ಕ್ರಾತಿಕಾರಿ, ಪ್ರಗತಿಪರ ಹಾಗೂ ಹುಟ್ಟು ಹೋರಾಟಗಾರ ಆನಂದ ಭಂಡಾರಿ ಅಮರ್ ಹೈ,ಅಮರ್ ಹೈ, ದಮನಿತರ ಬಾಳಿಗೆ ಬೆಳಕಾದವರು,,,,,

Spread the love

ತಾವರಗೇರಾ ಪಟ್ಟಣದ ಆನಂದ ಭಂಡಾರಿಯವರು ಹುಟ್ಟು ಹೋರಾಟಗಾರರು, ದೀನ ದಮನಿತರ ಬಾಳಿಗೆ  ಧ್ವನಿಯಾಗಿ ಕೆಚ್ಚದೆಯ ಹಿರಿಯ ಹೋರಾಟಗಾರು, ರಾಯಚೂರು ಮತ್ತು ಕೊಪ್ಪಳ ಜಿಲ್ಲೆ ಮತ್ತು ರಾಜ್ಯ ಮಟ್ಟದ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಂಚಾಲಕರು, ಸಂಘಟನಕಾರರು, ಉತ್ತಮ ವಾಗ್ಮಿಯೂ ಅವರಾಗಿದ್ದರು. ಯಾವುದೇ ಗ್ರಾಮದಲ್ಲಾಗಲಿ ಅನ್ಯಾಯವಾಗಿದೆ ಅಂತ ಸುದ್ದಿ ಬಂದ್ರೆ ಸಾಕು, ಅವರು ಆ ಕ್ಷಣ ಗ್ರಾಮಕ್ಕೆ ತೆರಳಿ. ಅನ್ಯಾಯದ ವಿರುದ್ದ ಧ್ವನಿ ಇರುತ್ತಿತ್ತು. ನಾನು ಸುಮಾರು 30 ವರ್ಷಗಳಿಂದ ನೋಡುತ್ತ ಬಂದವನು ಇವರ ಹೋರಾಟದ ಹಾಧಿಯಲ್ಲಿ ಎಲ್ಲಿಯು ಬಿಡಿಗಾಸಿಗೆ ಕೈ ಚಾಚಲಿಲ್ಲ,  ಯಾವೂಬ್ಬ ಅಧಿಕಾರಿಗಳ ಜೊತೆಗೆ ಭ್ರಷ್ಠಚಾರದಲ್ಲಿ ಒಂದಾಣಿಕೆಯಾಗಲಿಲ್ಲ, ಭ್ರಷ್ಠಚಾರದ ವಿರುದ್ದ ಹಾಗೂ ದಿನ ದಲಿತರ ಅನ್ಯಾಯದ ವಿರುದ್ದ ಧ್ವಿನಿಯಾಗಿದ್ದರು, ಇವರ ಹೋರಾಟ ಬರಿ ರಾಯಚೂರು ಜಿಲ್ಲೆ ಮತ್ತು ಕೊಪ್ಪಳ ಜಿಲ್ಲೆಗೆ ಸಿಮೀತವಾಗಿರಲ್ಲಿಲ್ಲ. ರಾಜ್ಯದದ್ಯಾಂತ ಹರಡಿತು, ಕಾರಣ ಇವರ ನಿಷ್ಠೇ, ಇವರ ಪ್ರಮಾಣಿ ಕತೆ ಹಾಗೂ ನೇರ ನುಡಿಯ ಮಾತುಗಾರ, ಜೊತೆಗೆ ಯುವಕರಲ್ಲಿ ಹೋರಾಟದ ಕಿಚ್ಚಿನ ಬಗ್ಗೆ ಇರುವ ಕಾಳಜಿ ಅಮೂಲ್ಯವಾದದ್ದು, ಪ್ರತಿಯೊಬ್ಬರು ಅನ್ಯಾಯದ ವಿರುದ್ದ ಸಿಡಿದೇಳಲೆ ಬೇಕು, ಅನ್ಯಾಯವನ್ನು ಖಂಡಿಸುವ ಶಕ್ತಿ ನೀವಾಗಬೇಕು ಎಂದು ನುಡಿಯುತ್ತಿದ್ದರು, ಹಾಗಾಗಿ ಇವರಲ್ಲಿರುವ ಹೋರಾಟದ ಕಿಚ್ಚೆ ಯುವಕರಿಗೆ ಸ್ಫೂರ್ತಿ, ಇಂತಹ ವ್ಯಕ್ತಿ ಕೊಟ್ಟಿಗೊಬ್ಬರು ಅಂದರೂ ತಪ್ಪಾಗಲಾರದು.

ಅನ್ಯಾಯದ ವಿರುದ್ಧ ಸದಾ ಭಿತ್ತಿ ಪತ್ರ, ಕರಪತ್ರ, ಮನವಿ ಪತ್ರಗಳನ್ನು ಬರೆಯುವುದು ಅವರ ಬದುಕಿನ ಭಾಗವೇ ಆಗಿಹೋಗಿತ್ತು. ಅನ್ಯಾಯದ ವಿರುದ್ಧ ಅಲ್ಲೊಂದು ಕರಪತ್ರ, ಮನವಿ ಇದ್ದೇ ಇರುತಿತ್ತು. ಅಷ್ಟರ ಮಟ್ಟಿಗೆ ಅವರ ಚಳವಳಿ ಬದ್ದತೆ ಗಟ್ಟಿಯಾಗಿತ್ತು. ಚಳವಳಿ ಹಾಡುಗಳನ್ನು ಅಷ್ಟೇ ಗಟ್ಟಿಯಾಗಿ ಹಾಡುತ್ತಿದ್ದರು. ಅನ್ಯಾಯದ ವಿರುದ್ಧ ಸದಾ ಗುಡುಗುವ ಗಂಡುದೆಯ ಗಂಡು,  ದಲಿತ, ದಮನಿತರ ಕೂಗಾಗಿದ್ದರು. ತಾವರಗೇರಾದ ಆನಂದ ಭಂಡಾರಿ ಎಂಬ ದಲಿತ, ದಮನಿತರ ಮಹಾ ನಾಯಕನ ಕೂಗು ಇಂದು ನಿಂತ್ತು ಹೋಗಿರುವುದು ವಿಷಾದೀನಿಯ ಸಂಗತಿ.  ಮತ್ತೊಮ್ಮೆ ಹುಟ್ಟಿ ಬನ್ನಿ ದಮನಿತರ ಬಾಳಿಗೆ ಬೆಳಕಾಗಿ.!! ಆನಂದ ಭಂಡಾರಿ ಎನ್ನುವ ವ್ಯಕ್ತಿ ಅದು ನಮ್ಮೆಲ್ಲರ ಶಕ್ತಿ, ನಮ್ಮನ್ನ ಬಿಟ್ಟು ಹೋಗಿಲ್ಲ, ಅವರ ವಿಚಾರಧಾರೆಗಳನ್ನ ಇಲ್ಲಿಯೆ ಬಿಟ್ಟು ಹೋಗಿದ್ದಾರೆ ಅವರು ಎಂದಿಗೂ ಅಮರರು. ಅಮರ್ ಹೈ ಅಮರ್ ಹೈ, ಆನಂದ ಭಂಡಾರಿ ಅಮರ್ ಹೈ, ಜೈ ಭೀಮ್, ಲಾಲ್ ಸಲಾಮ್,,

ವರದಿ-ಸಂಪಾದಕೀಯಾ

Leave a Reply

Your email address will not be published. Required fields are marked *