ವಿಜಯನಗರ ಜಿಲ್ಲೆ ಕೂಡ್ಲಿಗಿ: ಭಾರತೀಯ ಕಮ್ಯೂನಿಸ್ಟ್ ಪಕ್ಷ(CPI), ತಾಲೂಕು ಸಮಿತಿ ನೇತೃತ್ವದಲ್ಲಿ ಕಮ್ಯೂನಿಸ್ಟ್ ಪಕ್ಷದ ಕಾರ್ಯಕರ್ತರು. ತಮ್ಮ ವಿವಿದ ಹಕ್ಕೊತ್ತಾಯಗಳನ್ನು ಒದಗಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ, ಪಟ್ಟಣದಲ್ಲಿ ಜಿಲ್ಲಾ ಮುಖಂಡ ಹೆಚ್. ವೀರಣ್ಣ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ಹಮ್ಮಿಕೊಂಡಿದ್ದರು. ಮಹಾತ್ಮ ಗಾಂಧಿಜೀ ಚಿತಾಭಸ್ಮ ಸ್ಮಾರಕದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ, ಪ್ರಮುಖ ರಸ್ತೆ ಹಾಗೂ ಬೀದಿಗಳಲ್ಲಿ ಸಂಚರಿಸಿ, ತಹಶಿಲ್ದಾರರ ಮೂಲಕ ಸರ್ಕಾರಕ್ಕೆ ತಮ್ಮ ಹಕ್ಕೊತ್ತಾಯಗಳಿರುವ ಪತ್ರವನ್ನು ನೀಡಿ ಒತ್ತಾಯಿಸಿದ್ದಾರೆ. ಮತ್ತು ಪ್ರತಿಭಟನೆ ಕಾರರು ತಮ್ಮ ಹಕ್ಕೊತ್ತಾಯ ಪತ್ರವನ್ನು, ಕ್ಷೇತ್ರದ ಶಾಸಕರಾದ ಡಾ”ಎನ್.ಟಿ.ಶ್ರೀನಿವಾಸ್ ರವರಿಗೆ ನೀಡಿದರು. CPIಮುಖಂಡ ಹೆಚ್.ವೀರಣ್ಣ ಪ್ರತಿಭಟನೆಯ ನೇತೃತ್ವ ವಹಿಸಿದ್ದರು, ಹೋರಾಟಗಾರರಾದ ಮರಬನಹಳ್ಳಿ ಕರಿಯಪ್ಪ, ಯು.ಪೆನ್ನಪ್ಪ, ಹನುಮಂತಪ್ಪ, ಪ್ರಕಾಶ್, ಪಾಲಮ್ಮ, ಮಹಾಂತಮ್ಮ, ಸುಮಾ, ಪದ್ಮ, ದ್ರಾಕ್ಷಾಯಿಣಿ, ಬಸಮ್ಮ, ಸುಜಾತ, ಉಷಾರಾಣಿ, ರೂಪ, ತಿಪ್ಪಮ್ಮ, ಬಾಬು, ಓಬಳೇಶ, ದೊಡ್ಡಪ್ಪ, ಕರಿಯಪ್ಪ, ಕೊಟ್ರೇಶ್, ತಿಪ್ಪೇಸ್ವಾಮಿ, ಮಲ್ಲಿಕಾರ್ಜುನ, ಮಂಜು, ಉಮೇಶ್, ಏಕಲವ್ಯ, ರಮೇಶ್ ಗೌಡ, ವಿಠಲ ಸೇರಿದಂತೆ ಮತ್ತಿತರರು ಇದ್ದರು. ನೂರಾರು ಪ್ರತಿಭಟನೆಕಾರರು ಭಾಗಿಯಾಗಿದ್ದರು, ಪಿಎಸೈ ಧನುಂಜಯಕುಮಾರ ನೇತೃತ್ವದಲ್ಲಿ. ಕೂಡ್ಲಿಗಿ ಪೊಲೀಸ್ ರು ಪ್ರತಿಭಟನೆ ಸಂದರ್ಭದಲ್ಲಿ ಹಾಜರಿದ್ದು, ಶಾಂತಿ ಸುವ್ಯಸ್ಥೆ ಕಾಪಾಡಿ ತಮ್ಮ ಕರ್ಥವ್ಯ ನಿರ್ವಹಿಸಿದರು.
✍️ ವಂದೇ ಮಾತರಂ ವಿ.ಜಿ.ವೃಷಭೇಂದ್ರ ಕೂಡ್ಲಿಗಿ