ಮಳೆ ಕೊರತೆಯಿಂದ ರಾಜ್ಯದಲ್ಲಿ ಮುಂದಾಗುವ ಸಂಕಷ್ಟಗಳನ್ನು ಎದುರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯನವರು ತೆಗೆದುಕೊಂಡ ಮುಂಜಾಗ್ರತೆ ಕ್ರಮಗಳು, ಶ್ರಮಗಳು ಕುತೂಹಲಕಾರಿಯಾಗಿದೆ. ಕಾವೇರಿ ನೀರು ಹಂಚಿಕೆ ವಿಚಾರದಲ್ಲಿ ತಮಿಳುನಾಡು ತನ್ನ ಹಕ್ಕಿನ ಜೂನ್ ನಿಂದ ಸೆಪ್ಟೆಂಬರ್ ವರೆಗಿನ 123 ಟಿಎಂಸಿ ನೀರಿಗಾಗಿ ಪಟ್ಟು ಹಿಡಿದರೆ ದೇಶದ ಪ್ರಧಾನಿಯೂ ನಮ್ಮ ರಾಜ್ಯದ ಸಹಾಯಕ್ಕೆ ಬರುವುದಿಲ್ಲ ಎಂಬುದನ್ನು ಮನಗಂಡಿದ್ದ ಸಿದ್ದರಾಮಯ್ಯನವರು ಎಚ್ಚರಿಕೆಯ ಹೆಜ್ಜೆಯನ್ನಿಟ್ಟರು. ಅಂತಿಮವಾಗಿ ಸಿದ್ದರಾಮಯ್ಯನವರು ಅಂದುಕೊಂಡಂತೆ ಆಯ್ತು. ನರೇಂದ್ರ ಮೋದಿ ಅವರು ಕರ್ನಾಟಕದತ್ತ ಕಾವೇರಿ ವಿಚಾರವಾಗಿ ತಿರುಗಿಯೂ ನೋಡಲಿಲ್ಲ. ಹಗಲು ರಾತ್ರಿ ಲೆಕ್ಕಿಸದೆ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳಿಂದ, ನೀರಾವರಿ ತಜ್ಞರಿಂದ, ಕಾನೂನು ಪರಿಣಿತರಿಂದ ಕಾವೇರಿ ನದಿ ವಿಚಾರವಾಗಿ ಉಪಯುಕ್ತ ಸಲಹೆಗಳನ್ನು ಸ್ವೀಕರಿಸಿದರು. ಸ್ವತಃ ವಕೀಲರು ಮತ್ತು ಕಾನೂನು ತಜ್ಞರು ಆಗಿರುವ ಸಿದ್ದರಾಮಯ್ಯನವರು ರಾಜ್ಯವನ್ನು ಪ್ರತಿನಿಧಿಸುತ್ತಿರುವ ಜಲಸಂಪನ್ಮೂಲ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್ ಅವರನ್ನು ಮಧ್ಯರಾತ್ರಿಯ ವರೆಗೆ ಕೂರಿಸಿಕೊಂಡು ಕಾವೇರಿ ನೀರನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಯಾವೆಲ್ಲ ವಾದಗಳನ್ನು ಮುಂದಿಡಬೇಕು ಎಂಬುದನ್ನು ಮನವರಿಕೆ ಮಾಡಿಕೊಟ್ಟರು. ಸೆಪ್ಟೆಂಬರ್ 19 ಹಾಗೂ ಸೆಪ್ಟೆಂಬರ್ 26ರಂದು ಹಗಲು ಮಾತ್ರವಲ್ಲ, ಸರಿ ರಾತ್ರಿಯಿಡೀ ಚರ್ಚಿಸಿದ್ದಾರೆ. ಇವೆರಡು ದಿನಗಳಲ್ಲಿ ಸಿದ್ದರಾಮಯ್ಯನವರು ನಿದ್ರೆಯನ್ನೇ ಮಾಡಿಲ್ಲ. ಡ್ಯಾಮ್ ನಲ್ಲಿ ನೀರು ಕಡಿಮೆಯಿರುವುದನ್ನು ಪ್ರಾಧಿಕಾರಕ್ಕೆ ತೋರಿಸಿದರು. ರಾಜಧಾನಿ ಬೆಂಗಳೂರಿಗೆ ಅಗತ್ಯವಿರುವ ಕುಡಿಯು ನೀರಿನ ಪ್ರಮಾಣವನ್ನು ಒತ್ತಿ ಹೇಳಿದರು. ತಮಿಳರು ಸೇರಿದಂತೆ ಪರ ಭಾಷಿಗರು ಎಷ್ಟು ಸಂಖ್ಯೆಯಲ್ಲಿ ಬೆಂಗಳೂರಲ್ಲಿ ನೆಲೆಸಿದ್ದಾರೆ ಎಂಬುದನ್ನು ಮನವರಿಕೆ ಮಾಡಿಕೊಟ್ಟರು. ಮಂಡ್ಯ, ಮೈಸೂರು, ರಾಮನಗರ, ಹಾಸನ ಮತ್ತಿತರ ಜಿಲ್ಲೆಗಳ ರೈತರು ಕೃಷಿಗಾಗಿ ಎಷ್ಟರ ಮಟ್ಟಿಗೆ ಕಾವೇರಿ ನದಿ ಅವಲಂಬಿಸಿದ್ದಾರೆ ಎಂಬ ವಾಸ್ತವತೆಯನ್ನು ತಿಳಿಸಿದರು. ಹಾಗೆಯೇ ತಮಿಳುನಾಡಿನ ಕೃಷಿಕರು ನೀರನ್ನು ಹೇಗೆ ಪೋಲು ಮಾಡುತ್ತಿದ್ದಾರೆ ಎಂಬುದನ್ನು ಮನದಟ್ಟು ಮಾಡಿಸಿದರು. ನಮ್ಮ ರೈತರು ಮೂರು ಬೆಳೆಗೆ ಉಪಯೋಗಿಸುವ ನೀರನ್ನು ತಮಿಳುನಾಡು ರೈತರು ಒಂದೇ ಬೆಳೆಗೆ ಉಪಯೋಗಿಸುತ್ತಾರೆ ಎಂಬ ಕಟುಸತ್ಯವನ್ನು ತೋರಿಸಿಕೊಟ್ಟರು. ಪ್ರಾಧಿಕಾರಕ್ಕೆ ವಾಸ್ತವ ಸಂಗತಿಗಳ ಅರಿವಾಯ್ತು. ಪ್ರತಿದಿನ 12,000 ಕ್ಯೂಸೆಕ್ಸ್ ನೀರು ಹರಿಸಬೇಕು ಎಂಬ ತನ್ನದೇ ಆದೇಶವನ್ನು 5 ಸಾವಿರ ಕ್ಯೂಸೆಕ್ಸ್‌ಗೆ ಇಳಿಸಿತು. ಕೊನೆಗೆ 3 ಸಾವಿರ ಕ್ಯೂಸೆಕ್ಸ್‌ನಷ್ಟು ಹರಿಸಿ ಸಾಕು ಎಂದಿತು. ಇದೀಗ ಸಹಜ ಹರಿವಿನ ನೈಸರ್ಗಿಕ ನೀರಿನ ಪ್ರಮಾಣವೇ 2-3 ಸಾವಿರ ಕ್ಯೂಸೆಕ್ಸ್‌ನಷ್ಟಿದೆ. ಡ್ಯಾಂನ ಬಾಗಿಲು ತೆರೆಯದೆಯೇ, ಪ್ರಾಧಿಕಾರ ಮತ್ತು ಸುಪ್ರೀಂ ಕೋರ್ಟ್‌ನ ಕೆಂಗಣ್ಣಿಗೂ ಗುರಿಯಾಗದೆ ಕರ್ನಾಟಕದ ಹಿತ ಕಾಯುವಲ್ಲಿ ಸಿದ್ದರಾಮಯ್ಯ ಯಶಸ್ವಿಯಾಗಿದ್ದಾರೆ.
ನೆನಪಿರಲಿ, ಹಿಂದಿನ ಬಿಜೆಪಿ ಸರ್ಕಾರ ಮರುಮಾತನಾಡದೆ ಹೇಳಿದಷ್ಟು ನೀರನ್ನು ಹರಿಸಿತ್ತು. ಆದರೆ ಸಿದ್ದರಾಮಯ್ಯನವರ ಸರ್ಕಾರ ವಾಸ್ತವವನ್ನು ವಿವರಿಸಿ ಕಾವೇರಿ ನೀರನ್ನು ಉಳಿಸಿಕೊಂಡಿತು. ಹಾಗೆ ನೋಡಿದರೆ ಮೊದಲೇ ಹೇಳಿದಂತೆ ತಮಿಳುನಾಡಿಗೆ 123 ಟಿಎಂಸಿ ನೀರನ್ನು ಬಿಡಬೇಕಿತ್ತು. ಆದರೆ ಸಿದ್ದರಾಮಯ್ಯ ಸರ್ಕಾರ ಬಿಡುಗಡೆ ಮಾಡಿದ್ದು ಕೇವಲ 40 ಟಿಎಂಸಿ. ಯಾವುದಕ್ಕೂ ಕರ್ನಾಟಕದ ಜನತೆಯ ಹಿತಕ್ಕಾಗಿ ಮಾನ್ಯ ಸಿದ್ದರಾಮಯ್ಯನವರು ಶ್ರಮಿಸುತ್ತಿದ್ದದಾರೆ ತಾವರಗೇರಾ ನ್ಯೂಸ್ ಪತ್ರಿಕ ಬಳಗದವತಿಯಿಂದ ಶುಭವಾಗಲಿಯೆಂದು ಹಾರೈಸುತ್ತೆವೆ. ವರದಿ-ವ್ಯಾಟ್ಸಪ್ ಕೃಪೇ.