ಬುದ್ದಂ, ಶರಣಂ, ಗಚ್ಛಾಮಿ ಸೇವಾ ಟ್ರಸ್ಟ್ (ರಿ) ಮತ್ತು ತಾಲೂಕು ಹೋರಾಟ ಸಮಿತಿ ತಾವರಗೇರಾವತಿಯಿಂದ ತಾವರಗೇರಾ ಪಟ್ಟಣವು ತಾಲೂಕು ಹೋರಾಟಕ್ಕಾಗಿ ನಮ್ಮ ಹೋರಾಟ. ನಮ್ಮ ಹಕ್ಕಿಗಾಗಿ ಹೋರಾಡೋಣ, ನಮ್ಮೂರು ನಮ್ಮ ಹೆಮ್ಮೆ. ಕುಷ್ಟಗಿ ತಾಲೂಕಿನಲ್ಲಿಯೆ ಬಹು ದೊಡ್ಡ ಹೋಬಳಿಯಾದ ತಾವರಗೇರಾ ಪಟ್ಟಣವು ಒಂದು. ತಾವರಗೇರಾ ಪಟ್ಟಣ ಸಾರ್ವಜನಿಕರ ಜೊತೆಗೆ ನಾವುಗಳು ಅಂದರೆ ಬುದ್ದಂ, ಶರಣಂ, ಗಚ್ಛಾಮಿ ಸೇವಾ ಟ್ರಸ್ಟ್ (ರಿ) ತಾವರಗೇರಾದಿಂದ ಹಲವು ವರ್ಷಗಳಿಂದ ತಾಲೂಕಿಗಾಗಿ ಶ್ರಮಿಸುತ್ತ ಬಂದಿರುತ್ತೆವೆ. ಆದರೆ ಇಲ್ಲಿ ತಾವರಗೇರಾ ಹೋಬಳಿಯನ್ನು ತಾಲೂಕ ಕೇಂದ್ರವನ್ನಾಗಿ ಘೋಸಿಸಲು ಸರ್ಕಾರ ಹಿಂದೇಟು ಹಾಕಿರುವುದನ್ನು ಖಂಡಿಸುತ್ತ ಇಂದು ತಾವರಗೇರಾ ಪ್ರಜ್ಞಾವಂತರಿAದ ಹಾಗೂ ತಾಲೂಕು ಹೋರಾಟಕ್ಕಾಗಿ ಈ ಸಮೀತಿ ರಚಿಸಲಾಗಿದೆ. ಸಾರ್ವಜನಿಕರ ಅನುಕೂಲಕ್ಕಾಗಿ ತಾವರಗೇರಾ ಪಟ್ಟಣವು ಸೂಕ್ತ ಸ್ಥಳವಾಗಿದೆ. ತಾವರಗೇರಾ ಹೋಬಳಿಗೆ ಸುಮಾರು ೫ ಗ್ರಾಮ ಪಂಚಾಯತಿಗಳು ಒಳಪಡುತ್ತವೆ. ೧) ಮೆಣೇದಾಳ ೨) ಲಿಂಗದಹಳ್ಳಿ ೩) ಸಂಗನಾಳ ೪) ಕಿಲ್ಲಾರಹಟ್ಟಿ ೫) ಜುಮಲಾಪೂರ ಇದರ ಜೊತೆ ಜೊತೆಗೆ ಪಕ್ಕದ ಕನಕಗಿರಿ ತಾಲೂಕಿನ ಹುಲಿಹೈದರ್ ಗ್ರಾಮ ಪಂಚಾಯತಿಯ ಸಂಪೂರ್ಣ ಹಳ್ಳಿಗಳು, ಮತ್ತು ಬೇರೆ ಜಿಲ್ಲೆ ಅಂದರೆ ಪಕ್ಕದ ಜಿಲ್ಲೆಯಾದ ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಕೆಲವೊಂದು ಗ್ರಾಮ ಪಂಚಾಯತಿಗಳು ೧) ಉಮಲೂಟಿ ಗ್ರಾಮ ಪಂಚಾಯತಿ. ೨) ಗುಂಡ ಗ್ರಾಮ ಪಂಚಾಯತಿ ಹಾಗೂ ಕಲಮಂಗಿ ಗ್ರಾಮ ಪಂಚಾಯತಿ ಮತ್ತು ಲಿಂಗಸೂಗೂರು ತಾಲೂಕಿನ ನಾಗಲಾಪೂರ ಗ್ರಾಮ ಪಂಚಾಯತಿ ಸಂಬಂದಿಸಿದ ಪ್ರತಿಯೊಂದು ಹಳ್ಳಿಗಳ ಸಾರ್ವಜನಿಕರು ಸಹ ತಾವರಗೇರಾ ಪಟ್ಟಣಕ್ಕೆ ಅವಲಂಬಿತರಾಗಿದ್ದಾರೆ. ತಾವರಗೇರಾ ತಾಲೂಕು ರಚನೆಗೆ ಇರುವ ಅಗತ್ಯತೆ ಹಾಗೂ ಮಾನದಂಡಗಳನ್ನು ಸಂಪೂರ್ಣ ಒಳಗೊಂಡಿರುತ್ತದೆ. ನಮ್ಮ ಹಕ್ಕನ್ನು ಮರಳಿ ಪಡೆಯಲು ನಾವು ಈ ಹೋರಾಟ ನಡೆಸುತ್ತಿದ್ದೇವೆ. ಮಾನದಂಡವಿಲ್ಲದ ಸಾಕಷ್ಟು ತಾಲೂಕು ರಚನೆಗೆ ಸರಕಾರ ಮುಂದಾಗಿದೆ. ಅದರಲ್ಲೂ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸ್ವತಃ ಮುತುವರ್ಜಿ ವಹಿಸಿ ಸುಮಾರು 9 ತಾಲೂಕು ರಚನೆಗೆ ಮುಂದಾಗಿದ್ದಾರೆ. ಆದರೆ, ಎಲ್ಲಾ ಅರ್ಹತೆ ಇದ್ದರೂ ತಾವರಗೇರಾ ತಾಲೂಕು ರಚನೆಗೆ ಸರಕಾರ ಏಕೆ ಮುಂದಾಗುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು. ತಾವರಗೇರಾ ಹೋಬಳಿಯನ್ನು ತಾಲೂಕಿನ ಮಾಜಿ ಮತ್ತು ಹಾಲಿ ನಾಯಕರು ಅಭಿವೃದ್ಧಿ ಮಾಡುವ ಬದಲು ತಮ್ಮ ಸ್ವಾರ್ಥಕ್ಕಾಗಿ ರಾಜಕಾರಣ ಮಾಡುತ್ತಿದ್ದಾರೆ. ಹೋಬಳಿಯಾಗಲೂ ಅರ್ಹವಲ್ಲದ ಕೆಲವೊಂದು ಹೋಬಳಿಯನ್ನು ತಾಲೂಕು ಮಾಡಿರುವುದು ಕಣ್ಣಮುಂದೆ ಸಾಕಷ್ಟು ಉದಾಹರಣೆಗಳು ಇವೆ. ಇದು ಸ್ವಾರ್ಥ ರಾಜಕಾರಣ ಅಲ್ವಾ. ನಾವುಗಳೇಲ್ಲಾ ಜಾತಿ ಮತ ಪಕ್ಷ ಭೇಧ ಮರೆತು ತಾವರಗೇರಾ ತಾಲೂಕು ಹೋರಾಟಕ್ಕೆ ಮುಂದಾಗೋಣ, ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಪ್ರಭಾವದಿಂದ ಕೆಲವೊಂದು ನೂತನ ತಾಲೂಕುಗಳು ರಚನೆಯಾದರೂ ಸಹ ಈ ನಮ್ಮ ಊರು ಮಾತ್ರ ತಾಲೂಕ್ಕಾಗಿ ಘೋಷಣೆಯಾಗಲಿಲ್ಲ, ಒಂದೆಡೆ ತಾಲೂಕು ರಚನೆಗಾಗಿ ಆಗ್ರಹಿಸಿ ಹೋರಾಟಕ್ಕೆ(Protest) ಮುಂದಾಗಿರೋ ಹೋರಾಟಗಾರರು, ಮತ್ತೊಂದೆಡೆ ಸರ್ಕಾರದ ವಿರುದ್ದ ಆಕ್ರೋಶ ವ್ಯಕ್ತಪಡಿಸಿ, ತಾಲೂಕು ರಚನೆಗಾಗಿ ಪಕ್ಷಾತೀತವಾಗಿ ಸೇರಿ ಒಕ್ಕೊರಲಿನಿಂದ ತಾಲೂಕು ರಚನೆಗಾಗಿ ಪಟ್ಟು ಹಿಡಿದ, ತಾವರಗೇರಾ ತಾಲೂಕು ಹೋರಾಟ ಸಮಿತಿ ಮತ್ತು ಬುದ್ದಂ, ಶರಣಂ, ಗಚ್ಛಾಮಿ ಸೇವಾ ಟ್ರಸ್ಟ್ (ರಿ) ತಾವರಗೇರಾ. ಪಟ್ಟು ಬಿಡದೆ ನಾವುಗಳೆಲ್ಲ ಒಂದಾಗಿ ಪಕ್ಷಾತೀತವಾಗಿ ಜಾತಿ, ಮತ ಮೀರಿ ಎಲ್ಲ ಮುಖಂಡರು ಒಂದಾಗಿ ಈ ಹೋರಾಟವನ್ನ ಆರಂಭಿಸಿದ್ದು ಇರುತ್ತದೆ. 1 ಲಕ್ಷ 40 ಸಾವಿರ ಜನಸಂಖ್ಯೆಯನ್ನ ಹೊಂದಿರೋ ತಾವರಗೇರಾ ತಾಲೂಕು ರಚನೆ ಮಾಡಲು ಎಲ್ಲ ಅರ್ಹತೆಗಳಿದ್ದು, ನಿತ್ಯವೂ ಲಕ್ಷಾಂತರ ಜನರಿಂದ ವ್ಯಾಪಾರ/ವಹಿವಾಟ ಸಹ ನಡೆಯುತ್ತಿದ್ದು, ಇದಕ್ಕಾಗಿ ತಾವರಗೇರಾವನ್ನ ತಾಲೂಕನ್ನಾಗಿ ಘೋಷಣೆ ಮಾಡುವಂತೆ ಹೋರಾಟ ನಡೆಸುವ ಅನಿವಾರ್ಯತೆ ಇದೆ. ಭೌಗೋಳಿಕವಾಗಿ ಮತ್ತು ಜನಸಂಖ್ಯೆ ಆಧಾರಿಸಿ ತಾವರಗೇರಾ ತಾಲೂಕು ರಚನೆಗೆ ಆಗ್ರಹ: ಹಲವು ಗ್ರಾಮ ಪಂಚಾಯಿತಿ, ಸುಮಾರು ಹಳ್ಳಿಗಳು ಸೇರಿದಂತೆ ಭೌಗೋಳಿಕವಾಗಿಯೂ ಸಹ ಸುತ್ತಮುತ್ತಲಿನ ಪ್ರದೇಶಗಳನ್ನೊಳಗೊಂಡು ತಾಲೂಕು ರಚನೆ ಮಾಡಲು ಅತ್ಯಂತ ಯೋಗ್ಯವಾಗಿದೆ ಅನ್ನೋದು ಇದೀಗ ನಮ್ಮ ಹೋರಾಟಗಾರರ ನಿಲುವಾಗಿದ್ದು, 1 ಲಕ್ಷ 40 ಸಾವಿರ ಜನಸಂಖ್ಯೆಯನ್ನೂ ಸಹ ಹೊಂದಿದೆ. ಸಾಲದ್ದಕ್ಕೆ ಜಿಲ್ಲೆಯಲ್ಲಿಯೇ ವ್ಯಾಪಾರ ವಹಿವಾಟಿಗೆ 2ನೇ ಸ್ಥಾನ ಪಡೆದಿದ್ದು, ನಿತ್ಯ ಕೋಟ್ಯಂತರ ವ್ಯವಹಾರ ನಡೆಯುತ್ತಲೆ ಬಂದಿದೆ. ಸುತ್ತಮುತ್ತಲಿನ ಭಾಗದ ಬಹುತೇಕ ಹಳ್ಳಿಗಳ ಜನರು ಸಹ ತಾವರಗೇರಾ ಪಟ್ಟಣಕ್ಕೆ ಬಂದು ಹೋಗ ಬೇಕಿರುವುದರಿಂದ ತಾವರಗೇರಾವನ್ನ ನೂತನ ತಾಲೂಕನ್ನಾಗಿ ಘೋಷಿಸಬೇಕು. ನಮ್ಮ ಈ ತಾಲೂಕ ಹೋರಾಟಗಾರರ ಬೆನ್ನಿಗೆ ನಿಂತು ಸಹಕರಿಸಬೇಕು. ಜೊತೆಗೆ ತಾವರಗೇರಾ ಪಟ್ಟಣವನ್ನು ತಾಲೂಕವನ್ನಾಗಿ ಘೋಷಿಸಲು ಸಹಕರಿಸಬೇಕೆಂದು ಬುದ್ದಂ, ಶರಣಂ, ಗಚ್ಛಾಮಿ ಸೇವಾ ಟ್ರಸ್ಟ್ (ರಿ) KSG-4-00126-2023-24 ಮತ್ತು ತಾಲೂಕು ಹೋರಾಟ ಸಮಿತಿ ತಾವರಗೇರಾವತಿಯಿಂದ ಮಾನ್ಯ ಸಚಿವರಿಗೆ ಶಿವರಾಜ ತಂಗಡಗಿ, ಹಿಂದುಳಿದ ವರ್ಗ್ಗಳ ಕಲ್ಯಾಣ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕೊಪ್ಪಳ, ಹಾಗೂ ಮಾನ್ಯ ಜಿಲ್ಲಾಧಿಕಾರಿಗಳಿಗು ಮನವಿ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ತಾಲೂಕು ಹೋರಾಟ ಸಮಿತಿ ಅಧ್ಯಕ್ಷರಾದ ರಾಜಾನಾಯಕ, ತಾಲೂಕು ಹೋರಾಟ ಸಮಿತಿ ಗೌರವಧ್ಯಕ್ಷರಾದ ಯಮನೂರಪ್ಪ ಬಿಳೆಗುಡ್ಡ, ಹಾಗೂ ಟ್ರಸ್ಟ್ ನ ಸರ್ವ ಸದಸ್ಯರು ಪಾಲ್ಗೊಂಡಿದ್ದರು.
ವರದಿ-ಸಂಪಾದಕೀಯಾ.