ರಾಜ್ಯದಲ್ಲಿ ಸರ್ಕಾರಿ ಅರಣ್ಯ ಭೂಮಿಯನ್ನು ಸಾಗುವಳಿ ಮಾಡುವ ಲಕ್ಷಾಂತರ, ಸಣ್ಣ ಅತಿ ಸಣ್ಣ ರೈತ ಕುಟುಂಬಗಳು ತೀವ್ರ ಸಮಸ್ಯೆ ಅನುಭವಿಸುತ್ತಿರುವುದು ಎಲ್ಲರಿಗೂ ಗೊತ್ತಿರುವ ಸಂಗತಿ. ಭೂ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಡುವ ರಾಜ್ಯದ ಎಲ್ಲಾ ಸಂಘಟನೆಗಳು ಐಕ್ಯತೆಯಿಂದ ಹೋರಾಡಿದರ ಮಾತ್ರ, ಈ ಸಾಗುವಳಿದಾರರ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಬಹುದು. ಶಿರಸಿಯ ರವೀಂದ್ರ ನಾಯಕ ಇತರರು ಅರಣ್ಯ ಭೂಮಿಯ ಸಾಗುವಳಿದಾರರ ಪರವಾಗಿ ಸುಪ್ರೀಂ ಕೋರ್ಟ್ ನಲ್ಲಿ ಕೂಡ ಕಾನೂನಾತ್ಮಕ ಹೋರಾಟ ನಡೆಸಿದ್ದಾರೆ. ಈ ರೀತಿಯ ಬಿಡಿಯಾಗಿ ಹೋರಾಟ ನಡೆಸಿರುವವರನ್ನು ಐಕ್ಯ ಗೊಳಿಸುವ ಕಾರ್ಯಕ್ಕೆ ಪ್ರಮುಖ ಅದ್ಯತೇ ಕೊಡಬೇಕಾಗಿದೆ. ದಿನಾಂಕ 14-09-2023 ರಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಕಾನೂನ ಮಂತ್ರಿ ಎಚ್.ಕೆ.ಪಾಟೀಲರು ಆಶಾದಾಯಕ ಮಾತುಗಳನ್ನಾಡಿದರು. ಅರಣ್ಯ ಭೂಮಿಯ ಮಂಜೂರಾತಿಗೆ ಸಂಬಂಧಿಸಿದ ಕಾನೂನ ತೊಡಕುಗಳ ಕುರಿತು ಈ ತಿಂಗಳ 27 ಅಥವಾ 28 ರಂದು ಕಾನೂನ ತಜ್ಞರ ಮತ್ತು ಹೋರಾಟಗಾರರ ಸಭೆ ಕರೆಯುವುದಾಗಿ ತಿಳಿಸಿದರು. ಶಿರಸಿಯ ರವೀಂದ್ರ ನಾಯಕ ನೇತೃತ್ವದ ಸಾಗುವಳಿದಾರರ ಸಮಾವೇಶದಲ್ಲಿ ಭಾಗವಹಿಸಿದ್ದ ಸಚಿವರು, ಗದಗ ಜಿಲ್ಲೆಯಲ್ಲಿ ಅರಣ್ಯ ಅಧಿಕಾರಿಗಳ ತಕರಾರಿದ್ದರು ಕೂಡ ನಾವು ಸಾವಿರಾರು ಸಾಗುವಳಿದಾರರಿಗೆ ಭೂ ಮಂಜೂರಾತಿ ಕೊಟ್ಟಿದ್ದೆವೆಂದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ನಿವೃತ್ತ ನ್ಯಾಯಮೂರ್ತಿಗಳಾದ ನಾಗಮೋಹನ ದಾಸರವರು,
ಸರ್ಕಾರಿ ಅರಣ್ಯ ಭೂಮಿಯ ಸಾಗುವಳಿದಾರರ ಮೇಲೆ ಪೋಲೀಸರು ಮತ್ತು ಅರಣ್ಯ ಅಧಿಕಾರಿಗಳು ನಡೆಸುತ್ತಿರುವ ದೌರ್ಜನ್ಯದ ಕುರಿತು ಬೇಸರ ವ್ಯಕ್ತಪಡಿಸಿದರು. ಸರ್ಕಾರ ತಾನು ಮಾಡಿದ ಕಾನೂನಗಳನ್ನೆ ಜಾರಿಗೊಳಿಸದಿದ್ದರೆ ಹೇಗೆ. ಅರಣ್ಯ ವಾಸಿಗಳು ಮತ್ತು ಸಾಗುವಳಿದಾರರು ಅರಣ್ಯ ಮತ್ತು ನಿಸರ್ಗದ ರಕ್ಷಕರೆಂದರು. ಕಾರ್ಪೋರೇಟ ಕಂಪನಿಗಳಿಂದಲೆ ಅರಣ್ಯ ನಾಶವಾಗುತ್ತಿದೆ. ಭೂ ಮಂಜೂರಾತಿಗೆ ಸಂಬಂಧಿಸಿ 70 ವರ್ಷಗಳ ಹಿಂದಿನ ದಾಖಲಾತಿಗಳು ಜನರು ಎಲ್ಲಿಂದ ಕೊಡಬೇಕು. ಆ ಕಾಲದಲ್ಲಿ ಸರ್ಕಾರ, ಆಧಾರ ಕಾರ್ಡ್ ಮತದಾರರ ಕಾರ್ಡ್ ಕೊಟ್ಟಿತ್ತೆ ಎಂದು ಪ್ರಶ್ನಿಸಿದರು. ದಾಖಲಾತಿಗೆ ಸಂಬಂಧಿಸಿದ ನಿಯಮಾವಳಿಗಳು ಅತ್ಯಂತ ಅವೈಜ್ಞಾನಿಕವಾಗಿವೆ ಹಾಗಾಗಿ ಈ ನಿಯಮಾವಳಿಗಳನ್ನು ಕೈಬಿಡಲು ಕೇಂದ್ರ ಸರ್ಕಾರಕ್ಕೆ ಸೂಚನೆ ಕೊಡುವಂತೆ ಸುಪ್ರೀಂ ಕೋರ್ಟಿನಲ್ಲಿ ಕಾನೂನಾತ್ಮಕ ಹೋರಾಟ ನಡೆಸಿರುವುದಾಗಿ ತಿಳಿಸಿದರು.
ವರದಿ-ಸಂಪಾದಕೀಯಾ