ತಾವರಗೇರಾ ಪಟ್ಟಣದಲ್ಲಿಂದು ಈದ್ ಮಿಲಾದ್ ಹಬ್ಬದ ಪ್ರಯುಕ್ತ ಹಾಲು ವಿತರಣೆ ಕಾರ್ಯಕ್ರಮಕ್ಕೆ ಮಾನ್ಯ ಪಿ.ಎಸ್.ಐ.ನಾಗರಾಜ ಕೊಟಗಿಯವರಿಂದ ಚಾಲನೆ.

Spread the love

ಅಲ್ಲಾನ ಕೃಪೆ ನಿಮ್ಮ ಹಾಗೂ ನಿಮ್ಮ ಕುಟುಂಬದವರ ಮೇಲಿರಲಿ, ಈದ್ ಮಿಲಾದ್ ಎಂದರೆ ಪ್ರವಾದಿಯವರ ಜನ್ಮದಿನ ಎಂಬ ಕೇವಲ ಸಾಂಕೇತಿಕ ರೂಪವೇ ಹೊರತು ನಿಜವಾಗಿ ಅವರ ಸಂದೇಶಗಳ್ ಪುನರ್ಸ್ಮರಣೆ ಮತ್ತು ಆಚರಣೆಯ ಧ್ಯೋತಕವೇ ಆಗಿದೆ. ತಮ್ಮ ವಿಚಾರಗಳಿಂದ ಜಗತ್ತಿನ ಲಕ್ಷಾಂತರ ಜನರ ಹೃದಯದಲ್ಲಿರುವ ಪ್ರವಾದಿ ಮೊಹಮ್ಮದರ ವಿಚಾರಗಳನ್ನು ತಿರುವಿ ಹಾಕಲು ಈದ್ ಮಿಲಾದ್ ಒಂದು ಸುದಿನವಾಗಿ ಬಳಕೆಯಾಗುತ್ತದೆ.  ಇದು ಪ್ರವಾದಿಯವರ ಜನ್ಮದಿನದ ರೂಪದಲ್ಲಿ ಆಚರಿಸಲಾಗುತ್ತದೆ. ಅವರ ಜೀವನ ಮತ್ತು ಸಂದೇಶಗಳ ಬಗ್ಗೆ ಹೆಚ್ಚಿನ ಮಾಹಿತಿ ನೀಡುವ ಕಾರ್ಯಾಗಾರಗಳನ್ನು ಈ ದಿನ ಹಮ್ಮಿಕೊಳ್ಳಲಾಗುತ್ತಾರೆ. ಈ ಈದ್ ಮಿಲಾದ್ ಹಬ್ಬದ ಕುರಿತು ಮಾನ್ಯ ಪಿ.ಎಸ್.ಐ ಗಳಾದ ಮಾನ್ಯ ನಾಗರಾಜ ಕೊಟಗಿಯವರು ಸಮಾಜದಲ್ಲಿ ಸಹಬಾಳ್ವೆ, ಸಾಮರಸ್ಯ, ಸೌಹಾರ್ದತೆಗೆ ಪ್ರವಾದಿಯವರು ನೀಡಿದ ಸಂದೇಶ ಸಮಾಜದ ಯೋಚನೆಗಳಿಗೆ ಕಡಿವಾಣ ಹಾಕಿ ಸಮಾಜದಲ್ಲಿ ಶಾಂತಿ ನೆಮ್ಮದಿ ಮತ್ತು ಸೌಹಾರ್ದತೆಗೆ ಪ್ರತಿಯೊಬ್ಬರು ಬದ್ದರಾಗಿರುಬೇಕು ಜೊತೆಗೆ ಮುಸ್ಲಿಂ ಸಮಾಜದ ಬಾಂದವರಿಗೆಲ್ಲಾ ಈದ್ ಮಿಲಾದ್ ಹಬ್ಬದ ಶುಭಾಶಯಗಳು ತಿಳಿಸಿದರು. ಪಟ್ಟಣದ ಬೇರೋನಿ ಖಿಲಾ ಅಂಜುಮನ್ ಇಸ್ಲಾಮ್ ಪಂಚ್ ಕಮಿಟಿ ಯುವ ಬಳಗದ ವತಿಯಿಂದ ಸಿಂಧನೂರು ವೃತ್ತದಲ್ಲಿ ಮೀಲಾದುನ್ನಬಿ ಪ್ರಯುಕ್ತ ಹಾಲು ವಿತರಿಸುವ ಕಾರ್ಯಕ್ರಮವನ್ನು ಹಮ್ಮಿಕೊಂಡರು, ಜೊತೆಗೆ ಪಟ್ಟಣದ ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ಶ್ರೀ ಕನಕಧಾಸರ ವೃತ್ತ, ಶ್ರೀ ಮಹರ್ಷಿ ವಾಲ್ಮೀಕಿ ವೃತ್ತ, ಶ್ರೀ ನೂಲಿ ಚೆನ್ನಯ್ಯನ ವೃತ್ತ, ಹಾಗೂ ಶ್ರೀ ಭಗೀರಥ ವೃತ್ತ, ಮತ್ತು ಮಹತ್ಮಾ ಗಾಂಧಿಜಿ ವೃತ್ತ, ಹಾಗೂ ಡಾ//ಬಿ.ಆರ್.ಅಂಬೇಡ್ಕರ್ ವೃತ್ತ ಹಾಗೂ ವಿವಿದ ವೃತ್ತಗಳಿಗೆ   ಮೂರ್ತಿಗೆ ಮಾಲಾರ್ಪಣೆ ಮಾಡುವುದರ ಜೊತೆಗೆ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಾಲು, ಹಣ್ಣು ವಿತರಿಸುವ ಮೂಲಕ ಈದ್ ಮಿಲಾದ್ ಹಬ್ಬಕ್ಕೆ ಮೇರಗೂ ತಂದಿತು. ಮೂಲಕ ಈದ್ ಮಿಲಾದ್ ಹಬ್ಬದ ಪ್ರಯುಕ್ತ ಊರಿನ ತುಂಬಾ ಮೆರವಣಿಗೆ ಕಾರ್ಯಕ್ರಮವು ಜರುಗಿತು.ಈ ಸಂದರ್ಭದಲ್ಲಿ ತಾವರಗೇರಾ ಪಟ್ಟಣದ ಹಿರಿಯ ಮುಖಂಡರಾದ ವೀರಭದ್ರಪ್ಪ ನಾಲತ್ವಾಡ್ ಹಾಗೂ ಮುಸ್ಲಿಂ ಸಮಾಜದ ಮುಖಂಡರು ಮತ್ತು ಹೋರಾಟಗಾರರಾದ ರಾಜನಾಯಕ ಮತ್ತು ಊರಿನ ಹಿರಿಯ ಬುದ್ದಿ ಜೀವಿಗಳು ಹಾಗೂ ಹೋರಾಟಗಾರರಾದ ಆನಂದ್ ಬಂಡಾರಿಯವರು ಮತ್ತು ಪಟ್ಟಣದ ಮುಸ್ಲಿಂ ಸಮಾಜದ ಬಂದುಮಿತ್ರರು ಹಾಗೂ ಊರಿನ ಸರ್ವ ಧರ್ಮೀಯರು ಹಾಗೂ ಸಾರ್ವಜನಿಕರು ಪಾಲುಗೊಂಡು ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.

ವರದಿ -ಉಪಳೇಶ.ವಿ.ನಾರಿನಾಳ,  

Leave a Reply

Your email address will not be published. Required fields are marked *