ಮುಖ್ಯ ಮಂತ್ರಿ ಇತರೆ ಸಚಿವರಿಗೆ ಜಿಲ್ಲಾಧಿಕಾರಿಯ ಮೂಲಕ ಮನವಿ ಕಳುಹಿಸಲಾಯಿತು. ಮಳೆಯ ಕೊರತೆಯಿಂದ ರಾಜ್ಯದಲ್ಲಿ ಉಂಟಾಗಿರುವ ತೀವ್ರ ಬರದಿಂದ,ರೈತರು ಅಷ್ಟೆ ಅಲ್ಲ ಕೂಲಿಕಾರರು, ಸಣ್ಣ ಮಧ್ಯಮ ವ್ಯಾಪಾರಿಗಳು ಸೇರಿದಂತೆ ವಿವಿಧ ರೀತಿಯ ಕೆಲಸ ಕಾರ್ಯಗಳ ಮೇಲೆ ಅವಲಂಬಿತರಾಗಿ ಬದುಕುತ್ತಿರುವ ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ತಕ್ಷಣ ಈ ಜನರ ನರವಿಗೆ ಬರದಿದ್ದರೆ ಹಸಿವಿನ ಸಾವುಗಳು, ರೈತರ ಆತ್ಮಹತ್ಯೆಗಳು ಸಂಭವಿಸುತ್ತವೆ. ಲಕ್ಷಾಂತರ ಕೋಟಿ ತೆರಿಗೆ ರಿಯಾತಿ ಪಡೆದು ಹತ್ತಾರು ಲಕ್ಷ ಕೋಟಿ ಸಂಪತ್ತನ್ನು ಗುಡ್ಡೆ ಹಾಕಿಕೊಂಡಿರುವ ಕಾರ್ಪೋರೇಟ ಕಂಪನಿಗಳಿಂದ, ಲಕ್ಷಾಂತರ ಕೋಟಿ ಮತ್ತು ದೇಶಿಯ ದೊಡ್ಡ ಉದ್ದಿಮೆಗಳಿಂದ ಹತ್ತಾರು ಸಾವಿರ ಕೋಟಿ ಸಹಾಯ ಪಡೆಯಬೇಕು. ಹಾಲಿ, ಮಾಜಿ ಶಾಸಕರು ಸಂಸದರು ಒಂದು ವರ್ಷ ದ ವೇತನ ಬರ ಪರಿಹಾರದ ನಿಧಿಗೆ ಕೊಡಬೇಕು. ಜಿಲ್ಲಾ ತಾಲೂಕ ಆಡಳಿತದ ಅಧಿಕಾರಿ ನೌಕರರು ಯುದ್ದೋಪಾದಿಯಲ್ಲಿ ಕೆಲಸ ಮಾಡಬೇಕು. ಸಾಮಾನ್ಯ ಕಾಲಮಾನದಲ್ಲಿ, ಕರ್ತವ್ಯ ಲೋಪ, ನಿರ್ಲಕ್ಷ್ಯತೆ ತೋರಿದರೆ, ಜನರು ಹತ್ತು ಹಲವು ಸಮಸ್ಯೆಗಳಿಗೆ ಸಿಲುಕಿಕೊಳ್ಳುತ್ತಾರೆ. ಆರಂಭಿಕವಾಗಿ ಅಲ್ಪಸ್ವಲ್ಪವಾಗಿದ್ದ ಮುಂಗಾರು ಮಳೆಯ ನಂತರ ರೈತರು ಬಿತ್ತನೆ ಮಾಡಿದ್ದರು. ಪ್ರತಿ ಎಕರೆ ಭೂಮಿಯನ್ನು ಕೃಷಿಮಾಡಿ ಬಿತ್ತಲು (ಮಳೆಯಶ್ರಿತ ಭೂಮಿ)15 ರಿಂದ 20 ಸಾವಿರ ಖರ್ಚು ಮಾಡಿದ್ದಾರೆ. ನಂತರ ಮಳೆ ಬಾರದ ಕಾರಣ ಬೆಳೆದ ಬೆಳೆ ಸಂಪೂರ್ಣ ನಷ್ಟವಾಗಿದೆ. ಜಿಲ್ಲೆ ಹಾಗೂ ತಾಲೂಕಿನ ಕೃಷಿ, ಕಂದಾಯ ಅಧಿಕಾರಿಗಳು ಗ್ರಾಮಗಳಿಗೆ ತೆರಳಿ ಸರ್ಕಾರಕ್ಕೆ ವಾಸ್ತವಿಕ ವರದಿ ಸಲ್ಲಿಸದೆ ನಿರ್ಲಕ್ಷ್ಯ ಮಾಡಿದ್ದಾರೆ. ಈ ಕಾರಣದಿಂದ ಮಸ್ಕಿ, ಸಿಂಧನೂರ ತಾಲೂಕುಗಳು ಸೇರಿದಂತೆ ರಾಜ್ಯದ ಹತ್ತಾರು ತಾಲೂಕುಗಳನ್ನು ಬರದ ಪಟ್ಟಿಯಿಂದ ಕೈ ಬಿಡಲಾಗಿದೆ. ಸೆಟ್ ಲೈಟ್ ಸರ್ವೆಯ ಮಾನದಂಡ ಪ್ರಕಾರ ರಾಜ್ಯ ಸರ್ಕಾರ ಕೆಲವು ತಾಲೂಕುಗಳನ್ನು ಪಟ್ಟಿಯಿಂದ ಕೈಬಿಟ್ಟಿದೆ. ಅಧಿಕಾರಿಗಳ ಕರ್ತವ್ಯ ನಿರ್ಲಕ್ಷ್ಯತೆಯಿಂದಲೆ ರಾಜ್ಯದ ಅನೇಕ ತಾಲ್ಲೂಕುಗಳು ಬರ ಪರಿಹಾರದ ಪಟ್ಟಿಯಿಂದ ಹೊರಗುಳಿದಿವೆ. ಆಯಾ ಕ್ಷೇತ್ರದ ಶಾಸಕರು, ಸಂಸದರು ಹಣ ಗಳಿಕೆ ಮಾಡುವ ವ್ಯಾವಹಾರಗಳನ್ನು ಬಿಟ್ಟು ಕೇಂದ್ರ ಮತ್ತು ಸರ್ಕಾರಕ್ಕೆ ಒತ್ತಾಯಿಸಿ ರೈತರ ನೆರವಿಗೆ ಬರಬೇಕು. ಚಿಕ್ಕಮಂಗಳೂರ, ಶಿವಮೊಗ್ಗ ಸೇರಿದಂತೆ ರಾಜ್ಯದಲ್ಲಿ 40 ವರ್ಷಗಳಲ್ಲಿಯೆ ಇಷ್ಟು ಪ್ರಮಾಣದ ಮಳೆ ಕೊರತೆ ಆಗಿರಲಿಲ್ಲವೆಂದು ತಜ್ಞರು ಹೇಳುತ್ತಿದ್ದಾರೆ. ಕೇಂದ್ರ ಸರ್ಕಾರದ 2020 ರ ಬರ ನಿರ್ವಹಣೆ ಕೈಪಿಡಿಯ ಮಾನದಂಡಗಳ ಕಾರಣದಿಂದ ಬರದ ಘೋಷಣೆಗೆ ವಿಳಂಬವಾಗಿದೆ ಮತ್ತು ಕೆಲವು ತಾಲ್ಲೂಕುಗಳನ್ನು ಬರದ ಪಟ್ಟಿಯಿಂದ ಕೈ ಬಿಡಲಾಗಿದೆ ಎಂದು ರಾಜ್ಯ ಸರ್ಕಾರ ಹೇಳುತ್ತಿದೆ. ರಾಜ್ಯ ಬಿಜೆಪಿಯ ಮುಖಂಡರು, ಮಾನದಂಡಗಳ ನಿಯಮಾವಳಿಗಳನ್ನು ಸಡಿಲಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಬೇಕು. ಕೇಂದ್ರ ಸರ್ಕಾರದ ಮಾನದಂಡಗಳ ಸೂಚ್ಯಂಕವು ಶೇಕಡ 60 ಕ್ಕಿಂತ 1 ಒಂದು ಅಂಕಿಯಷ್ಟು ಕಡಿಮೆ ಆದರೂ ಬರದ ಪಟ್ಟಿಯಿಂದ ಕೈ ಬಿಡಲಾಗುತ್ತೆ.ಸೇರ್ಪಡೆ ಮಡ ಹೆಚ್ಚಿರಬೇಕೆಂದು ಹೇಳಿದೆ. ಈಗೀನ ಅವಾಮಾನದ ಪರಸ್ಥಿತಿಯಲ್ಲಿ 15 ದಿನ ಮಳೆ ಬಾರದಿದ್ದರೆ ಬೆಳೆದ ಬೆಳೆ ಹೊಣಗಿಹೋಗುತ್ತದೆ- ನಷ್ಟವಾಗುತ್ತದೆ. ವಾಸ್ತವ ಜ್ಞಾನವಿಲ್ಲದ ಉನ್ನತ ಅಧಿಕಾರಿಗಳು ಈ ರೀತಿಯ ಮಾನದಂಡಗಳನ್ನು ತಯಾರಿಸುತ್ತ ರೈತರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಾರೆ. ಪ್ರತಿ ವರ್ಷ ರಾಜ್ಯದಿಂದ 3 ಲಕ್ಷ ಕೋಟಿ ರೂ ತೆರಿಗೆ ಪಡೆಯುವ ಕೇಂದ್ರ ಸರ್ಕಾರ ಬರ ಪರಿಹಾರಕ್ಕೆ ರಾಜ್ಯಕ್ಕೆ ಹೆಚ್ಚಿನ ಹಣ ಬಿಡುಗಡೆ ಮಾಡಬೇಕು. ಬೆಳೆ ನಷ್ಟ ಹೊಂದಿರುವ ರೈತರಿಗೆ ಪ್ರತಿ ಎಕರೆಗೆ 25 ಸಾವಿರ ಪರಿಹಾರ ಕೊಡಬೇಕು. ವರ್ಷ ಪೂರ್ತಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಕೆಲಸ ಕೊಡಬೇಕು ಮತ್ತು 500 ರೂ ಕೂಲಿ ಹೆಚ್ಚಿಸಬೇಕು. ಜಾಗತಿಕ ತಾಪಮಾನದಿಂದ ನಿಸರ್ಗದಲ್ಲಿ ಏರುಪೇರಾಗಿದ್ದರಿಂದ ದೇಶದ ಕೆಲವು ಭಾಗಗಳಲ್ಲಿ ಮಳೆಯ ಕೊರತೆಯಾದರೆ ಇನ್ನು ಕೆಲವು ಕಡೆ ಮಿತಿ ಮೀರಿ ಮಳೆ ಆಗುತ್ತಿದೆ. ಜಗತ್ತಿನ ನಾಲ್ಕಾರು ಬಲಿಷ್ಠ ದೇಶಗಳು ದೇಶದ ಅರಣ್ಯ ಇತರೆ ನಿಸರ್ಗದ ಸಂಪತ್ತನ್ನು ಲೂಟಿ ಮಾಡಿದ್ದರಿಂದಲೆ ಬೌಗೊಳಿಕ ಅಸಮತೋಲನೆ ಉಂಟಾಗಿದೆ. ಭಾರತ ದೇಶದಲ್ಲಿ ಕಾರ್ಪೋರೇಟ ಕಂಪನಿಗಳು ಅರಣ್ಯವನ್ನು ನಾಶ ಮಾಡುವುದಲ್ಲದೆ ಕಾರ್ಖಾನೆ ಇತರೆ ಕಾನೂನ ಭಾಹಿರ ಕಾರ್ಯಗಳಿಂದ ಪರಿಸರ ಮಾಲಿನ್ಯವನುಂಟುಮಾಡುತ್ತಿದ್ದಾರೆ. ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ದಹಲಿಯಲ್ಲಿ ಇತ್ತೀಚಿಗೆ ನಡೆದ ಜಿ.20 ದೇಶದ ಸಮ್ಮೇಳನದಲ್ಲಿ ಜಾಗತಿಕ ತಾಪಮಾನದ ಅಜಂಡಕ್ಕೆ ಮಹತ್ವ ಕೊಡಲಿಲ್ಲ. ಜಗತ್ತಿನ ನಾಲ್ಕಾರು ಬಲಿಷ್ಠ ದೇಶಗಳು ಜಗತ್ತಿನ ಶೇಕಡ 80 ತಾಪಮಾನಕ್ಕೆ ಕಾರವಾಗಿವೆ. ಪ್ರಾನ್ಸ್ ಒಪ್ಪಂದ ಪ್ರಕಾರ ಈ ನಾಲ್ಕಾರು ದೇಶಗಳೆ ಪರಿಸರವನ್ನು ಸರಿಪಡಿಸುವ ಖರ್ಚು ವೆಚ್ಚ ನ್ನು ಭರಿಸಬೇಕು. ಆದರೆ ಅಮೇರಿಕ ಸೇರಿಂತೆ ಕೆಲವು ದೇಶಗಳು, ಆಯಾ ಬಡದೇಶಗಳ ಸರ್ಕಾರಗಳೆ ಪರಿಸರವನ್ನು ಸರಿಪಡಿಸಿಕೊಳ್ಳಬೇಕೆಂದು ಮೊಂಡು ವಾದಕ್ಕೆ ಅಂಟಿಕೊಂಡಿವೆ. ದೆಹಲಿಯಲ್ಲಿ ನಡೆದ G 20 ದೇಶಗಳ ಸಭೆಯಲ್ಲಿ ಮೋದಿಯವರು ಈ ವಿಷಯಕ್ಕೆ ಪಟ್ಟು ಹಿಡಿದು ಮಾತನಾಡಬೇಕಾಗಿತ್ತು. ಜಾಗತಿಕ ತಾಪಮಾನ ಸರಿಪಡಿಸಲು, ಮೋದಿ ನೇತೃತ್ವದ ಸರ್ಕಾರ ಅಮೆರಿಕ ಇತರೆ ಬಲಿಷ್ಠ ದೇಶಗಳಿಗೆ ಒತ್ತಾಯಿಸುವಂತೆ,ರಾಜ್ಯದ ಜನರು ಪ್ರಶ್ನಿಸಬೇಕಾಗಿದೆ. ಡಿ.ಹೆಚ್.ಪೂಜಾರ.
ವರದಿ-ಸಂಪಾದಕೀಯಾ