ನಮ್ಮ ಕುಟುಂಬದಲ್ಲಿ ಹಿರಿಯ ಸದಸ್ಯರಾದ ಹೋರಾಟದ ಜೀವಿ, ಕ್ರಾಂತಿಕಾರಿ ಆನಂದ ಭಂಡಾರಿ ಇನ್ನಿಲ್ಲ.
ನಮ್ಮ ತಾವರಗೇರಾ ಪಟ್ಟಣದ ಹಿರಿಯ ಹೋರಾಟಗಾರು ಹಾಗೂ ಅವರು ಅನ್ಯಾಯವನ್ನು ಕಂಡಾಗ ಎಚ್ಚರಿಸುತ್ತಿದ್ದರು ಮತ್ತು ಸರಿಯಾದ ಕಾರಣಗಳನ್ನು ಬೆಂಬಲಿಸಿದರು. ಅವರು ತಮ್ಮ ಸತ್ಯ ಮತ್ತು ಪ್ರಾಮಾಣಿಕತೆಗಾಗಿ ಲಕ್ಷಾಂತರ ಜನರಿಗೆ ಸ್ಫೂರ್ತಿಯಾಗಿದ್ದರು. ತಪ್ಪಿನ ವಿರುದ್ಧ ಪ್ರತಿಭಟಿಸಲು ಬೀದಿಗಿಳಿಯಲು ಅವರು ಎಂದಿಗೂ ಹಿಂಜರಿಯಲಿಲ್ಲ. “ಅವರು ನಮ್ಮ ಕುಟುಂಬದ ಸದಸ್ಯರಲ್ಲಿ ಒಬ್ಬರಾಗಿದ್ದರು. ಅವರ ಸಾವು ನಮ್ಮನ್ನು ಕದಡಿದೆ. ಅವರ ಎಲ್ಲಾ ಕುಟುಂಬ ಸದಸ್ಯರು, ಸ್ನೇಹಿತರು ಮತ್ತು ಹಿತೈಷಿಗಳಿಗೆ ನಮ್ಮ ಸಂತಾಪಗಳು. ”ದಿ: 12/11/2023 ರ ರಾತ್ರಿ ಸಮಯ ಸುಮಾರು 10.15PM ನಿಮಿಷಕ್ಕೆ ಅವಿಭಜಿತರಾಗಿದ್ದಾರೆ. ರಾಯಚೂರು ಮತ್ತು ಕೊಪ್ಪಳ ಜಿಲ್ಲೆ ಮತ್ತು ರಾಜ್ಯ ಮಟ್ಟದ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರು, ಸಂಘಟನಕಾರರು, ಉತ್ತಮ ವಾಗ್ಮಿಯೂ ಅನಾರೋಗ್ಯದಿಂದ ಬೆಂಗಳೂರಿನ ಜಯದೇವ ಹೃದ್ರೋಗ ಆಸ್ಪತ್ರೆಯಲ್ಲಿ ನಿನ್ನೆ ರಾತ್ರಿ ನಿಧನರಾಗಿದ್ದಾರೆಂದು ತಿಳಿಸಲು ವಿಷಾದಿಸುತ್ತೇನೆ. ದಿ: 13/11/2023 ರಂದು ತಾವರಗೇರಾ ಗ್ರಾಮದಲ್ಲಿ ಸಾಯಂಕಾಲ 3.00PM ಶ್ರೀಯುತರ ಅಂತ್ಯ ಸಂಸ್ಕಾರ ನೆರೆವೇರಿಸಲಾಗುವುದು. ಎಂದು ಕುಟುಂಬದ ಸದಸ್ಯರು ತಿಳಿಸಲಾಯಿತು, ಇವರ ಹೋರಾಟದ ಹಾಧಿ ನಮ್ಗೆ ಇಂಧೀಗೂ ಸ್ಫೂರ್ತಿ, ಇವರ ಹೆಸರು ಹೇಳಿಕೊಂಡು ಬದುಕಿರುವವರೆ ಜಾಸ್ತಿ, ಇಂತಹ ವ್ಯಕ್ತಿ ಕೊಟ್ಟಿಗೊಬ್ಬರು ಅಂದರೂ ತಪ್ಪಾಗಲಾರದು. ಯಾವುದೇ ಊರಲ್ಲಿ ಹೋರಾಟ ಹಮ್ಮಿಕೊಂಡಿದ್ದಾರೆ ಅಂದ್ರೆ ಸಾಕು ಮುಂಚ್ಚಣಿಯಾಗಿ ಅಲ್ಲಿರುವವರು. ವಿಧಿಯಾಟದ ಮುಂದೆ ನಾವು/ನೀವು ಶೂನ್ಯ,,,, ಆದರೆ ಇಂದು ಇವರ ದೇಹ ಇರಲಿಕ್ಕಿಲ್ಲ ಇವರ ವಿಚಾರಧಾರೆಗಳು ಇಂದಿಗೂ ಜೀವಂತ,, ಶ್ರೀಯುತರಿಗೆ ಬುದ್ದ,ಬಸವ, ಅಂಬೇಡ್ಕರರವರ ಸದ್ಗತಿ ದಯಪಾಲಿಸಲಿ ಎಂದು ತಾವರಗೇರಾ ನ್ಯೂಸ್ ಪತ್ರಿಕಾ ಬಳಗ ಮತ್ತು ಬುದ್ದಂ,ಶರಣಂ,ಗಚ್ಛಾಮಿ ಸೇವಾ ಟ್ರಸ್ಟ್ (ರಿ) ತಾವರಗೇರಾವತಿಯಿಂದ ಅಂತಿಮ ನಮನಗಳು.
ವರದಿ-ಉಪಳೇಶ ವಿ.ನಾರಿನಾಳ