ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಹಾಗೂ ತಾವರಗೇರಾ ಹೋಬಳಿಯ ರೈತರು ಈ ಇಂಗಾರು ಬೆಳೆಗೆ ಪುಷ್ಯ ಮಳೆ)ಯಿಂದ ರೈತರು ತಾವರಗೇರಾ ಪಟ್ಟಣದ ರೈತ ಸಂಪರ್ಕ ಕೇಂದ್ರಕ್ಕೆ ಆಗಮಿಸುತ್ತಿದ್ದು. ರೈತರು ಮತ್ತು ದುಡಿಯುವ ವರ್ಗದ ಜನರು ಹಳ್ಳಿ/ಹಳ್ಳಿಗಳಿಂದ ಸಿಟಿಗಳಿಗೆ ದುಡಿಯಲು ಹೋಗಿದ್ದು, ಸದ್ಯ ಈ ತಮ್ಮ ಹಳ್ಳಿಗಳತ್ತ ಚಿತ್ತ ಮಾಡಿ ಬಂದಿರುವ ರೈತರು ಹಾಗೂ ದುಡಿಯುವ ವರ್ಗದ ಜನರು ತಮ್ಮ ತಮ್ಮ ಹೊಲ ಗದ್ದೆಗಳಲ್ಲಿ ಬಿತ್ತನೆಗೆ ಮುಂದಾಗಿದ್ದು ವಿಶೇಷವಾಗಿದೆ,,ಆದರೂ ಇದರ ಜೊತೆ ಜೊತೆಗೆ ಕೆಲವರಿಗೆ ತಕ್ಕ ಪಾಠ ಕಲಿಸಿರುವುದಂತ್ತು ಸತ್ಯ. ಏನೇ ಇರಲಿ ಒಟ್ಟಿನಲ್ಲಿ ಹಳ್ಳಿ ಜನರು ತಮ್ಮ ಕುಟುಂಬದ ಜೊತೆಗೆ ನೆಮ್ಮದಿಯ ಜೀವನ ಸಾಗಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಹಳ್ಳಿ ಜನರು ತಮ್ಮ ರೈತಾಪಿ ಕೆಲಸಕ್ಕೆ ಮರಳಿ ಸಾಗಿರುವುದು ಇದೊಂದು ಹೆಮ್ಮೆಯ ವಿಷಯವಾಗಿದೆ. ಸದ್ಯ ಮಳೆರಾಯನ ಕೃಪೆಯಿಂದ ಭೂಮಿ ತಾಯಿಯ ಒಡಲು ತುಂಬಿದೆ. ಹಾಗಾಗಿ ರೈತರು ಬಿತ್ತನೆ ಬಿಜಕ್ಕಾಗಿ ಹಾಗೂ ರಸಗೊಬ್ಬರ ಸಲುವಾಗಿ ತಾವರಗೇರಾ ಪಟ್ಟಣದಲ್ಲಿ ರೈತ ಸಂಪರ್ಕ ಕೇಂದ್ರದ ಮುಂದೆ ಸಾಲು ಸಾಲಾಗಿ ನಿಂತಿರುವ ದೃಶ್ಯ ಕಂಡು ಬಂತ್ತು, ತಾವರಗೇರಾ ರೈತ ಸಂಪರ್ಕ ಅಧಿಕಾರಿಗಳು ಹಾಗೂ ಸಿಬ್ಬಂದಿಗಳು ಹಾಗೂ ತಾವರಗೇರಾ ಪೋಲಿಸ್ ಠಾಣೆ ಇಲಾಖೆಯ ಸಿಬ್ಬಂದಿಗಳು ಈ ಗದ್ದಲದ ನಡುವೆ ಎಲ್ಲವನ್ನು ಸಂಬಳಸುವಲ್ಲಿ ಯಶಸ್ವಿಯಾದರು…
ವರದಿ – ಸೋಮನಾಥ ಹೆಚ್. ಎಮ್