ಮಾ ನಿಷಾದ ಪ್ರತಿಷ್ಠಾಂ ತ್ವಮಗಮಃ ಶಾಶ್ವತೀಃ ಸಮಾಃ ।
ಯತ್ಕ್ರೌಂಚಮಿಥುನಾದೇಕಮವಧೀಃ ಕಾಮಮೋಹಿತಮ್॥
(ಶಾಶ್ವತತೆಯ ದೀರ್ಘ ವರ್ಷಗಳವರೆಗೆ ನೀವು ವಿಶ್ರಾಂತಿ ಪಡೆಯುವುದಿಲ್ಲ ಏಕೆಂದರೆ ನೀವು ಪ್ರೀತಿಯಲ್ಲಿ ಮತ್ತು ಅನುಮಾನಾಸ್ಪದವಾಗಿ ಪಕ್ಷಿಯನ್ನು ಕೊಂದಿದ್ದೀರಿ,)
ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣದಲ್ಲಿಂದು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು. ತಾವರಗೇರಾ ಪಟ್ಟಣದ ಸಮಸ್ತ ವಾಲ್ಮೀಕಿ ಸಮಾಜದವತಿಯಿಂದ ಪ್ರತಿ ವರ್ಷ ಆಚರಿಸುವಂತೆ ಈ ವರ್ಷವು ಸಹ ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು, ಪಟ್ಟಣದ ಶ್ರೀ ಮಹರ್ಷಿ ವಾಲ್ಮೀಕಿ ವೃತ್ತದಲ್ಲಿ ಪೂಜೆ ಕಾರ್ಯಕ್ರಮದೊಂದಿಗೆ ಚಾಲನೆ ನೀಡಿ, ಶ್ರೀ ಮಹರ್ಷಿ ವಾಲ್ಮೀಕಿ ವೃತ್ತದಿಂದ ಹಿಡಿದು ಪಟ್ಟಣದ ಮುಖ್ಯ ರಸ್ತೆ ಹಾಗೂ ನಾನಾ ಕಡೆ ಬೃಹತ್ ಮೆರವಣಿಗೆಯೊಂದಿಗೆ ಮಹಿಳೆಯರಿಂದ ಕುಂಬ ಮತ್ತು ಕಳಸದೊಂದಿಗೆ, ಈ ಕಾರ್ಯಾಕ್ರಮದ ಉದ್ದಕ್ಕೂ ಡೊಳ್ಳು ಬಡಿತದೊಂದಿಗೆ ಈ ಕಾರ್ಯಾಕ್ರಮಕ್ಕೆ ಚಾಲನೆ ನೀಡುವ ಮುಖಾಂತರ ಈ ಕಾರ್ಯಾಕ್ರಮಕ್ಕೆ ಮೆರಗು ತಂದರು.
ಮಹಾನ್ ಹಿಂದೂ ಮಹಾಕಾವ್ಯ ರಾಮಾಯಣವನ್ನು ಬರೆದ ಮಹರ್ಷಿ ವಾಲ್ಮೀಕಿಯವರ ಜನ್ಮದಿನದಂದು ವಾಲ್ಮೀಕಿ
ಪರ್ಗತ್ ದಿವಸ್ ಎಂದರೇನು?
ವಾಲ್ಮೀಕಿ ಜಯಂತಿಯನ್ನು ಪರ್ಗಟ್ ದಿವಸ್ ಎಂದೂ ಕರೆಯುತ್ತಾರೆ, ಅಲ್ಲಿ ಪರ್ಗಟ್ ಎಂದರೆ ಜನ್ಮ. ವಾಲ್ಮೀಕಿ ಜಯಂತಿಯನ್ನು ಮಹಾನ್ ಋಷಿ ಮತ್ತು ಅವರ ಮೌಲ್ಯಗಳು ಮತ್ತು ಸಾಮಾಜಿಕ ನ್ಯಾಯದ ಬೋಧನೆಗಳಿಗೆ ಗೌರವ ಸಲ್ಲಿಸಲು ಆಚರಿಸಲಾಗುತ್ತದೆ.
ವಾಲ್ಮೀಕಿ ತನ್ನ ಆರಂಭಿಕ ವರ್ಷಗಳಲ್ಲಿ ರತ್ನಾಕರ್ ಎಂಬ ಹೆದ್ದಾರಿ ಡಕಾಯಿಟ್ ಆಗಿದ್ದನೆಂಬ ಇನ್ನೊಂದು ಜನಪ್ರಿಯ ನಂಬಿಕೆಯಿದೆ. ಅವನು ನಾರದ ಮುನಿಯನ್ನು ಭೇಟಿಯಾದ ದಿನದವರೆಗೂ ಜನರನ್ನು ದರೋಡೆ ಮಾಡಿ ಕೊಲ್ಲುತ್ತಿದ್ದನು, ಅವನು ಅವನನ್ನು ಭಗವಾನ್ ರಾಮನ ಕಟ್ಟಾ ಭಕ್ತನಾಗಿ ಪರಿವರ್ತಿಸಿದನು. ವರ್ಷಗಳ ಕಾಲ ಧ್ಯಾನ ಮಾಡಿದ ನಂತರ, ಒಂದು ದೈವಿಕ ಧ್ವನಿಯು ಅವನ ತಪಸ್ಸು ಯಶಸ್ವಿಯಾಯಿತು ಮತ್ತು ಅವನಿಗೆ ವಾಲ್ಮೀಕಿ ಎಂಬ ಹೆಸರನ್ನು ನೀಡಿತು. ಸಂಸ್ಕೃತ ಸಾಹಿತ್ಯದ ಮೊದಲ ಕವಿ ಎಂಬ ಕಾರಣಕ್ಕಾಗಿ ಅವರನ್ನು ನಂತರ ಆದಿ ಕವಿ ಎಂದು ಗೌರವಿಸಲಾಯಿತು.
ವಾಲ್ಮೀಕಿಯ ಇತರೆ ಹೆಸರುಗಳು
ವಾಲ್ಮೀಕಿಯನ್ನು ಭಕ್ತರು ಬಾಲ್ಮೀಕಿ, ರತ್ನಾಕರ, ಲಾಲ್ ಬೇಗ್ ಮತ್ತು ಬಾಲಾ ಶಾ ಎಂದು ಕರೆಯುತ್ತಾರೆ. ಆದಿ ಕವಿ, ಮೊದಲ ಕವಿ ಮತ್ತು ಮಹರ್ಷಿಯಂತಹ ಕೆಲವು ಗೌರವಗಳನ್ನು ಸಹ ಅವರಿಗೆ ನೀಡಲಾಗಿದೆ. ಈ ಸಂದರ್ಭದಲ್ಲಿ ಊರಿಯನ ಗುರು/ಹಿರಿಯರು, ಶ್ರೀ ವಾಲ್ಮೀಕಿ ಜನಾಂಗದ ಹಿರಿಯರು, ಹಾಗೂ ಮಹಿಳೆಯರು ಮತ್ತು ಯುವಕರು, ಜೊತೆಗೆ ಮುದ್ದು ಮಕ್ಕಳು ಪಾಲ್ಗೋಂಡು ಶ್ರೀ ಮಹರ್ಷಿ ವಾಲ್ಮೀಕಿ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಯಿತು.
ವರದಿ-ಉಪಳೇಶ ವಿ.ನಾರಿನಾಳ.