ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣ ಪಂಚಾಯತಿ ವ್ಯಾಪ್ತಿಗೆ ಬರುವ ಗರ್ಜನಾಳ ಗ್ರಾಮದ ಕೇವಲ ಒಂದು ಸಮಸ್ಯ ಅಲ್ಲ ಇದು. ಕರ್ನಾಟಕ ರಾಜ್ಯಾದ್ಯಾಂತ ಇರುವ ಗಂಭೀರ ಸಮಸ್ಯವಿದು, ಸದ್ಯ ಗರ್ಜನಾಳ ಗ್ರಾಮದವರು ಒಗ್ಗಟ್ಟಾಗಿ ಈ ಕುಡಿತದ ವಿರುದ್ದ ದಂಗೆ ಏರಿರುವುದು ಸಂತಸದ ವಿಷೆಯವಾಗಿದೆ. ಈ ಕೊರೊನಾದ ಮೊದಲನೆ ಅಲೆ ಮತ್ತು ಎರಡನೆಯ ಅಲೆಗೆ ಜನರು ತತ್ತರಿಸಿ ಹೋಗಿದ್ದಾರೆ. ಇಂತಹ ಕಠೀಣ ಸಂದರ್ಭದಲ್ಲಿ ನಿರ್ಗತಿಕರ ಕುಟುಂಬಗಳು ಜೀವನ ಸಾಗಿಸುವುದೇ ಒಂದು ದೊಡ್ಡ ಚಾಲೆಂಜ್ ಆಗಿ ಉಳಿದು ಬಿಟ್ಟಿದೆ. ಸದ್ಯ ಗರ್ಜನಾಳ ಗ್ರಾಮದಲ್ಲಿ ಹಲವಾರು ವರ್ಷಗಳಿಂದ ಸುಮಾರು 5-6 ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದಾರೆ, ಈ ವಿಷೆಯದ ಅಂಗವಾಗಿ ಸಾಕಷ್ಟು ಬಾರಿ ಕಿಲ್ಲಾರಹಟ್ಟಿ ಗ್ರಾಮ ಪಂಚಾಯತಿಯ ಅಭಿವೃದ್ದಿ ಅಧಿಕಾರಿಗಳ ಗಮನಕ್ಕೆ ತಂದರು, ಯಾವುದೆ ಕ್ರಮ ಕೈಗೊಂಡಿಲ್ಲ, ದಿನಸಿ ಅಂಗಡಿ, ಮುಗ್ಗಟ್ಟುಗಳಲ್ಲಿ ಅಕ್ರಮ ಮದ್ಯ ಮಾರಾಟದಿಂದ ಗ್ರಾಮದ ವೃದ್ದರು, ಯುವಕರು ಈ ಮದ್ಯ ವ್ಯಸನಕ್ಕೆ ಅಂಟಿಕೊಂಡು ತಮ್ಮ ಜೀವನ ಹಾಳು ಮಾಡಿಕೊಳ್ಳುವುದಲ್ಲದೆ ಎಷ್ಟೋ ಕುಟುಂಬಗಳು ಬೀದಿ ಪಾಲಗಾದ್ದಾವೆ. ಪ್ರತಿಯೊಂದು ಹಳ್ಳಿ/ಹಳ್ಳಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟದ ಪಿಡುಗು ಇನ್ನು ಜೀವಂತವಾಗಿದೆ, ಕುಡಿತದ ಅಮಲಿಗೆ ಬಲಿಯಾದ ಜೀವ ರಾಶಿಗಳ ಸಂಖ್ಯೆ ಎಷ್ಟೋ? ಜೊತೆಗೆ ಈ ಕುಡಿತದಿಂದ ಬಿದೀಗೆ ಬಿದ್ದ ಕುಟುಂಬಗಳು ಎಷ್ಟೋ? ಹಿಗೇ ಹೇಳುತ್ತ ಹೋದರೆ ಸಾಲದ ದಿನಗಳು, ಆದ್ದರಿಂದ ದಯಾಳುಗಳಾದ ತಾವುಗಳು ಈ ನಮ್ಮ ಮನವಿಯನ್ನು ಗಂಭಿರವಾಗಿ ಪರೀಶಿಲಿಸಿ ಕಡು/ಬಡವರು, ನಿರ್ಗತಿಕರ ಕುಟುಂಬಗಳಿಗೆ ನ್ಯಾಯ ಒದಗಿಸಿಕೊಡಬೇಕು ಎಂದು ಗರ್ಜನಾಳ ಗ್ರಾಮಸ್ಥರು ಮತ್ತು ನಗರ ಮತ್ತು ಗ್ರಾಮ ಸಬಲೀಕರಣ ಸಮಿತಿ ವತಿಯಿಂದ ತಾವರಗೇರಾ ಪಟ್ಟಣದ ಮಾನ್ಯ ಪಿ.ಎಸ್.ಐ.ಗಳಾದ ನಾಗರಾಜ ಕೊಟಗಿಯವರಿಗೆ ಮನವಿ ಪತ್ರ ಸಲ್ಲಿಸಲಾಯಿತು, ಇದೇ ರೀತಿ ಪ್ರತಿಯೊಂದು ಗ್ರಾಮಗಳಲ್ಲಿ ಈ ಅಕ್ರಮ ಮದ್ಯ ಮಾರಾಟದ ವಿರುದ್ದ ಉಗ್ರ ಹೋರಾಟ ನಡಿಯಲೇ ಬೇಕು, ಅಂದಾಗ ಮಾತ್ರ ತಡೆಗಟ್ಟಲು ಸಾದ್ಯ. ಈ ಸಂದರ್ಬದಲ್ಲಿ ಕಿಲ್ಲಾರಹಟ್ಟಿ ಗ್ರಾಮ ಪಂಚಾಯತ ಮಾಜಿ ಉಪಾಧ್ಯಕ್ಷರಾದ ರಾಘವೇಂದ್ರ ತೆಮ್ಮಿನಾಳ ಮತ್ತು ನಗರ ಮತ್ತು ಗ್ರಾಮ ಸಬಲೀಕರಣದ ರಾಜ್ಯ ಉಪಾಧ್ಯಕ್ಷರಾದ ಹನುಮೇಶ್ ಆರ್.ಜಿ.ಶ್ರೀಯವರು, ಶ್ರೀಮತಿ ಅಂಬಮ್ಮ, ದುರಗಮ್ಮ, ಮರಿಯಮ್ಮ, ನಾಗಮ್ಮ, ಯಲ್ಲಮ್ಮ ರಾಜಾಸಾಬ,ದುರಗಪ್ಪ, ನಾಗರಾಜ, ಹನುಮೇಶ್, ಛತ್ರಪ್ಪ, ಇತರರು, ಪಾಲ್ಗೊಂಡಿದ್ದರು.
ವರದಿ-ಉಪಳೇಶ್ ವಿ.ನಾರಿನಾಳ.