ಪ್ರತಿಪಾದಿಸುವ ಮತ್ತು ಸಮಾಜದ  ಅಸಮಾನತೆಗೆ ಕಾರಣವಾಗಿರುವ ಸನಾತನ ಧರ್ಮದ  (ಹಿಂದುತ್ವ ಮೂಲಭೂತವಾದವನ್ನು) ವಿರುದ್ಧ ಹೋರಾಡಬೇಕಾಗಿದೆ.  ಉದಯ ನಿಧಿ ಸ್ಟಾಲಿನ್ ಹೇಳಿಕೆ ಸರಿಯಾಗಿದೆ ಎಂದರು. ವಸಂತ ಕಾಹಳೆ ಕ್ರಾಂತಿ ಗೀತೆ ಹಾಡಿದ್ದಲ್ಲದೆ, ಸ್ವಾಗತ ಕೋರಿದರು. ಎದ್ದೇಳು ಕರ್ನಾಟಕದ ಕೊಪ್ಪಳ ಜಿಲ್ಲಾ ಸಮಿತಿಯನ್ನು ರಚಿಸಲಾಯಿತು. ಜಿಲ್ಲಾ ಕೋಡಿನೇಟರ್ ಆಗಿ ಎಮ್.ಡಿ.ಸಿರಾಜ್ ಇವರನ್ನು ಸಭೆ ಅನುಮೋದಿಸಿತು. ಕುಮಾರ ಸಮತ ಕೇಂದ್ರ ಸಮಿತಿಯ ನಿರ್ಣಯ ಹಾಗು ಮುಂದಿನ ಕಾರ್ಯಭಾರಗಳ ಕುರಿತು ಮಾತನಾಡಿದರು. ಮಹಾಂತೇಶ ಕೊತಬಾಳ, ಬಸವರಾಜ ಶೀಲವಂತರ, ಹನುಮಂತಪ್ಪ ಹೊಳೆಯಾಚೆ, ಮದ್ದಾನಯ್ಯಹಿರೇಮಠ, ಆನಂದ ಭಂಡಾರಿ,ಕೆ.ಬಿ.ಗೋನಾಳ, ಕರಿಯಪ್ಪ ಗುಡಿಮನ  MD ಸಿರಾಜ್ ಸಿದ್ದಾಪುರ,ಕಾಶಪ್ಪ ಚಲವಾದಿ, ಸಂಜಯ ದಾಸ್, ಭೀಮಸೇನ ಕಲಿಕೇರಿ, ತಿಪ್ಪಯ್ಯ ಹಲಿಗೇರಿ, ಬಸವರಾಜ ನರೆಗಲ, ಮಹ್ಮದ ರಫಿ, ಬಸವರಾಜ ಹೊಸಮನಿ,ಶಿವಪ್ಪ ಹಡಪದ,ಶ್ರೀನಿವಾಸ M ಬೋವಿ, k ದುರ್ಗೇಶ ಸಿದ್ರಾಮಪ್ಪ,ಭರಮಪ್ಪ, ನಾಗಲಿಂಗಪ್ಪ, ಪ್ರಕಾಶ, ರಾಮಣ್ಣ ಇತರರು ಭಾಗವಹಿಸಿದ್ದರು. ಸಂಪರ್ಕಕ್ಕೆ. ಮೊ.9844049205 (ಅಲ್ಲಮಪ್ರಭು ಬೆಟ್ಟದೂರು) 7338096523(ಬಸವರಾಜ್ ಶೀಲವಂತರ) (ಡಿ.ಹೆಚ್ ಪೂಜಾರ 94486 33710) ಎಮ್.ಡಿ.ಸಿರಾಜ್-7411315308.

ವರದಿ-ಸಂಪಾದಕೀಯಾ

Leave a Reply

Your email address will not be published. Required fields are marked *