ಗಣೇಶ ಚತುರ್ಥಿ ಶುಭಾಶಯಗಳು….ಗಣೇಶ್ ಕೆ ದಾವಣಗೆರೆ ಒಮ್ಮೆ ಕೈಲಾಸದಲ್ಲಿ ತನ್ನ ಪತಿಯೊಂದಿಗೆ ಕುಳಿತ ಪಾರ್ವತೀದೇವಿ, ಪರಶಿವನನ್ನು ಪ್ರಾರ್ಥಿಸುತ್ತಾಳೆ, “ಒಡೆಯಾ, ತಾಯಿಯ ಮನೆಗೆ ಹೋಗಿಬರುತ್ತೇನೆ, ಅನುಜ್ಞೆ ಕೊಡು” ಎಂದು. ಆಗ ಪರಶಿವನು ಮೂರು ದಿನ ಹೋಗಿ ಬಾ ಎಂದು ಅನುಮತಿ ನೀಡುತ್ತಾನೆ ಆ ಮೂರು ದಿನದ ವಿಶೇಷತೆಯೆ ಈ ಗೌರಿ ಹಬ್ಬವಾಗಿದೆ. ಹಬ್ಬವಾಗಿದೆ. ವಿನಾಯಕ ಚತುರ್ಥಿ ಎಂದು ಕರೆಯಲ್ಪಡುವ ಗಣೇಶನ ಹಬ್ಬ ಹಿಂದೂಗಳ ಪವಿತ್ರವಾದ ಹಬ್ಬಗಳಲ್ಲಿ ಒಂದು. ಭಾರತದಾದ್ಯಂತ ಈ ಹಬ್ಬವನ್ನು ಅತ್ಯಂತ ಸಂಭ್ರಮ-ಸಡಗರದಿಂದ ಆಚರಿಸುತ್ತಾರೆ. ಪಾರ್ವತಿ ದೇವಿಯ ಸೃಷ್ಟಿಯಿಂದ ಜನಿಸಿದ ಗಣೇಶನು ತಂದೆ ಶಿವನಿಂದ ಆನೆಯ ಮುಖವನ್ನು ಪಡೆಯುತ್ತಾನೆ. ಶಿವ-ಪಾರ್ವತಿಯ ಪ್ರಿಯ ಪುತ್ರ ಹಾಗೂ ಜನರ ಕಷ್ಟಗಳ ನಿವಾರಣೆಗೆ ನಿಲ್ಲುವ ಶಕ್ತಿಶಾಲಿ ದೇವ ಗಣೇಶ. ಇವನ ಹುಟ್ಟಿದ ಹಬ್ಬದ ಸಂಭ್ರದ ಆಚರಣೆಯೇ ಗಣೇಶ ಚತುರ್ಥಿ. ಭಗವಾನ್ ಗಣೇಶನು ಬುದ್ಧಿವಂತಿಕೆ, ಸಮೃದ್ಧಿ ಮತ್ತು ಅದೃಷ್ಟದ ಸಂಕೇತವಾಗಿದ್ದಾನೆ. ಭಾದ್ರಪದ ಚೌತಿಯಂದು ಮನೆಗೆ ಬರುವ ಗಜಮುಖ ವಿಘ್ನಗಳ ನಿವಾರಕ ಗಣೇಶನ ಹಬ್ಬವನ್ನು ಹಿಂದೂ ಪಂಚಾಂಗದ ಪ್ರಕಾರ ಭಾದ್ರಪದ ಮಾಸದ ಚೌತಿಯ ದಿನದಂದು ಆಚರಿಸಲಾಗುವುದು. ಭಗವಾನ್ ಗಣೇಶ ನಿಮ್ಮ ಎಲ್ಲಾ ಚಿಂತೆಗಳು, ದುಃಖಗಳು ಮತ್ತು ಉದ್ವಿಗ್ನತೆಗಳನ್ನು ನಾಶಮಾಡಿ ನಿಮ್ಮ ಜೀವನವನ್ನು ಪ್ರೀತಿ ಮತ್ತು ಸಂತೋಷವನ್ನು ಕರುಣಿಸಲಿ. ಗಣೇಶ ಚತುರ್ಥಿ ಶುಭಾಶಯಗಳು.
ವರದಿ-ಉಪಳೇಶ ವಿ.ನಾರಿನಾಳ