ಜರ್ಮಲಿ ಮತ್ತು ಎ ದಿಬ್ಬದಹಳ್ಳಿ: ಸ್ವಯಂ ಪ್ರೇರಿತ ರಕ್ತ ದಾನ ಶಿಬಿರ.

Spread the love

ವಿಜಯನಗರ ಜಿಲ್ಲೆ ಕೂಡ್ಲಿಗಿ: ತಾಲೂಕಿನ ಜರ್ಮಲಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ, ಜರ್ಮಲಿ ಮತ್ತು ಎ ದಿಬ್ಬದಹಳ್ಳಿ ಯಲ್ಲಿ. ಸೆ22ರಂದು ಪ್ರಾಥಮಿಕ ಆರೋಗ್ಯ ಕೇಂದ್ರ ಬೆಳ್ಳಿಗಟ್ಟ, ಹಾಗೂ ಬಳ್ಳಾರಿ ವಿಮ್ಸ್ ರಕ್ತ ಕೇಂದ್ರ ಮತ್ತು ವಿವಿಧ ಸಂಘ ಸಂಸ್ಥೆಗಳ ಸಹಾಕರದೊಂದಿಗೆ. ಆಯುಷ್ಮಾನ್ ಭವ ಸೇವಾ ಪಕ್ವಾಡ ಅಡಿಯಲ್ಲಿ, ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿತ್ತು. ಗ್ರಾಮಗಳ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಕ್ರೀಡಾಂಗಣದಲ್ಲಿ, ಮಾರಮ್ಮನ ದೇವಸ್ಥಾನದ ಹತ್ತಿರ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿತ್ತು. ಶಿಬಿರದಲ್ಲಿ ಮುಖ್ಯ ಶಿಕ್ಷಕರಾದ ಓ.ಲೋಹಿತಾಕ್ಷಿ, ಹಾಗೂ ಶಾಲೆಯ ಶಿಕ್ಷಕಿ ಮಂಗಳ, ಮಹಾಂತೇಶ್, ರಮೇಶ್, ಶಶಿಧರ್, ಹಾಗೂ ಆಶಾ ಕಾರ್ಯಕರ್ತರಾದ ಅಂಜಿನಮ್ಮ. ಅಂಗನವಾಡಿ ಕಾರ್ಯಕರ್ತರಾದ ಮೇದಿನಿ, ರೂಪ. ಗ್ರಾಮ ಪಂಚಾಯಿತಿ ಸದಸ್ಯರಾದ ಚಿನ್ನಪ್ಪ, ಹಾಗೂ ಹಿರಿಯ ಆರೋಗ್ಯ ನಿರಕ್ಷಣಾಧಿಕಾರಿಗಳಾದ ಕೆ. ಗುರುಮೂರ್ತಿ, ಸಮುದಾಯ ಆರೋಗ್ಯ ಅಧಿಕಾರಿಗಳಾದ ಶ್ರೀಮತಿ ಪಲ್ಲವಿ, ಶ್ರೀಮತಿ ತಿಪ್ಪಕ್ಕ, ಜಯಂತಿ, ನೇತ್ರಾವತಿ, ಪ್ರಾಥಮಿಕ ಆರೋಗ್ಯ ಸುರಕ್ಷಾ ಅಧಿಕಾರಿಗಳಾದ ಅವಿನಾಶ ಕುಮಾರಿ, ರಶ್ಮಿ, ತಿಪ್ಪೇಸ್ವಾಮಿ. ಪ್ರಯೋಗ ಶಾಲಾ ತಂತ್ರಜ್ಞಾರಾದ ಬೋರಣ್ಣ, ಆಪ್ತ ಸಮಲೋಚಕರಾದ ಜಿಗ್ರನಹಳ್ಳಿ ಕೆ. ಪ್ರಶಾಂತ್ ಕುಮಾರ್, ಓಬಣ್ಣ ಸೇರಿದಂತೆ. ಗ್ರಾಮದ ಯುವಕರು, ಗ್ರಾಮಸ್ಥರು, ಗ್ರಾಮದ ಮುಖಂಡರು ಹಾಗೂ ವಿವಿಧ ಸಂಘ ಸಂಸ್ಥೆಗಳ ಸಿಬ್ಬಂದಿಗಳು ಉಪಸ್ಥಿತರಿದ್ದು. ಶಿಬಿರದಲ್ಲಿ 25 ಕ್ಕಿಂತ ಹೆಚ್ಚು ಜನರು ರಕ್ತ ದಾನ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು, ದಿಬ್ಬದಲ್ಲಿ ಆಶಾ ಕಾರ್ಯಕರ್ತೆಯಾದ ಅಂಜಿನಮ್ಮ, ಮತ್ತು ಅಂಗನವಾಡಿ ಕಾರ್ಯಕರ್ತೆಯಾದ ಮೇದಿನಿರವರು. ಸ್ವಾಯಂ ರಕ್ತದಾನವನ್ನು ಮಾಡಿ, ಇತರರಿಗೆ ಮಾದರಿಯಾಗಿದ್ದಾರೆ.

ವರದಿ-✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ.

Leave a Reply

Your email address will not be published. Required fields are marked *