ಮಿಣಕಾದ ಮುತ್ತಿನ ಕಾವ್ಯ ‘ಕಿರೀಟ’
ಕಾವ್ಯರಾಜ್ಯನಿಗೆ ತೊಡಿಸಬೇಕು
ಇನಾಮಾಗಿ ”ಸಗ್ಗ” ಸಿಗಲೆಂದು
ಕಾವ್ಯ ಕಟ್ಟುವುದು ಒಂದು ಕಲೆ!
ಕಾವ್ಯಗಳ ವಾರಿಧಿಯಲ್ಲಿ
ಹಬೀಬರಿಗಾಗಿ ಈಜಾಡುತ್ತಿದ್ದೇನೆ…
ಮಿಶ್ರವರ್ಣ ಮಹಬ್ಬತ್ತಿನ
ಮಿಷ್ಟಾನ್ನ ಕಾವ್ಯಗಳನ್ನು
ಲೋಕ ಕಲ್ಯಾಣಕ್ಕಾಗಿ
ಅರ್ಪಿಸಬೇಕಿದೆ
ಹಬೀಬರಿಗಾಗಿ ತಪಗೈಯುತ್ತಿದ್ದೇನೆ…
ಹೂಝೂರರಿಗಾಗಿ
ಗವಿಯಲ್ಲಿ ಸಿದ್ದೀಕರ
ಗಾಯಗೊಂಡ ತೋರ್ಬೆರಳ
ಪರಿಣಾಮದ ಇಶ್ಕಿನ ಒರತೆ
ಸ್ಪರ್ಗದ ಮೂಲಾಮಿಗೆ ಸಮ!
ಹಬೀಬರಿಗಾಗಿ ನೀರಾದ ಕಣ್ಣುಗಳೆಷ್ಟು!
ನಿದ್ರೆಗೆ ಜಾರುವ ಪ್ರತಿ ರಾತ್ರಿಗಳಲ್ಲಿ
ಇಂದು ಬರುವರೆಂಬ ಭರವಸೆ
ವಯಸ್ಸು ಬಸಿದು ಹೋದರು
ಕನಸಿಗೆ ಕಾಣುವ ಘಮಲಿದೆ
ಆಶಿಕುಗಳ ಕನಸಿನ ಹಾಗೆ
ನಂಬಿಕೆ ಹುಸಿಯಾಗಿದೆ…
ಹಬೀಬರಿಗಾಗಿ ಕಾಯುವ ಕಣ್ಣುಗಳೆಷ್ಟು!
ಮಾತು
ಮಥದಿಂದ ಬಂದಾದರೂ
ಮತೀಯವಾಗದಲ್ಲಿ
ಪ್ರೀತಿ ನೀತಿ ಶಾಂತಿಯ
ಆರ್ಕಷಕ ನಡೆ ನುಡಿಗಳಿಗೆ
ಗಾಂಧಿ ಗುರುನಾನಕ್
ಮೈಕಲ್ ಎಚ್ ಹಾರ್ಟ್
ಸಾಲಿನ ಜಾಗತಿಕ ದಿಗ್ಗಜರು ಸೇರಿ
ಹಬೀಬರ ಸಂದೇಶಕ್ಕೆ ಸೋತು ಹೋದವರೆಷ್ಟು!
-ಆಮಿರ್ ಬನ್ನೂರು
(ಯುವ ಕವಿ, ಲೇಖಕ)