ಶ್ರೀಮತಿ ಭಾರತಿ ಕುಲಕರ್ಣಿಯವರಿಂದ ಸರ್ವ ಸಹೃದಯಿ ಬಂಧುಗಳಿಗೆ ಆತ್ಮೀಯವಾದ ಶುಭಾಶಯಗಳು.

Spread the love

ನಾನು ಶ್ರೀಮತಿ ಭಾರತಿ ಕುಲಕರ್ಣಿ, ಉತ್ತರ ಕನ್ನಡ ಜಿಲ್ಲೆಯ ಕರಾವಳಿ. ನಾನು 18 ರಿಂದ 19 ವರ್ಷಗಳ ಕಾಲ ಪರಿಣಿತ ಶಿಕ್ಷಕಿಯಾಗಿ, ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿ ಉತ್ತಮ ಅನುಭವವನ್ನು ಪಡೆದು ಹಾಗೂ NGO ಗಳಲ್ಲಿ ಸಂಪನ್ಮೂಲ ಕ್ರೂಡೀಕರಣ ವ್ಯವಸ್ಥಾಪಕಿಯಾಗಿ ಅನುಭವ ಪಡೆದು ಪರಿಣಿತಿಯನ್ನು ಹೊಂದಿರುತ್ತೇನೆ. ನಾನು ಪ್ರಮುಖ ಶಿಕ್ಷಣ ತಜ್ಞರಾದ ಡಾ. ಗುರುರಾಜ್ ಕರಜಗಿ ಮತ್ತು ಡಾ. ಸೋಮೇಶ್ವರ ಎನ್. (ಥಟ್ ಅಂತ ಹೇಳಿ ಕಾರ್ಯಕ್ರಮದ ರೂವಾರಿ) ಇವರ ಶಿಷ್ಯೆಯಾಗಿ ಶಿಕ್ಷಣ ಕ್ಷೇತ್ರದಲ್ಲಿ ತರಬೇತಿಯನ್ನು ಪಡೆದಿದ್ದೇನೆ. ಅಷ್ಟೇ ಅಲ್ಲದೆ ಮಾಧ್ಯಮಗಳಲ್ಲಿ ಸುದ್ದಿ ಬರೆಯುವುದು ಮತ್ತು ಸುದ್ದಿ ಓದುವುದು, ವಕೀಲ ವೃತ್ತಿಯ ಸಹಾಯಕರಾಗಿ, ಹಲವಾರು ಶಿಕ್ಷಕರಿಗೆ ತರಬೇತಿಯನ್ನು ನೀಡಿ ಅವರನ್ನು ಪರಿಣಿತರನ್ನಾಗಿಸಿ ಹೆಚ್ಚಿನ ಸಂತೃಪ್ತಿಯನ್ನು ಪಡೆದಿದ್ದೇನೆ.  ಪ್ರಸಕ್ತ ಸಾಲಿನಲ್ಲಿ ಬ್ರಿಲಿಯಂಟ್ ಗ್ರೂಪ್ಸ್ ಏಜೆನ್ಸಿ (BGA) ಎಂಬ ಸಲಹಾ ಕೇಂದ್ರವನ್ನು ಆರಂಭಿಸಿ ಹಲವಾರು NGO, FPO, ಟ್ರಸ್ಟ್ ಗಳು, ಸಮಾಜ ಸೇವಾ ಕೇಂದ್ರಗಳು, ಬ್ಯಾಂಕುಗಳು, ವ್ಯಾಪಾರ- ಉದ್ಯೋಗಗಳು, ಹಾಗೂ ಶಾಲಾ-ಕಾಲೇಜುಗಳಿಗೆ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದೇನೆ.

ಮುಖ್ಯವಾಗಿ ಶಾಲಾ ಕಾಲೇಜುಗಳನ್ನು ಹೊಂದಿರುವವರಿಗೆ ಹೆಚ್ಚಿನ ಸೇವೆ ಬ್ರಿಲಿಯಂಟ್ ಗ್ರೂಪ್ಸ್ ಏಜೆನ್ಸಿ(BGA)ಯಿಂದ ದೊರೆಯುತ್ತದೆ. ಏಕೆಂದರೆ ಶಾಲಾ-ಕಾಲೇಜುಗಳು ಒಂದು ಟ್ರಸ್ಟ್ ನ ಅಡಿಯಲ್ಲಿ ಪ್ರಾರಂಭಿಸಲಾಗಿರುತ್ತದೆ. ಇಂತಹ ಟ್ರಸ್ಟ್ ಗಳಿಗೆ ಹಾಗೂ ಟ್ರಸ್ಟ್ ನ ಅಡಿಯಲ್ಲಿ ಬರುವ ಶಾಲಾ-ಕಾಲೇಜುಗಳಿಗೆ ಏಕಕಾಲದಲ್ಲಿ ಸೇವೆ ಪಡೆಯಬಹುದಾಗಿದೆ.

ಉದಾಹರಣೆಗೆ ಒಂದು ಟ್ರಸ್ಟ್ ನ ಅಡಿಯಲ್ಲಿ ಒಂದು ಶಾಲೆ ನಡೆಸಲಾಗುತ್ತಿದೆ ಎಂದುಕೊಳ್ಳೋಣ. ಬ್ರಿಲಿಯಂಟ್ ಗ್ರೂಪ್ಸ್ ಏಜೆನ್ಸಿ (BGA)ಸಲಹೆಗಾರರಾಗಿ ನೇಮಕಗೊಂಡರೆ ಶಾಲೆಯಲ್ಲಿನ ಸಮಸ್ಯೆಗಳು ಮತ್ತು ಪರಿಹಾರಗಳು, ವಿದ್ಯಾರ್ಥಿಗಳ ದಾಖಲಾತಿಯನ್ನು ಹೆಚ್ಚಿಸುವ ಮಾರ್ಗ, ಶಿಕ್ಷಕರಿಗೆ ಅಗತ್ಯ ತರಬೇತಿಗಳು, ವಿದ್ಯಾರ್ಥಿಗಳೊಂದಿಗೆ ಸಂವಹನ, ಕಾಲಕಾಲಕ್ಕೆ ಶುಲ್ಕ ವಸೂಲಾತಿಯ ಮಾರ್ಗ, ಶಿಕ್ಷಕರೊಂದಿಗೆ ಸಭೆ, ಪಾಲಕರೊಂದಿಗೆ ಸಭೆ, ಆಡಳಿತ ಮಂಡಳಿಯೊಂದಿಗೆ ಸಭೆ ಇನ್ನು ಮುಂತಾದ ಅನೇಕ ಸಲಹೆಗಳನ್ನು ಸಹಕಾರಗಳನ್ನು ನೀಡುವುದರೊಂದಿಗೆ ಟ್ರಸ್ಟ್ ನ ಬೈಲಾ ಅಧ್ಯಯನ ನಡೆಸಿ ಆ ಪ್ರಕಾರವಾಗಿ ಸಮಾಜ ಸೇವೆಗೆ ಅಗತ್ಯವಿರುವ ಹಲವಾರು ಚಟುವಟಿಕೆಗಳಿಗೆ ಪ್ರೋತ್ಸಾಹಿಸುವುದು ಮತ್ತು ಮಾರ್ಗದರ್ಶನ ನೀಡುವುದು, ಕಾಗದಪತ್ರಗಳ ಕುರಿತಾದ ಮಾರ್ಗದರ್ಶನ, ಸಿ ಎಸ್ ಆರ್ ಕಂಪನಿ ಗಳಿಂದ ಹಣಕಾಸಿನ ನೆರವು ಪಡೆಯಲು ಸಹಕರಿಸುವುದು, ಸಮಾಜಸೇವೆ ಕಾರ್ಯಗಳು ಯಶಸ್ವಿಯಾಗಲು ಸಹಕರಿಸಿ ಮಾರ್ಗದರ್ಶನ ನೀಡುವುದು, ಇತ್ಯಾದಿಯಾಗಿ ಟ್ರಸ್ಟ್ ನ ಹಾಗೂ ಶಾಲೆಯ ಯಾವುದೇ ವಿಷಯದ ಕುರಿತಾಗಿ ಕುಂದು ಕೊರತೆಗಳಿದ್ದಲ್ಲಿ ಅದನ್ನು ನಿವಾರಿಸಲು ಶ್ರಮಿಸುವುದು ಬ್ರಿಲಿಯಂಟ್ ಗ್ರೂಪ್ಸ್ ಏಜೆನ್ಸಿಯ ಜವಾಬ್ದಾರಿಯಾಗಿರುತ್ತದೆ. ಅಂತಯೇ ಹಣಕಾಸಿನ ನೆರವು ಸಹಕಾರಕ್ಕಾಗಿ ಅಗತ್ಯ ಬರವಣಿಗೆಗಳನ್ನು ಸಹ ಅಂದರೆ ಕಾನ್ಸೆಪ್ಟ್ ನೋಟ್, ಪ್ರಪೋಸಲ್, ರಿಪೋರ್ಟ್ ಇತ್ಯಾದಿಗಳನ್ನು ಬ್ರಿಲಿಯಂಟ್ ಗ್ರೂಪ್ಸ್ ಏಜೆನ್ಸಿಯಿಂದ ಮಾಡಿಕೊಡಲಾಗುವುದು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಿ: 8217487133 brilliantgroupsagency@gmail.com

ವರದಿಗಾರರು-ಉಪಳೇಶ ವಿ.ನಾರಿನಾಳ

Leave a Reply

Your email address will not be published. Required fields are marked *