ಅಂಗನವಾಡಿ ಕಟ್ಟಡ ನಿರ್ಮಾಣವಾಗಿ ಎರಡು ವರ್ಷ ಕಳೆದರೂ ಅಂಗನವಾಡಿ ಕಟ್ಟಡವನ್ನು ಉದ್ಘಾಟನೆ ಮಾಡದೆ ಅಧಿಕಾರಿಗಳು ದಿವ್ಯ ನಿರ್ಲಕ್ಷದ ಬಗ್ಗೆ ಮಾನ್ಯ ಶಾಸಕರಿಗೆ ಹಾಗೂ ಕೊಡಗು ಜಿಲ್ಲಾಧಿಕಾರಿಗಳಿಗೆ ಹಾಗೂ ಲೋಕಾಯುಕ್ತಕ್ಕೆ ದೂರು ಕೊಡಲು ನಿರ್ಧರಿಸಲಾಗಿದೆ
ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಬಿಎಸ್ಎನ್ಎಲ್ ಕಚೇರಿ ಪಕ್ಕದಲ್ಲಿರುವ ಕಂದಾಯ ಇಲಾಖೆಯಿಂದ ಗುರುತಿಸಿಕೊಟ್ಟ ಜಾಗದಲ್ಲಿ ಹೊಸದಾಗಿ ಅಂಗನವಾಡಿ ಕೇಂದ್ರ ತೆರೆಯಲು 19 ಮತ್ತು 20 ಸಾಲಿನಲ್ಲಿ ಅಂದಾಜು 10 ಲಕ್ಷ ಹಣದಿಂದ ಅಂಗನವಾಡಿ ಕಟ್ಟಡ ನಿರ್ಮಾಣ ಮಾಡಲು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸೋಮವಾರಪೇಟೆ ಮತ್ತು ಗ್ರಾಮ ಪಂಚಾಯಿತಿಯಿಂದ ಈ ಕಟ್ಟಡ ನಿರ್ಮಿಸಲು ತೀರ್ಮಾನಿಸಲಾಗಿರುತ್ತದೆ ಈ ಕಟ್ಟಡಕ್ಕೆ ಸರ್ಕಾರದಿಂದ 5 ಲಕ್ಷ ಹಾಗೂ ಗ್ರಾಮ ಪಂಚಾಯಿತಿಯಿಂದ ನರೇಗಾ ಯೋಜನೆಯಲ್ಲಿ 5 ಲಕ್ಷ ಹಣದಿಂದ ಈ ಕಟ್ಟಡ ನಿರ್ಮಿಸಲು ತೀರ್ಮಾನಿಸಿರುತ್ತಾರೆ ಅದೇ ಪ್ರಕಾರ ಕಟ್ಟಡ ಆಗಿ ಎರಡು ವರ್ಷ ಕಳೆದರೂ ಕಟ್ಟಡವನ್ನು ಉದ್ಘಾಟನೆ ಮಾಡದೆ ಅಧಿಕಾರಿಗಳು ನಿರ್ಲಕ್ಷ ವಹಿಸಿದ್ದಾರೆ ಈ ಕಟ್ಟಡ ಸುಂದರವಾದ ಕಟ್ಟಡ ನಿರ್ಮಾಣವಾಗಿದ್ದರು ಸುತ್ತಲು ಗಿಡ ಗಂಟೆಗಳ ಬೆಳೆದು ಕೊಂಡಿರುತ್ತದೆ ಹಾಗೂ ಸುತ್ತಲು ಕಾಂಪೌಂಡ್ ನಿರ್ಮಾಣ ಮಾಡ ಅಂದಾಜು ವೆಚ್ಚ ಮೂರು ಲಕ್ಷದಿಂದ ಕೂಡಿರುತ್ತದೆ ಆದರೆ ಸುತ್ತಲು ಕಾಂಪೌಂಡು ಇನ್ನೂ ಸಹ ಸರಿಯಾಗಿ ಆಗಿರುವುದಿಲ್ಲ ಸಂಬಂಧಪಟ್ಟ ಅಧಿಕಾರಿಗಳ ದಿವ್ಯ ನಿರ್ಲಕ್ಷದ ಬಗ್ಗೆ ಕರ್ನಾಟಕ ರಕ್ಷಣಾ ವೇದಿಕೆ ಯಿಂದ ಮಾನ್ಯ ಶಾಸಕರಿಗೆ ಹಾಗೂ ಕೊಡಗು ಜಿಲ್ಲಾಧಿಕಾರಿಗಳಿಗೆ ಹಾಗೂ ಲೋಕಾಯುಕ್ತಕ್ಕೆ ದೂರು ಕೊಡಲು ತೀರ್ಮಾನಿಸಿರುತ್ತೇವೆ ಏಕೆಂದರೆ ಕಟ್ಟಡ ನಿರ್ಮಾಣ ವಾಗಿದ್ದರೂ ಸಹ ಯಾಕೆ ಅಂಗನವಾಡಿ ಕಟ್ಟಡ ಪ್ರಾರಂಭ ಮಾಡಿಲ್ಲ ಹಾಗೂ ಇದೇ ಅಂಗನವಾಡಿ ಜಿಎಂಪಿ ಶಾಲೆ ಶನಿವಾರಸಂತೆ 4 ವರ್ಷದಿಂದ ನಡೆಯುತ್ತಿರುತ್ತದೆ ಈ ಅಂಗನವಾಡಿಗೆ ಮಕ್ಕಳು ಗುಂಡುರಾವ್ ಬಡಾವಣೆ ಹಾಗೂ ಕೆ ಆರ್ ಸಿ ಸರ್ಕಲ್ ಮಕ್ಕಳು ಮತ್ತು ಮುಖ್ಯರಸ್ತೆಯ ಮಕ್ಕಳು ಇನ್ನಿತರ ಕಡೆಯಿಂದ ಈ ಅಂಗನವಾಡಿಗೆ ಬರುತ್ತಿದ್ದು ಈಗ ಜಿಎಂಪಿ ಶಾಲೆಯಲ್ಲಿ ಈ ಅಂಗನವಾಡಿ ನಡೆಯುತ್ತಿರುತ್ತದೆ ಆದರೆ ಕಟ್ಟಡ ನಿರ್ಮಾಣವಾಗಿದ್ದರು ಜಿಎಂಪಿ ಶಾಲೆಯಲ್ಲಿ ಯಾಕೆ ಅಷ್ಟು ದೂರ ಸಣ್ಣ ಮಕ್ಕಳು ಹೋಗಬೇಕು ಕರ್ನಾಟಕ ರಕ್ಷಣಾ ವೇದಿಕೆ ಅಧಿಕಾರಿಗಳಿಗೆ ಪ್ರಶ್ನಿಸುತ್ತಿದ್ದೇವೆ ಈ ಕಟ್ಟಡವನ್ನು ಇನ್ನು 15 ದಿನದೊಳಗೆ ಕಟ್ಟಡವನ್ನು ಉದ್ಘಾಟನೆ ಮಾಡಿ ಮಕ್ಕಳಿಗೆ ಅನುಕೂಲ ಆಗುವಂತೆ ಮಾಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯಿಂದ ಮನವಿ ಒಂದು ವೇಳೆ ತಾವುಗಳು 15 ದಿನದೊಳಗೆ ಕಟ್ಟಡ ಉದ್ಘಾಟನೆ ಮಾಡದಿದ್ದರೆ ಮಾನ್ಯ ಶಾಸಕರಿಗೆ ಹಾಗೂ ಕೊಡಗು ಜಿಲ್ಲಾಧಿಕಾರಿಗಳಿಗೆ ಹಾಗೂ ಲೋಕಾಯುಕ್ತಕ್ಕೆ ಅಧಿಕಾರಿಗಳ ಮೇಲೆ ಕರ್ನಾಟಕ ರಕ್ಷಣಾ ವೇದಿಕೆಯಿಂದ ದೂರು ಕೊಡಲು ಸಿದ್ಧತೆ ನಡೆಸುತ್ತೇವೆ. ಇದೇ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಶನಿವಾರಸಂತೆ ಹೋಬಳಿ ಮಹಿಳಾ ಘಟಕದ ಅಧ್ಯಕ್ಷರಾದ ಕುಸುಮರವರು ಮಾತನಾಡಿ ಈ ಕಟ್ಟಡ ಬೇಗನೆ ಉದ್ಘಾಟನೆ ಮಕ್ಕಳಿಗೆ ಅನುಕೂಲವಾಗಬೇಕು ಎಂದು ಅಧಿಕಾರಿಗಳಿಗೆ ಮನವಿ ಮಾಡಿರುತ್ತಾರೆ ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಸೋಮವಾರಪೇಟೆ ತಾಲೂಕು ಅಧ್ಯಕ್ಷರಾದ ಕರವೇ ಫ್ರಾನ್ಸಿಸ್ ಡಿಸೋಜರವರು ಜಿಲ್ಲಾ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಶನಿವಾರಸಂತೆ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ ಅವರಿಗೆ ಮನವಿ ಮಾಡುವುದೇನಂದರೆ ಈ ಅಂಗನವಾಡಿ ಕಟ್ಟಡವನ್ನು ಬೇಗನೆ ಉದ್ಘಾಟನೆ ಮಾಡಿ ಮಕ್ಕಳಿಗೆ ಅನುಕೂಲವಾಗುವಂತೆ ಮಾಡಿಕೊಡಬೇಕಾಗಿ ಮನವಿ ಒಂದು ವೇಳೆ ತಾವುಗಳು ಈ ಕಟ್ಟಡ ಉದ್ಘಾಟನೆ ಮಾಡಲು ನಿರ್ಲಕ್ಷ ವಹಿಸಿದರೆ ಮಾನ್ಯ ಶಾಸಕರಿಗೆ ಹಾಗೂ ಕೊಡಗು ಜಿಲ್ಲಾಧಿಕಾರಿ ಹಾಗೂ ಲೋಕಾಯುಕ್ತರಿಗೆ ದೂರು ಕೊಡಲು ಸಿದ್ಧತೆ ನಡೆಸುತ್ತೇವೆ. ಅಧ್ಯಕ್ಷರು ಕರ್ನಾಟಕ ರಕ್ಷಣಾ ವೇದಿಕೆ ಕರವೇ ಫ್ರಾನ್ಸಿಸ್ ಡಿಸೋಜ.. 9686095831 ಮತ್ತು 9449255831 ದಯವಿಟ್ಟು ಇದನ್ನು ಸುದ್ದಿ ಮಾಡಿ. ಬಡ ಮಕ್ಕಳಿಗೆ ಸಹಾಯ ಆಗಲ್ಲಿ ದಯವಿಟ್ಟು ಸಹಕರಿಸಿ.
ವರದಿ-ಮಹೇಶ ಶರ್ಮಾ.