ಶಿವಮೊಗ್ಗ: ದಿವ್ಯಾಂಗರು ಸಮಾಜಕ್ಕೆ ಶಾಪವಲ್ಲ ಪ್ರಕೃತಿಯ ವೈವಿಧ್ಯತೆಯ ಒಂದು ಭಾಗ ಎಂಬುವುದು ಸಕ್ಷಮ ಸಂಸ್ಥೆಯ ನಂಬಿಕೆ ಎಂದು ಸಕ್ಷಮ ಕರ್ನಾಟಕ ಪ್ರಾಂತ ಕಾರ್ಯದರ್ಶಿ ಹರಿಕೃಷ್ಣ ರೈ ಹೇಳಿದ್ದಾರೆ. ಅವರು ಇಂದು ಹೊಸಮನೆಯ 4ನೇ ತಿರುವಿನ ಕೇಶವ ಚಿಕಿತ್ಸಾಲಯದ ಜಿಲ್ಲಾ ಘಟಕದ ಕಾರ್ಯಾಲಯದಲ್ಲಿ ಸಕ್ಷಮ ಸಂಸ್ಥೆಯ ಬದಲಾದ ಕಾರ್ಯಾಲಯದ ಉದ್ಗಾಟನೆ.20 ಅರ್ಹ ವಿಶೇಷಚೇತನರಿಗೆ ಗಾಲಿಕುರ್ಚಿ ವಿತರಣೆ,9 ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿತರಣೆ ಹಾಗೂ ಅಕ್ಟೋಬರ್-2023 ರಲ್ಲಿ ಚೀನಾದಲ್ಲಿ ನಡೆದ ಪ್ಯಾರಾ ಓಲಂಪಿಕ್ಸ್ ನಲ್ಲಿ ಭಾಗವಹಿಸಿದ್ದ ಶಿವಮೊಗ್ಗದ ವಿಶೇಷಚೇತನ ಕ್ರೀಡಾಪಟುಗಳಾದ ಕು||ವೃತ್ತಿಜೈನ್ ಹಾಗೂ ಕಿಶನ್ ಗಂಗೊಳ್ಳಿ ಯವರಿಗೆ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ದಿಕ್ಸೂಚಿ ಭಾಷಣ ನೀಡಿದರು. ಸಕ್ಷಮ ಸಂಸ್ಥೆ ದೇಶದಲ್ಲಿ 44 ಪ್ರಾಂತಗಳಲ್ಲಿ ದಿವ್ಯಾಂಗ ಚೇತನರಿಗೆ ವಿಶೇಷ ಸೇವೆ ಸಲ್ಲಿಸುತ್ತಾ ಬಂದಿದೆ. ಆರೋಗ್ಯ ಕ್ಷೇತ್ರ,ವಿದ್ಯಾಕ್ಷೇತ್ರ ಹಾಗೂ ಅವರಿಗೆ ಆರ್ಥಿಕ ಸ್ವಾವಲಂಬನೆಯ ಸೇವೆಯನ್ನು ಸಕ್ಷಮ ನೀಡುತ್ತಾ ಬಂದಿದೆ. ಇದು ನಮ್ಮ ಸಂಸ್ಥೆಯ ಸೌಭಾಗ್ಯವು ಹೌದು. ದೇವರು ನೀಡಿದ ಅವಕಾಶ ಎಂದು ನಾವು ಭಾವಿಸುತ್ತೇವೆ.ದಿವ್ಯಾಂಗರಲ್ಲಿ ಕೂಡ ಅತ್ಯಂತ ಪ್ರತಿಭಾನ್ವಿತರಿದ್ದಾರೆ. ಅವರ ಪ್ರತಿಭೆ ಬೆಳಕಿಗೆ ತರಲು ಕೂಡ ಸಕ್ಷಮ ಸಂಸ್ಥೆ ಎಲ್ಲಾ ನೆರವು ನೀಡುತ್ತದೆ ಎಂದರು. ಮುಖ್ಯ ಅತಿಥಿಗಳಾಗಿ ಶಿವಮೊಗ್ಗ ಚಿನ್ನ ಬೆಳ್ಳಿ ಮತ್ತು ಗಿರವಿ ವರ್ತಕರ ಸಂಘದ ವಿನೋದ್ ಕುಮಾರ್ ಜೈನ್ ಪಾಲ್ಗೊಂಡು ಮಾತನಾಡಿದರು. ನೂತನ ಕಾರ್ಯಾಲಯದ ಉದ್ಗಾಟನೆಯನ್ನು ವಿಕಾಸ ಟ್ರಸ್ಟ್ ನ ಕಾರ್ಯದರ್ಶಿ ಸಿ.ಸಚ್ಚಿದಾನಂದ ಉದ್ಗಾಟಿಸಿದರು. ಸಕ್ಷಮದ ಜಿಲ್ಲಾಧ್ಯಕ್ಷರು ಡಾ||ಪ್ರಶಾಂತ್ ಇಸ್ಲೂರು ವಹಿಸಿದ್ದರು. ಕಾರ್ಯದರ್ಶಿ ಕುಮಾರಶಾಸ್ತ್ರಿ ಹಾಗೂ ಸಕ್ಷಮ ಸಂಸ್ಥೆಯ ಪದಾಧಿಕಾರಿಗಳು ಉಪಸ್ಥಿತರಿದ್ದರು.
ವರದಿ-ಉಪಳೇಶ ವಿ.ನಾರಿನಾಳ