ಎಎಪಿವತಿಯಿಂದ ನವಲಿ ಗ್ರಾಮದಲ್ಲಿಂದು ಎಲ್ಲಾ ಸೇರೋಣ ಬನ್ನಿ ಮಾತಾಡೋಣ ಎಂಬ ಶೀರ್ಷಿಕೆ ಅಡಿ ಸಾರ್ವಜನಿಕರೊಂದಿಗೆ ಮುಕ್ತ ಸಂವಾದ ಕಾರ್ಯಕ್ರಮ.

Spread the love

 

ಶ್ರೀ ಕನಕಪ್ಪ ಮಳಗಾವಿ ಕೊಪ್ಪಳ ಜಿಲ್ಲಾ ಆಮ್ ಆದ್ಮಿ ರಾಷ್ಟ್ರೀಯ ಪಕ್ಷದ ಅಧ್ಯಕ್ಷರು ಆದ ನಾನು ತಮ್ಮಲ್ಲಿ ತಿಳಿಸುವುದೇನೆಂದರೆ, ನಮ್ಮ ಆಮ್ ಆದ್ಮಿ ಪಕ್ಷವು ಕೇವಲ ಒಂಬತ್ತು ವರ್ಷಗಳಲ್ಲಿ ರಾಷ್ಟ್ರೀಯ ಪಕ್ಷವಾಗಿ ಹೊರಹೊಮ್ಮಿ ಇರುವುದು ತಮಗೆಲ್ಲ ತಿಳಿದಿರುವ ವಿಷಯ, ಆಮ್ ಆದ್ಮಿ ಪಕ್ಷದ ರಾಜ್ಯಾಧ್ಯಕ್ಷರು ಹಾಗೂ ಕರ್ನಾಟಕ ಕಂಡ ಮೇರು ಕಲಾವಿದ, ರಾಜ್ಯದ ಖಾಯಂ ಮುಖ್ಯಮಂತ್ರಿ ಗಳಂದೇ ಹೆಸರಾದ ಡಾಕ್ಟರ್ : ಶ್ರೀ. ಮುಖ್ಯಮಂತ್ರಿ ಚಂದ್ರು ರವರ ಅಧ್ಯಕ್ಷತೆಯಲ್ಲಿ, ಹಾಗೂ ರಾಜ್ಯ ಸಂಘಟನಾ ಕಾರ್ಯದರ್ಶಿಗಳು ಉತ್ತರ ಕರ್ನಾಟಕ ವಿಭಾಗದ ಉಸ್ತುವಾರಿಗಳು ಆದ ಶ್ರೀ ಅರ್ಜುನ್ ಹಲಗಿ ಗೌಡರ, ರಾಜ್ಯ ಉಪಾಧ್ಯಕ್ಷರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿಗಳಾದ ಶ್ರೀ ರುದ್ರಯ್ಯ ನವಲಿ ಹಿರೇಮಠ ಮತ್ತು ರಾಜ್ಯ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಕುಶಾಲ ಸ್ವಾಮಿ, ಇವರುಗಳ ಉಪಸ್ಥಿತಿಯಲ್ಲಿ ದಿನಾಂಕ 12.10.2023 ಶುಕ್ರವಾರದಂದು ಕೊಪ್ಪಳಗೆ ಆಗಮಿಸಿ ಎಲ್ಲಾ ಸೇರೋಣ ಬನ್ನಿ ಮಾತಾಡೋಣ ಎಂಬ ಶೀರ್ಷಿಕೆ ಅಡಿ ಸಾರ್ವಜನಿಕರೊಂದಿಗೆ ಮುಕ್ತ ಸಂವಾದ ಕಾರ್ಯಕ್ರಮವನ್ನು ಸಂಜೆ 4:30ಕ್ಕೆ ಕೊಪ್ಪಳ ಜಿಲ್ಲೆಯ ಕನಕಗಿರಿ ತಾಲೂಕಿನ ನವಲಿ ಗ್ರಾಮದ ನವಲಿ ಗ್ರಾಮದಲ್ಲಿ ವೀರಭದ್ರೇಶ್ವರ ರಂಗಮಂದಿರದಲ್ಲಿ ಸಾರ್ವಜನಿಕ ಸಂಪರ್ಕ ಸಭೆಯನ್ನು ನಮ್ಮ ಕೊಪ್ಪಳ ಜಿಲ್ಲಾ ಆಮ್ ಆದ್ಮಿ ಪಕ್ಷದ ಸಮಿತಿಯ ವತಿಯಿಂದ ಏರ್ಪಡಿಸಲಾಗಿದೆ, ಆದ್ದರಿಂದ ಜಿಲ್ಲೆಯ ಆಮ್ ಆದ್ಮಿ ಪಕ್ಷದ ಎಲ್ಲಾ ಆಸಕ್ತ ಪ್ರೀತಿಯ  ಕಾರ್ಯಕರ್ತರುಗಳು ಈ ಸಭೆಗೆ ಆಗಮಿಸಿ ಸಭೆಗಳನ್ನು ಯಶಸ್ವಿಗೊಳಿಸಬೇಕಾಗಿ ವಿನಂತಿ.

ಅದೇ ದಿನದಂದು ಮಧ್ಯಾಹ್ನ ಕೊಪ್ಪಳ ಜಿಲ್ಲಾ ಸಮಿತಿಯ ಹಾಗೂ ವಿವಿಧ ತಾಲೂಕು ಘಟಕಗಳ ಮತ್ತು ಮುಂಚೂಣಿ ಘಟಕಗಳ ಪದಾಧಿಕಾರಿಗಳನ್ನು ಸಹ ನೇಮಿಸಲು ತೀರ್ಮಾನಿಸಲಾಗಿದೆ. ಆದುದರಿಂದ ಭ್ರಷ್ಟಾಚಾರ ರಹಿತ ಆಡಳಿತ ಬಯಸುವವರು ರಾಜಕಾರಣದಲ್ಲಿ ತಮ್ಮದೇ ಆದ ಸೇವೆಯನ್ನು ಮಾಡಬಯಸುವವರು ನಮ್ಮೊಂದಿಗೆ ಕೈಜೋಡಿಸಿ ಉತ್ತಮ ಭ್ರಷ್ಟಾಚಾರ ರಹಿತ ಸಮಾಜವನ್ನು ನಿರ್ಮಿಸುವುದರಲ್ಲಿ ಮುಂದೆ ಬರುವವರಿಗೆ ನಮ್ಮ ಪಕ್ಷದಲ್ಲಿ ಮುಕ್ತ ಅವಕಾಶವಿದೆ ಆದುದರಿಂದ ದಯಮಾಡಿ ಕೊಪ್ಪಳ ಜಿಲ್ಲಾ ಸಮಿತಿ ಹಾಗೂ ವಿವಿಧ ಮುಂಚೂಣಿ ಘಟಕಗಳು ಹಾಗೂ ವಿವಿಧ ತಾಲೂಕಿನ ಪದಾಧಿಕಾರಿಗಳಾಗಿ ತಿಳಿಸಲು ಮನವಿ. ಈ ವಿಷಯವನ್ನು ತಮ್ಮ ಪತ್ರಿಕೆಗಳಲ್ಲಿ ಪ್ರಕಟಿಸಿ ಪ್ರಚಾರಪಡಿಸಿ ಅನುಕೂಲ ಮಾಡಿಕೊಡಬೇಕಾಗಿ ತಮ್ಮಲ್ಲಿ ಕಳಕಳಿಯ ವಿನಂತಿ. ಕನಕಪ್ಪ ಮಾಳಗಾವಿ ಜಿಲ್ಲಾಧ್ಯಕ್ಷರು ಆಮ್ ಆದ್ಮಿ ಪಕ್ಷ ಕೊಪ್ಪಳ ಜಿಲ್ಲಾ ಸಮಿತಿ. ಮೊಬೈಲ್ ಸಂಖ್ಯೆ 9901673712.

ವರದಿ-ಸಂಪಾದಕೀಯಾ

Leave a Reply

Your email address will not be published. Required fields are marked *