*“ಸೈಕಲ್ ಸವಾರಿ ” ಚಲನಚಿತ್ರದ ಹಾಡು ಬಿಡುಗಡೆ*
ಬೆಂಗಳೂರ : ಕಲಾರಂಗ ಫಿಲ್ಮ್ ಸ್ಟುಡಿಯೋ ಮತ್ತು ಪ್ರೊಡಕ್ಷನ್ ಬ್ಯಾನರಡಿಯಲ್ಲಿ ನಿರ್ಮಾಣವಾಗಿ ಸೆನ್ಸಾರ್ ಮಂಡಳಿಯಿಂದ ಯು/ಎ ಸರ್ಟಿಫಿಕೇಟ್ ಪಡೆದಿರುವ ‘ಸೈಕಲ್ ಸವಾರಿ’ ಕನ್ನಡ ಚಲನಚಿತ್ರದ ಹಾಡು ಬಿಡುಗಡೆ ಸಮಾರಂಭ ಬೆಂಗಳೂರಿನಲ್ಲಿ ಜರುಗಿತು.‘ಮರೆತು ಹೋಗಲು ಹೇಳು ಕಾರಣಾ’ಎಂಬ ಹಾಡಿನ ಬಿಡುಗಡೆ ಸಮಾರಂಭದಲ್ಲಿ ಚಿತ್ರತಂಡದ ಪ್ರಮುಖರು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ನಿರ್ದೇಶಕ ದೇವು ಅಂಬಿಗ ಅವರು ನವ್ಹೆಂಬರ್ ತಿಂಗಳು ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ತೆರೆಗೆ ಬರುತ್ತಿದೆ. ಐದು ಹಾಡುಗಳಿದ್ದು ಎಲ್ಲವೂ ಚೆನ್ನಾಗಿ ಮೂಡಿಬಂದಿವೆ. ಕಾಮಿಡಿ, ಸಸ್ಪೆನ್ಸ್ , ಥ್ರಿಲ್ಲರ್, ಆಕ್ಷನ್, ಪ್ರೇಮಕಥಾ ವಸ್ತು ಹೊಂದಿರುವ ಈ ಚಿತ್ರದಲ್ಲಿ ಬಸ್ಯಾ ಮತ್ತು ಮಧು ಪ್ರೀತಿಯ ಕಥೆಯ ಅಂತ್ಯ ದುರಂತವೋ ಸುಖಾಂತವೋ ಎಂಬುದನ್ನು ಪ್ರೇಕ್ಷಕರು ಚಿತ್ರಮಂದಿರಕ್ಕೆ ಬಂದು ತಿಳಿದುಕೊಳ್ಳಬೇಕು. ಹಾಗೇ ನಮ್ಮ ತಂಡವನ್ನು ಪ್ರೋತ್ಸಾಹಿಸಬೇಕು ಎಂದರು. ಈ ಚಿತ್ರದಲ್ಲಿ ನಾಯಕ ನಟರಾಗಿ ದೇವು ಅಂಬಿಗ ನಟಿಸುವದರೊಂದಿಗೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ಜೊತೆಗೆ ನಿರ್ದೇಶನ ಹೊಣೆ ಹೊತ್ತಿದ್ದಾರೆ. ನಾಯಕಿಯಾಗಿ ದೀಕ್ಷಾ ಭೀಸೆ, ಖಳನಾಯಕ ಪಾತ್ರದಲ್ಲಿ ಶಿವಾಜಿ ಮೆಟಗಾರ, ಭಾಗ್ಯದೊರೆ ಮೇಡಂ, ಲೋಕೇಶ, ಕಾವೇರಿ ಪಾಟೀಲ, ಆನಂದ ಕಾಂಬ್ಳೆ, ಅಶೋಕ ಭಜಂತ್ರಿ, ಕಲ್ಮೇಶ ಮತ್ತು ತಂಡ, ಕಲಾವಿದರಾದ ನಾಗರಾಜ ದೊಡಮನಿ, ರಾಮಚಂದ್ರ ಕಾಂಬ್ಳೆ, ಶಿವಲೀಲಾ ,ನ್ಯಾಸಾ, ಕಾವ್ಯ, ರಂಜು, ಗೀತ ಮಾಲೂರ , ಗೌಡಪ್ಪಗೌಡ ಹುಲಿಕಲ್, ಜಾನವಿ, ಜಯಮ್ಮಾ, ಮೋಹನ, ಲಕ್ಷ್ಮಣ, ಹಬೀಬ, ದೇವುಕುಮಾರ ಸಾತಲಗಾಂವ್ ಸಚೀನ್, ಮಾಂತು, ಶಿವಾನಂದ ಕಂಕಣವಾಡಿ, ಆರ್.ಜಿ.ಮೇಡೆಗಾರ್ ಮುಂತಾದವರು ಅಬಿನಯಿಸಿದ್ದು , ಸಂಗೀತ-ಛಾಯಾಗ್ರಹಣ-ಕಲರ್ ಡಿಐ ರೋಹನ್ ದೇಸಾಯಿ, ಗೀತ ಸಂಯೋಜನೆ ವಿನೋದ ಹಿರೇಮಠ,ಮೇಕಪ್ ಪುಷ್ಪಾ ಗಂಗಣ್ಣವರ, ಶೃತಿ ಚೌದರಿ, ಸುಮಂತ್, ಕಲಾನಿರ್ದೇಶನ ಮಾಂತು ದಳವಾಯಿ, ಭೀಮರಾಯ, ಸಾಹಸ ದುರ್ಗೇಶ, ಕಾರಜೋಳ, ಸಹಾಯಕ ನಿರ್ದೇಶನ ಮಾಂತು ದಳವಾಯಿ,ತಿಮ್ಮಪ್ಪ ಗಂಜೊಳ್ಳಿ, ಸಚಿನ್ ಹಿಟ್ನಳ್ಳಿ, ಸಹ ನಿರ್ದೇಶನ ವಿನೋದ ರಾಠೋಡ, ಪಿ.ಆರ್.ಓ ನಾಗೇಂದ್ರ, ಡಾ.ಪ್ರಭು ಗಂಜಿಹಾಳ, ಡಾ.ವೀರೇಶ ಹಂಡಗಿ, ಪ್ರಚಾರ ಕಲೆ ವಿಶ್ವಪ್ರಕಾಶ ಮಾಳಗೊಂಡ ಅವರದಿದೆ. ಈ ಚಿತ್ರದ ನಿರ್ಮಾಪಕರು ಸುರೇಶ ಶಿವೂರ ಸಹ ನಿರ್ಮಾಪಕರು ಶ್ರೀ ಲೋಕೇಶ ಸೌದಿ ಆಗಿದ್ದಾರೆ.
ವರದಿ: ಡಾಪ್ರಭು ಗಂಜಿಹಾಳ