ಸಂಪಾದಕೀಯ :- ದಿನಕ್ಕೊಂದು ವಿಶೇಷ ಸೂಚನೆ ಯುವಕ/ಯುವತಿಯರೆ ಮೊಬೈಲ್ ಬಿಟ್ಟು ಬನ್ನಿ ಹೊರಗೆ?
1893ರಲ್ಲಿ ಚಿಕಾಗೋದಲ್ಲಿ ನಡೆದ ವರ್ಲ್ಡ್ಸ್ ಪಾರ್ಲಿಮೆಂಟ್ ಆಫ್ ರಿಲಿಜನ್ಸ್‌ನಲ್ಲಿ ಇವರು ಮಾಡಿದ್ದ ಭಾಷಣ ಇಂದಿಗೂ ಪ್ರಸಿದ್ಧ. “ಏಳಿ ಎದ್ದೇಳಿ ಯುವಕರೇ ಗುರಿ ಮುಟ್ಟುವ ತನಕ ನಿಲ್ಲದಿರಿ” ಎಂದು ಯುವಕರಿಗೆ ಪ್ರೇರಕ ಶಕ್ತಿಯಾದ ವೀರ ಸನ್ಯಾಸಿ, ಮಹಾನ್ ಚೇತನ ಶ್ರೀ ಸ್ವಾಮಿ ವಿವೇಕಾನಂದರ ಹೇಳಿದ ಮಾತು ಮರೇಚಿಕೆ ಆಯಿತೆ? ಜಗತ್ತಿನಲ್ಲಿ ಏನೆಲ್ಲಾ ನಡಿಯುತ್ತಿದೆ, ಆದರೆ ಯುವಕ/ಯುವತಿಯರು ಮಾತ್ರ ಮೊಬೈಲ್ ನಲ್ಲಿ ತಲ್ಲಿನರಾಗಿದ್ದಾರೆ. ಆದರೆ ಜಗತ್ತು ಇಂದು ಎತ್ತ ಸಾಗುತ್ತಿದೆ ಎನ್ನುವ ಕಿಂಚ್ಚಿತ್ತು ಪರೀಜ್ಞಾನವು ಸಹ ಇಲ್ಲದಾಗಿದೆ, ಇಂದು ರಾಜಕೀಯ ವ್ಯಕ್ತಿಗಳು ರಾಜ್ಯವನ್ನೆ ಕೋಳ್ಳೆ ಒಡಿಯುತ್ತಾದ್ದಾರೆ, ಭ್ರಷ್ಠರು ಹಗಲು/ರಾತ್ರಿ ಎನ್ನದೆ ಲೂಟಿ ಮಾಡುತ್ತಿದ್ದಾರೆ, ಪ್ರತಿಯೊಂದು ಇಲಾಖೆಯಲ್ಲಿ ಲಂಚವಿಲ್ಲದೆ ಯಾವುದೇ ಕೆಲಸ/ಕಾರ್ಯಗಳು ಸಾಗದು ಎಂದು ಅಧಿಕಾರಿಗಳು ಮೇರೆಯುತ್ತಿದ್ದಾರೆ, ಆದರೆ ಪ್ರಜ್ಞಾವಂತ ಯುವಕ/ಯುವತಿಯರು ಮಾತ್ರ ಮೊಬೈಲ್ ಹಿಡಿದುಕೊಂಡು ರಾಜ್ಯವನ್ನೆ ಗೆಲ್ಲುವ ಹಂತದಲ್ಲಿ ಪ್ರಜ್ಞಾ ಹಿನರಾಗಿ ಮೌನರಾಗಿದ್ದಾರೆ, ಒಟ್ಟಿನಲ್ಲಿ ಜಾಣ ರಾಜಕಾರಣದಿಂದ ಪ್ರತಿಯೊಬ್ಬ ಯುವಕ/ಯುವತಿಯರ ಕೈಯಲ್ಲಿ ಮೊಬೈಲ್ ಕೊಟ್ಟು, ಮೊಬೈಲ್ ಜೊತೆಗೆ ಪ್ರೀ ಡಾಟಾ ಇಟ್ಟು ಯುವಕ/ಯುವತಿಯರ ದಿಕ್ಕನ್ನು ಬದಲಿಸುವಲ್ಲಿ ಜಾಣ ರಾಜಕಾರಣದ ತಂತ್ರವಿದು, ಏಳಿ-ಎದ್ದೇಳಿ ಗುರಿ ಮುಟ್ಟುವವರೆಗೂ ಹೋರಾಡೋಣ ನವ ಭಾರತ ನಿರ್ಮಾಣಕ್ಕಾಗಿ ಕೈ ಜೋಡಿಸೋಣ. ಯುವಕ ಯುವತಿಯರೆ ಮೊಬೈಲ್ ಬಿಟ್ಟು ಬನ್ನಿ ಹೊರಗೆ ಜಗತ್ತು ಬಹು ವಿಶಾಲವಾಗಿದೆ, ಮೊಬೈಲೇ ಪ್ರಪಂಚವಲ್ಲ, ಮೊಬೈಲ್ ಕೇವಲ ಒಂದು ಜ್ಞಾನ್ ಮಾತ್ರ, ಅದನ್ನು ಅತೀಯಾಗಿ ಬಳಕೆ ಮಾಡಿದರೆ ಅಮೃತ ಕೂಡ ವೀಷವಾಗುತ್ತದೆ ನೆನಪಿರಲಿ, ಮತ್ತೆ ಬೇಟೆಯಾಗೋಣ ಮುಂದಿನ ವಿಶೇಷ ಸಂಚಿಕೆಯಲ್ಲಿ, ಜೈಹಿಂದ್,,ಜೈ ಕರ್ನಾಟಕ, ಜೈ ಭಾರತಾಂಭೆ,,
ವರದಿ-ಸಂಪಾದಕೀಯಾ